ಮೈಸೂರು:22 ಜುಲೈ 2022
ನಂದಿನಿ ಮೈಸೂರು
ಕಡೇ ಆಷಾಢ ಶುಕ್ರವಾರದಂದು ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಶ್ರೀ ಚಾಮುಂಡೇಶ್ವರಿ ದೇವಿ ಭಾವಚಿತ್ರವಿರಿಸಿ ಪೂಜಾ ಕೈಂಕರ್ಯ ನೇರವೇರಿಸಲಾಯಿತು. ಕಾಂಗ್ರೇಸ್ ಮೈಸೂರು ನಗರ ಉಪಾಧ್ಯಕ್ಷರು ರಾಜಾರಾಂ ಹಾಗೂ ಪತ್ನಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಿದರು.
ಇದೇ ಸಂದರ್ಭದಲ್ಲಿ ರಾಜಾರಾಂ ಮಾತನಾಡಿ ನವೀನ್ ಕಣಗಲ್ ರವರು ಆಷಾಢ ಶುಕ್ರವಾರದ ಪ್ರಯುಕ್ತ ಪ್ರಸಾದ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಚಾಮುಂಡಿ ಪುರಂ ವೃತ್ತದಲ್ಲಿ ಚಾಮುಂಡೇಶ್ವರಿ ತಾಯಿಯನ್ನ ಆರಾಧಿಸಿ ಪ್ರಸಾದ ವಿತರಣೆ ಮಾಡುತ್ತಿರುವುದು ಖುಷಿ ತಂದಿದೆ ಎಂದರು.
ಸರತಿ ಸಾಲಿನಲ್ಲಿ ನಿಂತ ಜನರಿಗೆ ರಾಜರಾಂ ದಂಪತಿಗಳು ಮೊದಲಿಗೆ ಪ್ರಸಾದ ವಿತರಿಸಿದರು. ನಂತರ ನಾವು ಕೂಡ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ವಿನಯ್ ಕಣಗಲ್ , ನಗರ ಪಾಲಿಕೆ ಸದಸ್ಯೆ ಶೋಭ ಸುನೀಲ್ , ಸುನೀಲ್ ನಾರಾಯಣ್ , ಕೆಂಪಿ ಸೇರಿದಂತೆ ಸ್ಥಳೀಯರು ಭಾಗಿಯಾಗಿದ್ದರು.