ಮೈಸೂರು : 24 ಆಗಸ್ಟ್ 2021
ನ@ದಿನಿ
ಕೋವಿಡ್ ನಿಂದ ಸಂಕಷ್ಟದಲ್ಲಿರುವ ಅಸಂಘಟಿತ
ಸವಿತಾ ಸಮಾಜದವರಿಗೆ ಆಹಾರ ಕಿಟ್ ವಿತರಿಸಲಾಯಿತು.
ಮೈಸೂರಿನ ತಿಲಕ್ ನಗರದಲ್ಲಿ
ಕಟ್ಟಡ ಕಾರ್ಮಿಕ ಇಲಾಖೆಯ ಆಯುಕ್ತರಾದ ರಾಜೇಶ್ ಜಾದವ್ ಆಹಾರ ಕಿಟ್ ವಿತರಿಸಿದರು.
ಇದೇ ಸಂದರ್ಭ ರಾಜೇಶ್ ಜಾದವ್ ಮಾತನಾಡಿ
ಮೈಸೂರಿನಲ್ಲಿ ಮೊದಲ ಕೋವಿಡ್ ಅಲೆಯಲ್ಲಿ ಕ್ಷೌರಿಕ,ಮಡಿವಾಳ ಜನರಿಗೆ ಸರ್ಕಾರ 5 ಸಾವಿರ ಪರಿಹಾರವನ್ನ ಸರ್ಕಾರ ನೀಡುವಂತೆ ಸರ್ಕಾರ ಆದೇಶ ಮಾಡಿತ್ತು.ಅದರಂತೆ ಹಣವನ್ನ ಖಾತೆಗೆ ಹಾಕಿದ್ದೇವೆ.ಎರಡನೇ ಅಲೆಯಲ್ಲಿ ಆಹಾರ ಕಿಟ್ ವಿತರಿಸಲು ಆದೇಶಿಸಿದೇ ಈ ನಿಮಿತ್ತ ಪ್ರತಿ ತಾಲೂಕಿಗೆ ಆಹಾರ ಕಿಟ್ ವಿತರಿಸಿದ್ದೇವೆ. ಸರ್ಕಾರ ಕೊಟ್ಟ ಆಹಾರ ಕಿಟ್ಟುಗಳನ್ನ ಸಮಾನಾಗಿ ಹಂಚಿದ್ದೇನೆ.ಕಡು ಬಡವರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ.ಸುರಕ್ಷತಾ ಕಿಟ್ ಕೂಡ ವಿತರಿಸಲಿದ್ದೇವೆ.ಕಾರ್ಮಿಕರಿಗೆ ಏನಾದರೂ ಸಮಸ್ಯೆ ಇದ್ದಲ್ಲಿ ನನ್ನನ್ನ ನೇರವಾಗಿ ಭೇಟಿಯಾಗಬಹುದು ಎಂದು ಆಹ್ವಾನಿಸಿದರು.
ಅಸಂಘಟಿತ ಕಾರ್ಮಿಕರ ಕಾರ್ಡ್ ನೀಡುವಂತೆ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್ ಆರ್ ನಾಗೇಶ್ ಮನವಿ ಮಾಡಿದರು.
ಸವಿತ ಸಮಾಜದಿಂದ ರಾಜೇಶ್ ಜಾದವ್ ರವರಿಗೆ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ಕಾರ್ಯದರ್ಶಿ ಹರೀಶ್ ರೆಡ್ಡಿ,ರಾಜು ರೆಡ್ಡಿ ,ಪ್ರೇಮ್ ಕುಮಾರ್ ,ಶ್ರೀನಿವಾಸ್,ಶಂಕರ್, ಮಹೇಶ್,ಶ್ರೀಧರ್, ಸಂತೋಷ್,ಪ್ರಸನ್ನ
ಚರಣ್ ರಾಜ್ ಹಾಜರಿದ್ದರು.