ನಂದಿನಿ ಮೈಸೂರು
ಗುಂಡೂರಾವ್ ಅಭಿಮಾನಿ ಬಳಗ ವತಿಯಿಂದ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಪುಣ್ಯಸ್ಮರಣೆ ಅಂಗವಾಗಿ ಹುಣಸೂರು ರಸ್ತೆಯಲ್ಲಿರುವ ಕಲಾಮಂದಿರ ಆವರಣದಲ್ಲಿ ಗುಂಡೂರಾವ್ ನೆನಪು ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಗುಂಡೂರಾವ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಗರಾಧ್ಯಕ್ಷ ಆರ್ ಮೂರ್ತಿ
ಗುಂಡುರಾಯರ ಕೊಡುಗೆ ಕರ್ನಾಟಕ ರಾಜ್ಯಕ್ಕೆ ಅಪಾರ ಬಡವರ್ಗದ ಮನೆಗೆಳಲ್ಲಿ ಸರ್ಕಾರಿ ಕೆಲಸ ನೀಡುವ ಮೂಲಕ ಅವರ ಜೀವನದ ಆರ್ಥಿಕ ಪರಿಸ್ಥಿತಿ ನಂದಾದೀಪವಾಗಿ ಲಕ್ಷಾಂತರ ಮಂದಿ ಸ್ವಾಭಿಮಾನಿಯಾಗಿ ದುಡಿಯಲು ಪ್ರೇರೇಪಿಸಿದವರೇ ಗುಂಡುರಾಯರು, ಪೇಕಮಿಷನ್ ಜಾರಿಗೆ ತಂದರು ಮತ್ತು ರಾಜಧಾನಿಯೆಂದರೆ ಕೇಂದ್ರ ರೈಲ್ವೆ ನಿಲ್ದಾಣದ ಪಕ್ಕದಲ್ಲೇ ನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣ ಸ್ಥಾಪಿಸುವ ಸಾರಿಗೆ ಯೋಜನೆ ಏಷ್ಯಾದಲ್ಲೆ ಪ್ರಪ್ರಥಮ ಮಹತ್ವದ ಪಡೆಯಿತು, ಕುಗ್ರಾಮದಲ್ಲಿರುವ ಬಡವರಿಗೆ ಉಚಿತವವಿದ್ಯುತ್ ಯೋಜನೆ, ಬೆಂಗಳೂರಿಗೆ ಕಾವೇರಿ ನೀರು ಸಮರ್ಪಕ ಪೂರೈಕೆ, ಸೇರಿದಂತೆ ಸಾಕಷ್ಟು ಜನಪರ ಯೋಜನೆ ಮುಖ್ಯಮಂತ್ರಿಯಾಗಿ ಅನುಷ್ಠಾನಗೊಳಿಸಿದ್ದಾರೆ ಎಂದರು.
ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ಮಾತನಾಡಿ
ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ಯಶಸ್ವಿಯಾಗಿ ನೆರವೇರಲು ಗುಂಡುರಾಯರ ಚಿಂತನೆ ಮತ್ತು ತಾಂತ್ರಿಕ ಪರಿಕಲ್ಪನೆ ಬಹಳಷ್ಟಿದೆ ಮೈಸೂರಿನಲ್ಲಿ ಬ್ರಿಟಿಷ್ ಆಳ್ವಿಕೆ ರಾಜಾಶ್ರಯವಿದ್ದಾಗ ಬಹಳಷ್ಟು ಕಟ್ಟಡಗಳು ನಿರದಮಾಣವಾದವು ಆದರೆ ಪ್ರಜಾಪ್ರಭುತ್ವ ಬಂದ ನಂತರ ಕಲಾಮಂದಿರವೇ ಮೊದಲ ಕಟ್ಟಡ ಕನ್ನಡಕ್ಕಾಗಿ ಸ್ಥಾಪನೆಯಾಗಿದ್ದು ಅದಕ್ಕೆ ಕೆಲವರು ಎಷ್ಟೇ ವಿರೋಧಿಸಿದರೂ ಸಹ ಸಾಂಸ್ಕೃತಿಕ ರಾಜಧಾನಿಯಲ್ಲಿ ಕನ್ನಡ ಭಾಷೆ ಕಲೆ ಸಾಹಿತ್ಯ ಜನಪದ ಶೈಲಿಯ ಅಸ್ಥಿತ್ವ ಉಳಿಯಲು ಗುಂಡುರಾಯರ ದಿಟ್ಟ ನಡೆ ಮುಖ್ಯಕಾರಣ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್ ರವರು ಮಾತನಾಡಿ ಕುಶಾಲನಗರದಲ್ಲಿ 24ನೇ ವಯಸ್ಸಿನಲ್ಲಿಯೇ ಪುರಸಭೆಯ ಅಧ್ಯಕ್ಷನಾಗಿ ಗೆದ್ದು ರಾಜ್ಯದ ಮುಖ್ಯಮಂತ್ರಿಯಾಗಿ ವಿಧಾನಸಭೆಯವರೆಗೂ ಬೆಳೆದ ಗುಂಡೂರಾಯರು ತಾವು ಬೆಳೆದು ತಮ್ಮ ಜೊತೆಯಿರುವವರನ್ನು ವಿವಿಧ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ತಂದವರು, ದಿ. ಆರ್ ಗುಂಡೂರಾರಯರ ಮಾರ್ಗದರ್ಶನದಲ್ಲಿಯೇ ಅವರ ಸುಪುತ್ರ ಶಾಸಕರಾದ ದಿನೇಶ್ ಗುಂಡೂರಾವ್ ರವರು ಜನಮಾನಸದಲ್ಲಿ ಉಳಿಯುವಂತೆ ಅಭಿವೃದ್ಧಿ ಕೆಲಸಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಗರ ಉಪಾಧ್ಯಕ್ಷ ರಾಜಾರಾಂ ರವರು ಮಾತನಾಡಿ
