ಮೈಸೂರು:30 ಜುಲೈ 2022
ನಂದಿನಿ ಮೈಸೂರು
ಮೈಸೂರು ನಗರದ ಬೃಂದಾವನ ಬಡಾವಣೆಯ ಶ್ರೀವೀರ ಮಡಿವಾಳ ಮಾಚಿದೇವರ ಸಂಘದ ಉದ್ಘಾಟನಾ ಸಮಾರಂಭ ಇದೇ ಜು. ೩೧ ರ ಭಾನುವಾರ ಬೆಳಗ್ಗೆ ೧೧ಕ್ಕೆ ಬಡಾವಣೆಯ ಗುರುದ್ವಾರ ಪಕ್ಕದ ಪಾಲಿಕೆ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಡಿವಾಳರ ಸಂಘ ಜಿಲ್ಲಾಧ್ಯಕ್ಷರಾದ ರವಿನಂದನ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮುದಾಯದ ಸಂಘಟನೆ ಉದ್ದೇಶದಿಂದಾಗಿ ಜಿಲ್ಲಾ ಸಂಘದ ಅಡಿಯಲ್ಲಿ ಸ್ಥಳೀಯ ಸಂಘಗಳನ್ನು ರಚಿಸಲಾಗುತ್ತಿದೆ. ಅದರಂತೆ ಈ ಸಂಘವೂ ಆರಂಭಗೊಳ್ಳುತ್ತಿದೆ. ಶಾಸಕರಾದ ಎಲ್. ನಾಗೇಂದ್ರ, ಮಾಜಿ ಶಾಸಕರಾದ ವಾಸು, ಎಸ್.ಬಿ.ಎಂ. ಮಂಜು, ವಿ. ರಮೇಶ್, ಜಿ.ವಿ. ರವೀಂದ್ರ, ಕೆ.ವಿ. ಶ್ರೀಧರ್, ಎಸ್.ಸಿ. ಬಸವರಾಜು, ಇನ್ನಿತರರು ಅತಿಥಿಗಳಾಗಿರುವರು ಎಂದು ತಿಳಿಸಿದರು.
ಮಹೇಶ್, ನಾಗರಾಜು, ಲೋಕೇಶ್, ಪುಟ್ಟಸ್ವಾಮಿ, ಎಚ್. ರುದ್ರಶೆಟ್ಟಿ, ಇನ್ನಿತರರು ಹಾಜರಿದ್ದರು.