17 ಫೆಬ್ರವರಿ 2022
ನಂದಿನಿ ಮೈಸೂರು
ಮುತ್ತೂಟ್ ಫೈನಾನ್ಸ್ ತನ್ನ ಸಿಎಸ್ಆರ್ ಕಾರ್ಯಕ್ರಮದಡಿಯಲ್ಲಿ ಕುರ್ನಾಡು ಗ್ರಾಮದ 10 ಬಡ ಫಲಾನುಭವಿಗಳ ಮನೆಗೆ ಸೋಲಾರ್ ಗೃಹಬಳಕೆ ವಿದ್ಯುತ್ ದೀಪವನ್ನು ಪ್ರಜ್ಞ ವೊಕೇಷನಲ್ ಟ್ರೈನಿಂಗ್ ಸೆಂಟರ್ ಮತ್ತು ಸೌರ ಎನರ್ಜಿ ಟೆಕ್ನೋಲಜಿಸ್ ಮುಖಾಂತರ ಯೋಜನೆಯ ಅನುಷ್ಠಾನ ಮಾಡಲಾಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಯಪ್ಪ ನಗರಸಭೆಯ ಪೌರಾಯುಕ್ತರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಪ್ರೊಫೆಸರ್ ಹಿಲ್ಡಾ ರಾಯಪ್ಪನ್ ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಛತೆಯ ರಾಯಬಾರಿ ಶ್ರೀ ಶೀನ ಶೆಟ್ಟಿ ಕುರ್ನಾಡು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗಣೇಶ್ ನಾಯಕ್ ಉಪಾಧ್ಯಕ್ಷರಾದ ಪ್ರೇಮಟ್ಟಿ ಮುತ್ತೂಟ್ ಫೈನಾನ್ಸ್ ಆರ್ ಎ ಎಂ ಶ್ರೀ ರಾಹುಲ್ ರಾಘವನ್ ಸಿಬಿಎಂ ಶ್ರೀಮತಿ ರೇಶ್ಮಾ ಸೌರ ಎನರ್ಜಿ ಟೆಕ್ನಾಲಜಿಸ್ ಲಿಖಿತ್ ರಾಜ್ , ಜಯರಾಜ್ ಪ್ರಜ್ಞಾ ವಿಟಿಸಿ ಸೆಂಟರ್ ನ ಪ್ರಾಂಶುಪಾಲರು ಶರತ್ ಕುಮಾರ್ ಎಂ ಕೆ, ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕರಾದ ಕೃಷ್ಣ ಮೂಲ್ಯ ಮುತ್ತೂಟ್ ಫೈನಾನ್ಸ್ ನ ಸಿಎಸ್ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್ ಗ್ರಾಮ ಪಂಚಾಯತ್ ಸದಸ್ಯರಾದ ಲೋಲಾಕ್ಷಿ , ಸೆಮಿನಾ ಗೋಪಾಲ ಕುಂದರ್ ಹಾಗೂ ಫಲಾನುಭವಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು