ಹುಣಸೂರು :25 ಮೇ 2022
ದಾ ರಾ ಮಹೇಶ್
ಪುನರ್ವಸತಿ ಗೊಂಡ ಆದಿವಾಸಿಗಳು ಮತ್ತೆ ಕಾಡಿನಲ್ಲಿ ನೆಲೆಸಲು ಅವಕಾಶವಿಲ್ಲ. ತಮ್ಮ ಸಮಸ್ಯೆ ಗಳನ್ನು ಕಾನೂನು ಚೌಕಟ್ಟಿನೊಳಗೆ ಪರಿಹು ಸಲು ಸರ್ಕಾರ ಸಿದ್ಧ ಎಂದು ನಿವೃತ್ತ ಎಡಿಜಿಪಿ ಹಾಗೂ ಕರ್ನಾಟಕ ವನ್ಯಜೀವಿ ಸಂರಕ್ಷಣಾ ಮಂಡಳಿ ಸದಸ್ಯ ಕೆಎಸ್.ಚಿಕ್ಕರೂರು ತಿಳಿಸಿದರು.
ಹನಗೋಡು ಹೋಬಳಿಯ ಶೆಟ್ಟಹಳ್ಳಿ ಲಕ್ಕಪಟ್ಟಣ ಪುನರ್ವಸತಿ ಕೇಂದ್ರಕ್ಕೆ ಸೋಮ ವಾರ ಸಂಜೆ ಭೇಟಿ ನೀಡಿ ಅಲ್ಲಿನ ನಿವಾಸಿ ಗಳ ಕುಂದುಕೊರತೆ ಆಲಿಸಿ ಮಾತನಾಡಿದ ಅವರು, ನೀವುಗಳು ನಾಗರಹೊಳೆ ಕಾಡಿ ನಿಂದ ಪುನರ್ವಸತಿಗೊಂಡು ಸರ್ಕಾರ ಈ ಯೋಜನೆಯ ಫಲಾನುಭವಿಗಳಾಗಿ ದ್ವಿರಿ. ಒಮ್ಮೆ ಸರ್ಕಾರದ ಫಲಾನುಭವಿಗಳಾ ವಿಲ್ಲ. ನಿಮ್ಮಗಳ ಸಮಸ್ಯೆಗಳನ್ನು ಬಗೆಹರಿ ಸಲು ಸರ್ಕಾರ ಸಿದ್ಧವಿದೆ. ಆದ್ದರಿಂದ ನೀವು ಹಾಡಿಯಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸಿ, ಆ ಮೂಲಕ ಸರ್ಕಾರಕ್ಕೆ ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೆ ಬಗೆ ಹರಿಸಲು ಅನುಕೂಲವಾಗಲಿದೆ. ಹೀಗಾಗಿ ಅರಣ್ಯ ಹಕ್ಕು ಸಮಿತಿ ರಚನೆ ಮಾಡಬೇ ಕೆಂದು ಸಲಹೆ ನೀಡಿದರು.
ಸಮಸ್ಯೆ ಬಗೆಹರಿಸಬಹುದು. ಆದಿವಾಸಿ ಗಳು ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸಬೇಕೆಂದು ದರೇ ಮತ್ತೆ ಕಾಡಿನೊಳಗೆ ನೆಲಸಲು ಸಾಧ್ಯ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಕುಮಾರ್ ಮಾತನಾಡಿ, ಪುನರ್ವಸತಿಗೊಂಡಿರುವ ಆದಿವಾಸಿಗಳು ಕಾನೂನನ್ನು ಕೈಗೆತ್ತಿಕೊಳ್ಳದೆ ತಮ್ಮ ಸಮಸ್ಯೆ ತಿಳಿಸಿದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ನಿಮ್ಮ ಪುನರ್ವಸತಿ ಕೇಂದ್ರದಲ್ಲಿ ಸಭೆ ನಡೆಸಿ
ಪುನರ್ವಸತಿ ಕೇಂದ್ರದ ನಿವಾಸಿ ಚೌಡಮ್ ಮಾತನಾಡಿ, 2011ರಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಬೋಗಾ ಪುರ ಹಾಡಿಯ 40 ಕುಟುಂಬಗಳನ್ನು ಅರಣ್ಯ ಇಲಾಖೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಶೆಟ್ಟಹಳ್ಳಿ ಲಕ್ಕಪಟ್ಟಣದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂ ತರಿಸಲಾಯಿತು. ಆದರೆ ಪುನರ್ವಸತಿ ಕೇಂದ್ರ ದಲ್ಲಿ ನಮಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಇದುವರೆವಿಗೂ ಸರ್ಕಾರ ಕಲ್ಪಿಸಿಲ್ಲ. ಆದ್ದರಿಂದ ನಾವು ಜ.15ರಂದು ಮತ್ತೆ ಕಾಡಿಗೆ ವಾಪಸ್ ತೆರಳಿ ವಾಸ್ತವ್ಯ ಹೂಡಲು ಮುಂದಾಗಿದ್ದೇವು. ಆದರೆ ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ
ಗಳು ನಮ್ಮನ್ನು ವಾಪಸ್ ಕರೆ ತಂದಿದ್ದಾರೆ. ನಮಗೆ ಮೂಲ ಸೌಲಭ್ಯ ಕಲ್ಪಿಸಿ, ನಮ್ಮ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮತ್ತೆ ನಾವು ಕಾಡಿಗೆ ತೆರಳುವುದಾಗಿ ತಿಳಿಸಿದರು.
ಮನವಿ ಸಲ್ಲಿಕೆ: ಪುನರ್ವಸತಿ ಕೇಂದ್ರದ ಮುಖಂಡರು ಮೂಲಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಎಸ್‌ಪಿ ಚೇತನ್ ಕುಮಾರ್ ತಮ್ಮ ಮನವಿ ಪತ್ರವನ್ನು ಮೈಸೂರು ಜಿಲ್ಲಾಧಿಕಾರಿಗಳಿಗೆ ತಲುಪಿಸುವುದಾಗಿ ಭರವಸೆ ನೀಡಿ ಕೂಡಲೇ ನಿಮ್ಮ ಹಾಡಿಯಲ್ಲಿ ಸಭೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಮಾನವ ಹಕ್ಕು ಕಾರ್ಯ ಕರ್ತ ಪ್ರಸನ್ನ ಕುಮಾರ್, ಆದಿವಾಸಿ ಮುಖಂಡ ವಿಜಯಕುಮಾರ್, ನೇರಳಕುಪ್ಪೆ ಗ್ರಾಪಂ ಮಾಜಿ ಸದಸ್ಯ ರಾಜು, ಜಯರಾಮ್ ಚಂದ್ರವಾಡಿ, ಕರಿಯಪ್ಪ ಸೇರಿದಂತೆ ಇತರರು ಭಾಗಿಯಾಗಿದ್ದರು.