ಸ್ಟೋರಿ: ನಂದಿನಿ ಮೈಸೂರು (ಸಂದರ್ಶನ)
ಸಮಾಜ ಸೇವೆ ಅನ್ನೋದು ಸಾಮಾನ್ಯ ಕಾರ್ಯ ಅಲ್ಲ.ಸಮಾಜ ಸೇವೆ ಒಂದು ಕನ್ನಡಿ ಇದ್ದಂತೆ .
ಒಬ್ಬ ವ್ಯಕ್ತಿ ತಾನು ಮಾಡುವ ಸಮಾಜ ಸೇವೆಯಿಂದ ಜನರಿಗೆ ಅದೆಷ್ಟು ಉಪಯೋಗವಾಗುತ್ತದೇಯೋ ಏನೋ ಗೊತ್ತಿಲ್ಲ.ಧಣಿವಾದಾಗ ನೀರು ಕೊಟ್ಟವರನ್ನ,ಹಸಿದಾಗ ಒಂದು ತುತ್ತು ಅನ್ನ ಹಾಕಿದವರನ್ನ ಮರೆಯೋದಕ್ಕೆ ಆಗುವುದಿಲ್ಲ ಅಂತಹದ್ದರಲ್ಲಿ ಜೀವನಕ್ಕಾಗಿ ಸೂರಿ ಕೊಟ್ಟ ಮನೆ ಮನೆ ಮಾದೇಗೌಡರವರನ್ನ ಮೈಸೂರಿನ ಜನ ಮರೆಯೋದಕ್ಕೆ ಆಗುತ್ತಾ ಹೇಳಿ.
ನೋಡೋಕೆ ಯುವಕರಂತೆ ಕಾಣುವ ಮಾದೇಗೌಡರಿಗೆ ಬರೋಬರಿ 80 ವರ್ಷ.ನ್ಯಾಯಕ್ಕಾಗಿ ಹೋರಾಟ, ಸಮಾಜ ಸೇವೆ ,ರಾಜಕಾರಣ,ರಾಜಕೀಯ ಸ್ಥಾನಮಾನ,ಸೇವಾ ಕಾರ್ಯ ಎಲ್ಲದರಲ್ಲೂ ಹೆಸರು ಮಾಡಿರುವ ಮಾದೇಗೌಡರನ್ನು ಗುರುತಿಸಿದ ಬಿಜೆಪಿ ಸರ್ಕಾರ
2022ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡುವುದಕ್ಕೆ ಮುಂದಾಗಿದೆ.
ಮೈಸೂರಿನ ಮಾದೇಗೌಡರು
1942 ರಲ್ಲಿ ಜನಿಸಿದರು. ಪ್ರಾಥಮಿಕ,ಪ್ರೌಢ ಶಿಕ್ಷಣ ಮುಗಿಸಿದ ಮಾದೇಗೌಡರು
ಬಿ.ಎ. ಬಿ.ಎಲ್ ಮಾಡಿದ್ದರು.ಯುವಕರನ್ನು ಸೇರಿಸಿ ಸಂಘಟನೆ ಮಾಡಿದರು.ತಂದೆಯ ಹಾದಿಯನ್ನು ಅನುಸರಿಸಿದ ಮಾದೇಗೌಡ ಸೂರು ನೀಡುವ ಕ್ರಾಂತಿ ಮಾಡಿದರು.ಕುಂಬಾರಕೊಪ್ಪಲಿನ ದೊಡ್ಡತಮ್ಮಯ್ಯ ಮಾದೇಗೌಡರು ‘ಮನೆ ಮನೆ’ ಮಾದೇಗೌಡ ಎಂದೇ ದೊಡ್ಡ ಹೆಸರು ಮಾಡಿದರು.
ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ (ಸಿಐಟಿಬಿ- ಈಗಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರಾಗಿದ್ದಾಗ ಪ್ರತಿಯೊಬ್ಬರಿಗೂ ತಲೆಯ ಮೇಲೊಂದು ಸೂರು ಕೊಡಬೇಕು ಎಂಬ ಉದ್ದೇಶದಿಂದ ಆಶಾಮಂದಿರ ಯೋಜನೆ ರೂಪಿಸಿ, ಎಲ್ಲಾ ವರ್ಗದ ಜನರ ಮನೆ ಮನೆ ಬಾಗಿಲಿಗೆ ತೆರಳಿ, ಹಾಗೂ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಕ್ರಾಂತಿಯನ್ನೇ ಮಾಡಿದರು.