ಕರ್ನಾಟಕ ಕಲಾಮಂದಿರ ಇವತ್ತಿಗೂ ರಾಜ್ಯದ ದೊಡ್ಡ ಕಲಾಸಭಾಂಗಣ ಎಂದು ಹಿರಿಮೆ ಪಡೆದಿದೆ ಎಂದರು,
ದೇವಸ್ಥಾನದಲ್ಲಿ ಕೆಲಸ ಮಾಡುವ ಅರ್ಚಕರಿಗೆ ಪುರೋಹಿತರಿಗೆ ತಸ್ಥಿಕ್ ಯೋಜನೆ ಜಾರಿಗೆ ತಂದದ್ದೆ ಗುಂಡುರಾಯರು, ಶಿಕ್ಷಣ ಸಾಂಸ್ಕತಿಕ ಧಾರ್ಮಿಕ ಸಾಮಜಿಕ ಕ್ಷೇತ್ರಗಳ ಸಂಘ ಸಂಸ್ಥೆಗಳಿಗೆ ಅತಿ ಹೆಚ್ಚು ನಿವೇಶನ ಮಂಜೂರು ಮಾಡಿದಲ್ಲದೇ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕಾರಣರಾದರು, ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಧಾರ್ಮಿಕ ಕ್ಷೇತ್ರವಾಗಿ ಪ್ರವಾಸಿತಾಣವಾಗಿ ಗುಂಡುರಾಯರ ಕಾಲದಲ್ಲಿ ವಿಶ್ವವಿಖ್ಯಾತವಾಯಿತು, ವಿಧಾನಸೌದಧಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದ 70ಕ್ಕೂ ಹೆಚ್ಚು ಶಾಸಕರು ಗುಂಡರಾಯರ ಗರಡಿಯವರು ಎಂದು ಕರೆಯಲ್ಪಡುತ್ತಿದ್ದರು ಗುಂಡುರಾಯರ ಕನಸು ಕರ್ನಾಟಕ ಕಲಾಮಂದಿರ ಇಂದಿಗೆ ಲಕ್ಷಾಂತರ ಕಲಾವಿದರ ಪಾಲಿಗೆ ಕಲಾ ಪ್ರದರ್ಶನ ಪರಿಚಯ ದುಡಿಮೆಯ ದಾರಿ ನೀಡಿದೆ ಕಲಾಮಂದಿರದಲ್ಲಿ ಗುಂಡುರಾಯರ ಪ್ರತಿಮೆಯನ್ನು ಸ್ಥಾಪಿಸುವಲ್ಲಿ ರಾಜ್ಯಸರ್ಕಾರ ಕನ್ನಡ ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಆನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಜಾರಾಮ್ ರವರು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ರವರ ಪ್ರತಿಮೆಯನ್ನ ಗುಂಡೂರಾವ್ ನಗರದಲ್ಲಿ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್ ಮೂರ್ತಿ ,ಉಪಾಧ್ಯಕ್ಷರಾದ ರಾಜರಾಮ್ , ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ,
ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ,ಕೆಪಿಸಿಸಿ ಸದಸ್ಯರಾದ ವೀಣಾ ,ಗುಂಡೂರಾವ್ ಅಭಿಮಾನಿ ಬಳಗದ ಅಧ್ಯಕ್ಷ ವಿನಯ್ ಕಣಗಾಲ್ ,ಅಜಯ್ ಶಾಸ್ತ್ರಿ ,ವಿದ್ಯಾ ,ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಸುನಿಲ್ ನಾರಾಯಣ್ ,ರವಿ ನಾಯಕ್ ,ಚಂದ್ರು ಹಾಗೂ ಇನ್ನಿತರರು ಹಾಜರಿದ್ದರು.