ಮೈಸೂರು:10 ಮೇ 2022
ನಂದಿನಿ ಮೈಸೂರು
ಶರಣಪ್ಪ ಎಂ ಕೊಟಗಿ ” ಯವರ ಚೊಚ್ಚಲ , ನಿರ್ಮಾಣದ ಬಸವೇಶ್ವರ ಕ್ರಿಯೇಷನ್ ” ಲಾಂಛನದ ಇನ್ಯಾಂಟ್ ಸಿನಿ ಕ್ರಿಯೇಷನ್ಸ್ ಅರ್ಪಿಸುವ
ದಾರಿ ಯಾವುದಯ್ಯಾ ವೈಕುಂಟಕ್ಕೆ ಚಿತ್ರ ಮೇ 20 ರಂದು ರಾಜ್ಯಾದ್ಯಂತ
ತೆರೆಕಾಣಲಿದೆ ಎಂದು ನಟಿ ಪೂಜಾ ತಿಳಿಸಿದರು.
” ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರ ಅದ್ಬುತವಾಗಿ ಮೂಡಿಬಂದಿದೆ
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ( 2021-22 ) .ಆಯ್ಕೆಯಾಗಿ ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ” ಪ್ರಶಸ್ತಿಯನ್ನು ಈ ಚಿತ್ರ ತನ್ನ ಮಡಿಗೇರಿಸಿಕೊಂಡಿದೆ .
ಮಲೇಷ್ಯಾ ಜರ್ಮನಿ , ಬಾಂಗ್ಲಾದೇಶ , ಲಂಡನ್ , ಸ್ಪೇನ್ , ಅಮೇರಿಕಾ , ಇಟಲಿ , ಸಿಂಗಾಪುರ್ , ಔರಂಗಾಬಾದ್ , ಕಲ್ಕತ್ತಾ , ಮಹರಾಷ್ಟ್ರ , ಕೇರಳ , ಬಿಹಾರ್ , ರಾಜಸ್ಥಾನ , ಕಾಶೀ , ದೆಹಲಿ , ಹೈದರಾಬಾದ್ , ಇನ್ನೂ ಮುಂತಾದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ 150 ಕ್ಕೂ ಹೆಚ್ಚು ಪ್ರಶಸ್ತಿಯನ್ನು ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಪಡೆದುಕೊಂಡಿದೆ.
ಎಲ್ಲರೂ ಚಿತ್ರಮಂದಿರಕ್ಕೆ ತೆರಳಿ ನಮ್ಮನ್ನು ಪ್ರೋತ್ಸಾಹಿಸಿ ಎಂದರು.
ಈ ಚಿತ್ರದಲ್ಲಿ ವರ್ಧನ್ ತಿರ್ಥಹಳ್ಳಿ , ಬಲ ರಾಜ್ಯಾಡಿ ( ಮೈಸೂರು ಬಾಲಣ್ಣ ) , ಅನುಷಾ , ಶೀಬಾ , ಇನ್ನೂ ಮುಂತಾದವರ ತಾರಾಗಣವಿದೆ ಸಿದ್ದು ಪೂರ್ಣಚಂದ್ರ ರವರು ಕಥೆ , ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.ಸಿನಿಮಾದಲ್ಲಿ 2 ಹಾಡುಗಳಿವೆ.ಮನುಷ್ಯತ್ವ ಇಲ್ಲದೇ ಬರೀ ಹಣ ಅಂತ ಓಡಾಡಿಕೊಂಡು ಮಜಾ ಮಾಡುತ್ತಿದ್ದವನು ಆಕಸ್ಮಿಕವಾಗಿ ಸ್ಮಶಾನಕ್ಕೆ ಬರುತ್ತಾನೆ.ಅಲ್ಲಿಗೆ ಬಂದು ಹೋದ ಮೇಲೆ ಅವನ ಮನಸ್ಥಿತಿ ಹೇಗಿರುತ್ತದೆ ಅನ್ನೋ ಕಥಾ ಹಂದರ ಈ ಚಿತ್ರದಲ್ಲಿದೆ ಎಂದು ಚಿತ್ರ ತಂಡ ತಿಳಿಸಿದೆ.