ಅಪ್ಪಟ ಕನ್ನಡಿಗ ಎಂಬುದಕ್ಕೆ ಬಣ್ಣದಮನೆ ಸಾಕ್ಷಿ

*ನಂದಿನಿ ಮೈಸೂರು*

ಮಂಡ್ಯ

ಮನೆಯಲ್ಲಿ ಕನ್ನಡಾಂಭೆಗೆ ಪೂಜೆ
ಸಲ್ಲಿಸ್ತಿರೋ ಈ ಕನ್ನಡಾಭಿಮಾನಿಯ ಹೆಸರು
ಶಿವನಂಜು ಅಂತಾ.ಈತ ಮಂಡ್ಯ ಜಿಲ್ಲೆ ಶ್ರೀರಂಗ
ಪಟ್ಟಣ ತಾಲೂಕಿನ ಕುಪ್ಪೆದಡ ಗ್ರಾಮದ ನಿವಾಸಿ. ಈ ಕನ್ನಡಾಭಿಮಾನಿಯನ್ನು ಸುತ್ತಮುತ್ತಲ ಜನರು ಬಣ್ಣದ ಮನೆ ಶಿವನಂಜು ಅಂತಲೇ ಕರೆಯುತ್ತಾರೆ.ಯಾಕೆಂದ್ರೆ ಇವರ ಕನ್ನಡಪ್ರೇಮ ಅವರ ಮನೆಯನ್ನು ನೋಡಿದ್ರೆ ಗೊತ್ತಾಗುತ್ತೆ‌.

ಇವರು ತಮ್ಮ ಕನ್ನಡಾಭಿಮಾನಕ್ಕೆ ಮನೆಯೊಂ ದನ್ನ ಕಟ್ಟಿ ಆ ಮನೆಗೆ ಕೆಂಪು ಹಳದಿ ಬಣ್ಣದಿಂದ
ಸಿಂಗರಿಸಿದ್ದಾರೆ. ಅಲ್ದೆ ಆ ಮನೆಯಲ್ಲಿ ಕನ್ನಡಾಂಭೆಗೆ ಗರ್ಭಗುಡಿ ನಿರ್ಮಿಸಿಗೆ ಅಲ್ಲಿ ಪ್ರತಿನಿತ್ಯ ಕನ್ನಡತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುತ್ತಾ ಬರ್ತಿದ್ದಾರೆ.

ಇನ್ನು ಇವ್ರು ಕನ್ನಡಾಂಭೆಗಾಗಿ ನಿರ್ಮಿಸಿರುವ ಈ
ಮನೆಯಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ
ಗೈದ ಕುವೆಂಪು, ಮಾಸ್ತಿ ಅಯ್ಯಂಗಾರ್,ದರಾ ಬೇಂದ್ರೆ ಸೇರಿದಂತೆ ಹಲವು ಕನ್ಬಡ ಮಹಾನ್ ಕವಿಗಳು ಮತ್ತು ಸಾಧಕರ
ಫೋಟೋಗಳನ್ನು ಹಾಕಲಾಗಿದ್ದು,ಈ ಮಹಾನ್
ಸಾಧಕರ ಗ್ರಂಥಗಳು ಕೂಡ ಇವ್ರ ಮನೆಯಲ್ಲಿ
ಇಡಲಾಗಿದೆ‌. ಪ್ರತಿದಿನ ಕೂಡ ಈ ಕನ್ನಡಾಭಿಮಾ
ನಿ ತನ್ನ ಮನೆಯಲ್ಲಿರಿಸಿರುವ ಈ ಕನ್ನಡಾಂಭೆಗೆ
ನಿತ್ಯ ಪೂಜೆ ಸಲ್ಲಿಸುತ್ತಾ ಬರ್ತಿದ್ದಾರೆ.

ಅಲ್ದೆ ಪ್ರತಿ ವರ್ಷ ನವೆಂಬರ್ 1 ರಂದು ಮನೆಯ ಮುಂದೆ ಸ್ನೇಹಿತರೊಂದಿಗೆ ಕನ್ನಡ ರಾಜ್ಯೋತ್ಸವವನ್ನು
ಆಚರಿಸಿಕೊಂಡು ಬರ್ತಿದ್ದಾರೆ. ಇವ್ರ ಈ ಕನ್ನಡ
ಪ್ರೇಮವನ್ನು ಕಂಡು ಸ್ಥಳೀಯರು ಕೂಡ ಇವರ ಈ ಕನ್ನಡ ಸೇವೆಯನ್ನು‌ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಆತ ಅಪ್ಪಟ ಕನ್ನಡಾಭಿಮಾನಿ.ಆತನ
ಕನ್ನಡಾಭಿಮಾನಿಕ್ಕೆ ಆತ‌ ಕಟ್ಟಿರುವ ಈ ಮನೆಯೆ
ಸಾಕ್ಷಿ.ಈ‌ ಮನೆಯಲ್ಲಿ ನಿತ್ಯ ಕನ್ನಡಮ್ಮನಿಗೆ ಪೂಜೆ ಸಲ್ಲಿಸುತ್ತಾ ಸದ್ದಿಲ್ಲದೆ ಕನ್ನಡಮ್ಮನ ಸೇವೆ ಮಾಡ್ತಾ,ಮನೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ಸೇವೆಗೈದ ಮಹನೀಯರ ಭಾವಚಿತ್ರ ಹಾಕಿಸಿಕೊಂಡು ತನ್ನ ಮನೆಗೆ ಕನ್ನಡ ಬಾವುಟದ ಕೆಂಪು, ಹಳದಿ ಬಣ್ಣ ಬಳಸಿ ಮನೆಯನ್ನ ಕನ್ನಡದ ಬಣ್ಣದ ಮನೆಯಾಗಿಸಿಕೊಂಡು ಬಣ್ಣದ ಮನೆ ಶಿವನಂಜು ಎಂತಲೇ ಪ್ರಸಿದ್ದಿ ಪಡೆದಿದ್ದಾರೆ.

Leave a Reply

Your email address will not be published. Required fields are marked *