ಹೆಚ್.ಡಿ.ಕೋಟೆ:15 ಆಗಸ್ಟ್ 2022
ನಂದಿನಿ ಮೈಸೂರು
ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಪ್ರಾರಂಭವಾದ ಅಮೃತ ಸರೋವರ ಅಭಿಯಾನದಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲಕ ತಾಲ್ಲೂಕಿನಲ್ಲಿ ಆಯ್ಕೆಯಾಗಿ ಅಭಿವೃದ್ಧಿಪಡಿಸಲಾದ ಅಮೃತ ಸರೋವರ ಕೆರೆಗಳ ದಂಡೆಯಲ್ಲಿ ಇಂದು ತ್ರಿವರ್ಣ ಧ್ವಜ ಹಾರಿಸಲಾಯಿತು.
ತಾಲ್ಲೂಕಿನ ಚಕ್ಕೋಡನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೆ.ಜಿ.ಹುಂಡಿ, ಸವ್ವೆ ಗ್ರಾ.ಪಂ.ನ ಕೊಡಸೀಗೆ, ತುಂಬಸೋಗೆ ಗ್ರಾ.ಪಂ ವ್ಯಾಪ್ತಿಯ ಸಾತನಕಟ್ಟೆ ಹಾಗೂ ಹೊಮ್ಮರಗಳ್ಳಿ ಗ್ರಾ.ಪಂ.ನ ಕರಿಗಾಳ ಕೆರೆಗಳ ದಡದಲ್ಲಿ ಆ ಗ್ರಾಮದ ಹಿರಿಯ ನಾಗರೀಕರು, ನಿವೃತ್ತ ಯೋಧರು ಧ್ವಜಾರೋಹಣ ಮಾಡುವ ಮೂಲಕ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಲಾಯಿತು. ಜತೆಗೆ ಕೆರೆಯ ದಡಗಳಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.
ಕೆ.ಜಿ.ಹುಂಡಿ ಕೆರೆಯ ದಂಡೆಯಲ್ಲಿ ಹಿರಿಯರಾದ ಕೆಂಚನಾಯ್ಕ ಅವರು ಧ್ವಜಾರೋಹಣ ಮಾಡಿದರು. ಬಳಿಕ ಮಾತನಾಡಿ ಅವರು, ಪಾಳು ಬಿದ್ದಿದ ಕೆರೆಯನ್ನು ಗ್ರಾಮ ಪಂಚಾಯಿತಿ ವತಿಯಿಂದ ಅಭಿವೃದ್ಧಿ ಪಡಿಸಿರುವುದರಿಂದ ತುಂಬಾ ಸಂತಸವಾಗಿದೆ. ಈಗ ಮೆಳೆಯಿಂದ ಕೆರೆಯಲ್ಲಿ ನೀರು ತುಂಬಿದ್ದು, ಕೃಷಿ, ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ. ನನ್ನನ್ನು ಬಾವುಟ ಹಾರಿಸಲು ನೇಮಿಸಿರುವುದರಿಂದ ಸಂತಸವಾಗಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಸವ್ವೆ ಗ್ರಾ.ಪಂ.ನ ಕೊಡಸೀಗೆ ಕೆರೆ ದಡದಲ್ಲಿ ಗ್ರಾಮದ ಹಿರಿಯರಾದ ಲಿಂಗೇಗೌಡ, ತುಂಬಸೋಗೆ ಗ್ರಾ.ಪಂ ಸಾತನಕಟ್ಟೆ ಕೆರೆ ದಡದಲ್ಲಿ ಮಾಜಿ ಸೈನಿಕ ಗುರುಸ್ವಾಮಿ ಹಾಗೂ ಹೊಮ್ಮರಗಳ್ಳಿ ಗ್ರಾ.ಪಂ.ವ್ಯಾಪ್ತಿಯ ಕರಿಗಾಳ ಕೆರೆಯ ದಡದಲ್ಲಿ ನಿವೃತ್ತ ಯೋಧ ಪ್ರಕಾಶ್ ಅವರುಗಳು ಧ್ವಜಾರೋಹಣ ಮಾಡಿದರು.
ಸರಗೂರು ತಾಲ್ಲೂಕಿನ ಹೆಗ್ಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಮೃತ ಸರೋವರದಡಿ ಅಭಿವೃದ್ಧಿ ಪಡಿಸುತ್ತಿರುವ ಕಾಟವಾಳು ಕೆರೆಯ ಆವರಣದಲ್ಲಿ ಗ್ರಾಮದ ಹಿರಿಯರಾದ ವೀರಭದ್ರಯ್ಯ ಅವರು ಧ್ವಜಾರೋಹಣ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜೆರಾಲ್ಡ್ ರಾಜೇಶ್, ಸಹಾಯಕ ನಿರ್ದೇಶಕರಾದ(ಗ್ರಾಉ) ಕಿರಣ್ ಜಹಗೀರ್ ದಾರ್, ತಾಲ್ಲೂಕು ಯೋಜಾನಾಧಿಕಾರಿ ರಂಗಸ್ವಾಮಿ, ಚಕ್ಕೋಡನಹಳ್ಳಿ ಗ್ರಾ.ಪಂ.ಅಧ್ಯಕ್ಷರಾದ ಕಾಳಿಂಗೇಗೌಡ, ಗ್ರಾ.ಪಂ.ಸದಸ್ಯರಾದ ಸಣ್ಣಸ್ವಾಮಿ ನಾಯ್ಕ, ರಾಜೇಗೌಡ, ನಿಜಗುಣ ನಾಯಕ್, ಲಕ್ಷ್ಮಿ, ಪಾರ್ವತಿ, ಚಕ್ಕೋಡನಹಳ್ಳಿ ಪಂಚಾತಿಯಿ ಅಭಿವೃದ್ಧಿ ಅಧಿಕಾರಿ ರವಿ, ತಾಂತ್ರಿಕ ಸಂಯೋಜಕ ಶರತ್, ತಾಂತ್ರಿಕ ಸಹಾಯಕ ಅಭಿಯಂತರ ಶರತ್, ಐಇಸಿ ಸಂಯೋಜಕ ನಿಂಗರಾಜು, ನರೇಗಾ ವಿಷಯ ನಿರ್ವಾಹಕ ಪುರುಷೋತ್ತಮ್, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.