ಮೈಸೂರು:11 ಜೂನ್ 2022
ನಂದಿನಿ ಮೈಸೂರು
ಪೈ.ರುದ್ರ ಉ.ಮೂಗರವರ ಅಭಿಮಾನಿಗಳ ಬಳಗ, ಶ್ರೀ ಜಯಚಾಮರಾಜ ಒಡೆಯರ್ ಗರಡಿ ಸಂಘದಿಂದ ಕಾಟ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ಪೈ.ಆರ್ ರಮೇಶ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಪೈ. ರುದ್ರ ಮೂಗ,ಡಾ.ಪುನೀತ್ ರಾಜ್ ಕುಮಾರ್ ,ಪೈ.ಗೋಲ್ಡ್ ಮ್ಯಾನ್ ಟಿ.ಶ್ರೀನಿವಾಸ್ ರವರ ಸ್ಮರಣಾರ್ಥವಾಗಿ ಜೂನ್ 12 ರಂದು ದೊಡ್ಡಕೆರೆ ಮೈದಾನದಲ್ಲಿರುವ ಸಾಹುಕಾರ್ ಶ್ರೀ ಎಸ್.ಚನ್ನಯ್ಯ ಕುಸ್ತಿ ಅಖಾಡದಲ್ಲಿ ಮಧ್ಯಾಹ್ನ 3 ಗಂಟೆಗೆ 30 ಜೊತೆ ಕಾಟ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಸುಮಾರು 1 ಗಂಟೆ ಕಾಲ ರೋಚಕ ಕುಸ್ತಿ ನಡೆಯಲಿದೆ.ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.ಪ್ರವೇಶ ಉಚಿತವಾಗಿದೆ.
ಪೈ.ಪಾಪಯ್ಯ,ಪೈ.ಕೊಪ್ಪಲು ಬಸವಯ್ಯ,ಪೈ.ಶಿವನಂಜಪ್ಪ ಇವರ ಹೆಸರುಗಳಲ್ಲಿ ಕಪ್ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪೈ. ಕುಮಾರ್,ಪೈ. ಆರ್.ಕೆ.ರವಿ ರಾಜಶೇಖರ್,ಎಸ್ ಮಹೇಶ್ ಹಾಜರಿದ್ದರು.