ನಂದಿನಿ ಮೈಸೂರು
ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಮೈಸೂರು ಮಕ್ಕಳ ಅಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಎನ್ ಆರ್ ಮೊಹಲ್ಲಾದಲ್ಲಿರುವ ಶಾಲಿಮಾರ್ ಫಂಕ್ಷನ್ ಹಾಲ್ ಮುಂಭಾಗದಿಂದ ಆಯೋಜಿಸಿದ್ದ ಮಹಿಳಾ ಜಾಥಾಗೆ
ಮಾಧ್ಯಮ ಪತ್ರಕರ್ತೆ ನಂದಿನಿರವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಯೋಜನಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿ,ಮಹದೇವಸ್ವಾಮಿ,ಸಂಸ್ಥೆಯ ಸಂಘಟಿಕರು,ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.