ಮೈಸೂರು:12 ಜುಲೈ 2022
ನಂದಿನಿ ಮೈಸೂರು
ಗಾಣಿಗ ಮಹಾಸಭಾ ಮತ್ತು ರಾಜ್ಯ ಗಾಣಿಗರ ಗೆಳೆಯರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಕಳೆದ ಸಾಲಿನ ಸಮುದಾಯದ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರಿಸಲಾಗುವುದು. ಹೀಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಾಸಭಾದ ಕೆ. ವಿಜಯಕುಮಾರ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಜು.೩೧ ರೊಳಗೆ ತಿಲಕ್ ನಗರದಲ್ಲಿರುವ ಸಂಘದ ಕಚೇರಿಗೆ ಅರ್ಜಿಯ ಜೊತೆಗೆ ಅಂಕಪಟ್ಟಿ (ದೃಢೀಕರಿಸಿ), ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿ ಹಾಗೂ ಇತ್ತೀಚೆಗಿನ ೨ ಭಾವಚಿತ್ರಗಳೊಂದಿಗೆ ಕಡ್ಡಾಯವಾಗಿ ಮೊಬೈಲ್ ನಂಬರ್ ನಮೂದಿಸಿ ಸಲ್ಲಿಸಬಹುದು.ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ.ಸಂ.೯೦೩೬೬ ೮೩೬೦೮, ೯೯೦೦೮ ೧೮೧೫೧ ಸಂಪರ್ಕಿಸಬಹುದು. ಪ್ರತಿಭಾ ಪುರಸ್ಕಾರ ನಡೆಯುವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯಸ್ಥರನ್ನು ಅಭಿನಂದಿಸಲಾಗುವುದು ಎಂದು ಮಾಹಿತಿ ನೀಡಿದರು.
ಮಾಜಿ ಮೇಯರ್ ಅನಂತು ,
ಪ್ರಧಾನ ಕಾರ್ಯದರ್ಶಿ ಮಹದೇವ್ ಗಾಣಿಗ, ಗೌರವಾಧ್ಯಕ್ಷ ಕೆ.ಮಹದೇವ, ಸಮುದಾಯದ ಹಿರಿಯ ಮುಖಂಡರಾದ ಸಣ್ಣ ಮಾದಶೆಟ್ಟಿ, ಗುಂಡ್ಲುಪೇಟೆಯ ಮಹಾದೇವ್, ನಾಗರಾಜ್, ಖಜಾಂಚಿ ಕಮಾಲಾಕ್ಷಿ, ಧನಶೇಖರ್, ನಟರಾಜ್, ಜವರಾಜ್, ರಮೇಶ್ ಮುಂತಾದವರು ಹಾಜರಿದ್ದರು.