1999 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾದರು. ಹೀಗಾಗಿ ಮಾದೇಗೌಡರು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾದರು.ಡಿ. ಮಾದೇಗೌಡರಿಗೆ ಎಸ್.ಎಂ. ಕೃಷ್ಣ ಅವರು ವಿಧಾನಸಭೆಯಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿದರು. ಮಾದೇಗೌಡರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕುಂಬಾರಕೊಪ್ಪಲಿನಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕ ನಡೆಸುತ್ತಾ, ಯೂತ್ ಹಾಸ್ಟೆಲ್ ಮತ್ತಿತರ ಕಡೆ ಸಕ್ರಿಯರಾಗಿದ್ದಾರೆ.
ಅಂಬಿಗರಹಳ್ಳಿ ಸಂಗಾಪುರ ಪುರ ಗ್ರಾಮಗಳ ಬಳಿ ಇರುವ ಕಾವೇರಿ ಹೇಮಾವತಿ ಲಕ್ಷ್ಮಣತೀರ್ಥ ನದಿಗಳ ತ್ರಿವೇಣಿ ಸಂಗಮದಲ್ಲಿ ಶ್ರೀ ಮಹೇಶ್ವರ ಕುಂಭಮೇಳ ನಡೆಸಿದ್ದಾರೆ.ಮಲೆ ಮಹದೇಶ್ವರ ಬೆಟ್ಟದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.ಈಗಾಗಲೇ ಹಲವಾರೂ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಮಾದೇಗೌಡರಿಗೆ ರಾಜ್ಯೋತ್ಸವ ಗರಿ ಲಭಿಸುತ್ತಿದೆ.ತಂದೆಯವರ ಹಾದಿಯನ್ನ ಸ್ಪೂರ್ತಿಯಾಗಿಟ್ಟುಕೊಂಡಿರುವ 80ರ ಮಾದೇಗೌಡರು ಇನ್ನೂ ಸಮಾಜಕ್ಕೆ ಮತ್ತಷ್ಟು ಸೇವೆ ಸಲ್ಲಿಸಬೇಕೆಂದು ಬಯಸುತ್ತಿದ್ದಾರೆ.
ಯಾವುದೂ ಅಸಾಧ್ಯವಲ್ಲ ಎಲ್ಲವೂ ಸಾಧ್ಯ.ಯಾರೇ ಅಧಿಕಾರಕ್ಕೆ ಬರಲಿ ಜನರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ತರಬೇಕು.ಇತ್ತೀಚೆಗೆ ಜನರಿಗೆ ಅನುಕೂಲ ಮಾಡುತ್ತೇವೆ ಎಂದು ಆಸ್ವಾಸನೆ ಕೊಡ್ತಾರೆ.ಪತ್ರಿಕಾ ಹೇಳಿಕೆ,ಮಾಧ್ಯಮಗಳ ಮುಂದೆ ಭಾಷಣ ಮಾಡುತ್ತಾರೆ ಹೊರತು ಅದನ್ನ ಅನುಷ್ಠಾನಕ್ಕೆ ತರುವುದಿಲ್ಲ.ಯೋಜನೆಗಳು ಕಾರ್ಯರೂಪಕ್ಕೆ ಬರಲಿ ಎಂದರಲ್ಲದೇ,ನನಗೆ ಪ್ರಶಸ್ತಿ ಏನು ಹೊಸದಲ್ಲ. ಪ್ರಶಸ್ತಿಗಾಗಿ ಯಾರೋ ಸಮಾಜ ಸೇವೆ ಮಾಡಬಾರದು.80 ವರ್ಷಕ್ಕೆ ನನಗೆ ರಾಜ್ಯೋತ್ಸವ ನೀಡುತ್ತಿದ್ದಾರೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರ ಸರ್ಕಾರ ನನ್ನನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದರು.
-ಡಿ. ಮಾದೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರು