ಮೈಸೂರು:22 ಸೆಪ್ಟೆಂಬರ್ 2022
ನಂದಿನಿ ಮೈಸೂರು
ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಮಕ್ಕಳಿಗೆ ಪ್ರವಾಸಿಗರಿಗೆ ಮನರಂಜನೆ ನೀಡಲು ಸೆ.24 ರಂದು ಗ್ರೇಟ್ ಬಾಂಬೆ ಸರ್ಕಸ್ ಆರಂಭವಾಗುತ್ತಿದೆ ಎಂದು ಸರ್ಕಸ್ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ನಾಗೇಶ್ ತಿಳಿಸಿದರು.
5 ವರ್ಷಗಳ ನಂತರ ಇಥಿಯೋಪಿಯನ್ , ರಷ್ಯನ್ ಕಲಾವದರಿಂದ ನೂತನ ಸಾಹಸ , ಹಾಸ್ಯ ವೈಭವೀಕರಣದೊಂದಿಗೆ ಈ ಬಾರಿಯೂ ಜೂ ಹಿಂಭಾಗ ಕಾರಂಜಿಕೆರೆ ಬಳಿ
ಗ್ರೇಟ್ ಬಾಂಬೆ ಸರ್ಕಸ್ ಪ್ರದರ್ಶನಗೊಳ್ಳುತ್ತಿದೆ.ಸೆ.24 ರಂದು ಮೈಸೂರಿನ ರಾಜಮಾತೆ ಪ್ರಮೋದಾ ದೇವಿ ಒಡೆಯರ್,ಯದುವೀರ್ ರವರು,ಮುಖ್ಯ ಅಥಿತಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್,ಸಂಸದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್,ಉಪಮೇಯರ್ ರೂಪ,ಶಾಸಕರು,ಪಾಲಿಕೆಯ ಸದಸ್ಯರು ಆಗಮಿಸಲಿದ್ದಾರೆ. ಮಧ್ಯಾಹ್ನ 1 ,ಸಂಜೆ 4,ರಾತ್ರಿ 7 ಗಂಟೆಗೆ ದಿನಕ್ಕೆ ಮೂರು ಪ್ರದರ್ಶನ ಆಯೋಜಿಸಲಾಗಿದೆ.ಮುಂದಿನ ದಿನಗಳಲ್ಲಿ ಬೆಳಗ್ಗೆ 10 ಕ್ಕೆ ಪ್ರದರ್ಶನಕ್ಕೆ ಚಿಂತಿಸಲಾಗಿದೆ.ಶಕ್ತಿಧಾಮದ ಮಕ್ಕಳಿಗೆ ಉಚಿತವಾಗಿ ಸರ್ಕಸ್ ನೋಡಲು ಅವಕಾಶ ಮಾಡಿಕೊಡಲಾಗಿದೆ.ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಸರ್ಕಸ್ ನೋಡಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಮಾಲೀಕರಾದ ಸಂಜೀವ್,
ಪಿ ಆರ್ ಓ ಪ್ರೇಮ್ ನಾಥ್ ಜೊತೆಯಲ್ಲಿದ್ದರು.