ನಂದಿನಿ ಮೈಸೂರು
ಶ್ರಾವ್ಯಾ ಕಂಬೈನ್ಸ್ ಅರ್ಪಿಸುವ ಕೋಮಲ ನಟರಾಜ ನಿರ್ಮಾಣದ ಚಿತ್ರ॥ಸಂಸಾರ ಸಾಗರ ॥ ಚಿತ್ರೀಕರಣ ಮುಹೂರ್ತ ನಡೆಯಿತು.
ಮಂಜು ಕವಿ (ಮಿರಾಕಲ್ ಮಂಜು )
ನಿರ್ದೇಶನದ ಎರಡನೇ ಚಿತ್ರ ಸಂಸಾರ ಸಾಗರ
ಕಥೆ ಚಿತ್ರಕಥೆ ನಿರ್ದೇಶನ ಸಾಹಿತ್ಯ ಮಂಜು
ಚಿತ್ರದ ಬಗ್ಗೆ ವಿವರಿಸಿದ್ದಾರೆ ಮೂವರು ನಾಯಕ ನಟರು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಪ್ರೀತಿಯ ಬಲೆಗೆ ಸಿಲುಕಿ ಮದುವೆಯಾಗಿ ಸಂಸಾರದಲ್ಲಿ ಏರುಪೇರಾಗಿ ತಮ್ಮ ಜೀವನವನ್ನು ಹೇಗೆ ನಿಭಾಯಿಸಿ ಕೊಳ್ಳುತ್ತಾರೆ ಎಂಬುದು ಚಿತ್ರದ ಕಥೆ ಎಂದು ವಿವರಿಸಿದ್ದಾರೆ ಇನ್ನು ಈ ಚಿತ್ರದಲ್ಲಿ ಕುಟುಂಬ ಸಮೇತರಾಗಿ ನೋಡುವ ಸನ್ನಿವೇಶಗಳಿದ್ದು ಚಿತ್ರದಲ್ಲಿ ಮುಖ್ಯ ನಾಯಕ ನಟರಾಗಿ ಆನಂದ್ ಆರ್ಯ ಡಾಕ್ಟರ್ ದೀಕ್ಷಿತ್ ಧನುಷ್ ಬಣ್ಣ ಹಚ್ಚಲಿದ್ದು ಇನ್ನೂ 3ಜನ ನಾಯಕಿರಾಗಿ ರಕ್ಷಾ ಲಕ್ಷ ಶೆಟ್ಟಿ ಭೂಮಿಕಾ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ ಇನ್ನು ಈ ಚಿತ್ರದಲ್ಲಿ ಹಾಸ್ಯನಟ ಟೆನ್ನಿಸ್ ಕೃಷ್ಣ ಸುಧಾ ಬೆಳವಾಡಿ ಸಿಲ್ಲಿ ಲಲ್ಲಿ ಖ್ಯಾತಿಯ ಶ್ರೀನಿವಾಸ್ ಗೌಡ್ರು ಮೂಗು ಸುರೇಶ್ ರೇಖಾದಾಸ್ ಪ್ರಿಯ ತರುಣ್ ಜಗದೀಶ್ ಕೊಪ್ಪ ಎಸ್ ನಾರಾಯಣ್ ಇನ್ನು ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಈ ಚಿತ್ರದಲ್ಲಿ 6ಗೀತೆಗಳಿದ್ದು 4ಗೀತೆಗಳಿಗೆ ನಟರಾಜರವರು ಅದ್ಭುತವಾದ ತಮ್ಮ ಮಧುರ ಕಂಠವನ್ನು ನೀಡಿದ್ದಾರೆ ಇನ್ನೂ 1ಗೀತೆ ಅನನ್ಯ ಭಟ್ ಹಾಡಲಿದ್ದಾರೆ .
ಇನ್ನು ಈ ಚಿತ್ರದ ಸಂಕಲನ ಬಿ ಎಸ್ ಕೆಂಪರಾಜ್ ರವರು ಛಾಯಾಗ್ರಾಹಕರಾಗಿ ಸದಾಶಿವ ಹಿರೇಮಠ ರಾಜ್ ಕಡೂರ್ ಕಾರ್ಯನಿರ್ವಹಿಸಲಿದ್ದಾರೆ ಸಹಾಯ ನಿರ್ದೇಶಕರಾಗಿ ಜೀವನ್ ಪ್ರವಿ ಎಸ್ ಜೆ.ಸಂಜಯ್ ಸಂಜೆ ಕಿರಣ್ ಮೋಹನ್ ಮಲಯಮಾರುತ ವಹಿಸಿದರು.
ಸಂಸಾರ ಸಾಗರ ಚಿತ್ರಕ್ಕೆ ಪ್ರೋತ್ಸಾಹಿಸಿ ಆಶೀರ್ವದಿಸಿ ಎಂದು ಮನಸಾರೆ ಕೇಳಿಕೊಳ್ಳುತ್ತೇವೆ ಇಂತೀ ಸಂಸಾರಸಾಗರ ಚಿತ್ರತಂಡ