ಮೈಸೂರು:10 ಮೇ 2022
ನಂದಿನಿ ಮೈಸೂರು
ಗ್ಯಾಸ್ ಮತ್ತು ದಿನಬಳಕೆಯ ಪದಾರ್ಥಗಳ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ಸರ್ಕಾರದ ವಿರುದ್ಧ ಮಹಿಳೆಯರು ವಿನೂತನ ಪ್ರತಿಭಟನೆ ನಡೆಸಿದರು.
ಮೈಸೂರು ನಗರ ಹಾಗೂ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಸಮಿತಿ ಮಹಿಳೆಯರು ಕಾಂಗ್ರೆಸ್ ಭವನದ ಮುಂಭಾಗ ಸೌದೆ ಒಲೆಯಲ್ಲಿ ಕಾಫಿ ಟೀ ತಯಾರಿಸಿದರೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಬಿ ಪುಷ್ಪ ಅಮರನಾಥ್ ರವರು ಎರಡು ಕೈಗಳಲ್ಲಿ ಗ್ಯಾಸ್ ಸಿಲಿಂಡರ್
ಎತ್ತುವ ಮೂಲಕ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು
ಹಿಂದೆ 450 ಗ್ಯಾಸ್ ಸಿಲಿಂಡರ್ ಸಿಗುತ್ತಿತ್ತು.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದೆ.ಇದೀಗಾ ಸಾವಿರ ಗಡಿ ದಾಟಿದೆ. ಗ್ಯಾಸ್ ಬೆಲೆ ಮಹಿಳೆಯರ ಕೈ ಸುಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನೂರಾರು ಮಹಿಳಾ ಕಾರ್ಯಕರ್ತರು ಭಾಗಿಯಾಗಿದ್ದರು.