ಮೈಸೂರು:20 ಆಗಸ್ಟ್ 2021
ನಂದಿನಿ
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಬಡವರಾಗಿಬಿಟ್ಟಿದ್ದಾರೆ. ಜನರಿಗೆ ಬಡತನ ಉಡುಗೊರೆ ಕೊಟ್ಟಿದ್ದು ಕೋರೋನಾ ಮಹಾಮಾರಿ.ಕೋರೋನಾ ಕಟ್ಟಿ ಹಾಕಲೂ ಕೋವಿಡ್ ನಡುವೆಯೂ ಸರಳ ,ಸಾಂಪ್ರದಾಯಿಕವಾಗಿ ಬಾರಮ್ಮಾ ಬಡವರ ಮನೆಗೆ ನೀ ದಯೆಮಾಡಮ್ಮಾ…… ಲಕ್ಷ್ಮೀ ಮಹಾಲಕ್ಷ್ಮಿ …ಲಕ್ಷ್ಮೀ ಮಹಾಲಕ್ಷ್ಮಿ….ಅಂತ ವರಮಹಾಲಕ್ಷ್ಮೀಯನ್ನ ಮನೆಗೆ ಆಹ್ವಾನಿಸುತ್ತಿರುವ ದೃಶ್ಯ ಕಂಡು ಬಂತು .
ಹೌದು ,ಶಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮೀಯನ್ನ ಪೂಜಿಸಲಾಗುತ್ತಿದೆ. ಸಂತಾನ, ಸೌಭಾಗ್ಯ, ಸಂಪತ್ತು ಕರುಣಿಸುವಂತೆ ಪ್ರಾರ್ಥಿಸಿ ಆಚರಿಸುವ ವರಮಹಾಲಕ್ಷ್ಮಿ ಹಬ್ಬ ಶುಕ್ರವಾರ ಶ್ರದ್ಧಾಭಕ್ತಿಯಿಂದ ನಡೆಯಿತು.ಮೈಸೂರಿನ ಉದಯಗಿರಿ ನಾಗರಾಜು ಅನ್ನಪೂರ್ಣ ದಂಪತಿ ಹಾಗೂ ಯಶಸ್ವಿನಿ ದಿನೇಶ್ ದಂಪತಿ ಮನೆಯಲ್ಲಿ ಹತ್ತಾರು ವರ್ಷಗಳಿಂದ ವರಮಹಾಲಕ್ಷ್ಮಿ ಪೂಜೆ ಮಾಡಿಕೊಂಡು ಬಂದಿದ್ದು ಕೋವಿಡ್ ಕಾರಣಕ್ಕೆ ಈ ವರ್ಷ ಸರಳವಾಗಿ ಹಬ್ಬ ಆಚರಿಸಿದ್ದಾರೆ.
ಮನೆಯಲ್ಲಿ ನಿರ್ಮಿಸಿದ್ದ ಮಂಟಪಗಳಲ್ಲಿ ಬಿಂದಿಗೆಗೆ ತೆಂಗಿನ ಕಾಯಿ ಇರಿಸಿ ಕಳಸಕ್ಕೆ ಸೀರೆಯನ್ನುಡಿಸಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ವಿವಿಧ ಪುಷ್ಪಗಳಿಂದ ಅಲಂಕರಿಸಿ, ಭಕ್ತಿಯಿಂದ ಪೂಜಿಸಿದರು. ಮಡಿಯಿಂದ ತಯಾರಿಸಿದ್ದ ತರಹೇವಾರಿ ಖಾದ್ಯಗಳನ್ನು ಎಡೆಯಾಗಿ ಸಮರ್ಪಿಸಿದರು.
ಮೈಸೂರು ನಗರದ ಶ್ರೀ ಚಂದ್ರ ಮೌಳೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ದೇವರನ್ನ ಪ್ರತಿಷ್ಠಾಪಿಸಿ ಎರಡು ಲಕ್ಷ ರೂಪಾಯಿಯಲ್ಲಿ ವರಮಹಾಲಕ್ಷ್ಮಿ ದೇವಿಯನ್ನ ಅಲಂಕಾರ ಮಾಡಲಾಯಿತು.ಒಂದು ರೂಪಾಯಿ ನಾಣ್ಯದಿಂದ ಆರಂಭವಾಗಿ ಐದು, ಹತ್ತು, ಇಪ್ಪತ್ತು, ಐವತ್ತು, ನೂರು, ಇನ್ನೂರು ಹಾಗೂ ಐದು ನೂರು ಮುಖಬೆಲೆಯ ನೋಟುಗಳಿಂದ ಲಕ್ಷ್ಮಿಯನ್ನು ಅಲಂಕರಿಸಲಾಗಿತ್ತು.ಬೆಳಗ್ಗಿನಿಂದಲೇ ವರಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿ,ಕರೋನಾ ಮಹಾಮಾರಿ ದೂರಾಗಲಿ , ಶಾಂತಿ ಲಭಿಸಲಿ ಎಂದು ಅರ್ಚಕ ರಾದ ಪಂಡಿತ್ ಪ್ರವೀಣ್ ಪ್ರಾರ್ಥಿಸಿದ್ದಾರೆ.
ಕೊರೋನಾ ಹಿನ್ನಲೆ ಈ ಬಾರಿ ಮಹಿಳೆಯರು ಸಾಧ್ಯವಾದಷ್ಟು ಮನೆಯಲ್ಲಿಯೇ ಭಾಗ್ಯದ ಲಕ್ಷ್ಮೀ ಬಾರಮ್ಮ ಎಂದು ಪ್ರಾರ್ಥಿಸಿದ್ರೂ.ಮನೆಯಲ್ಲಿ ನಡೆದ ಹಬ್ಬಕ್ಕೆ ಸಂಬಂಧಿಕರು, ಪರಿಚಯಸ್ಥರು ಮಾತ್ರ ಸೇರಿದ್ದರು.
ರಿಪೋರ್ಟರ್
ನ@ದಿನಿ ಮೈಸೂರು