ಎಚ್.ಡಿ.ಕೋಟೆ:5 ಫೆಬ್ರವರಿ 2022
ನಂದಿನಿ ಮೈಸೂರು
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲ್ಲೂಕು ಅಧ್ಯಕ್ಷರಾಗಿ ಮರು ಆಯ್ಕೆಯಾದ ಕನ್ನಡ ಪ್ರಮೋದ್ ರವರಿಗೆ ಎಚ್.ಡಿ.ಕೋಟೆ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಮೈಸೂರು ಜಿಲ್ಲೆಯಲ್ಲಿ ಅತಿ ಹಿಂದುಳಿದ ತಾಲ್ಲೂಕಾಗಿರುವ ಎಚ್ ಡಿ ಕೋಟೆಯಲ್ಲಿ ನಾನು ಅತಿ ಹೆಚ್ಚು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ನಡೆಸಿದ್ದೇನೆ .ನನ್ನನ್ನು ಮರು ಆಯ್ಕೆ ಮಾಡಿರುವುದು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.ಇನ್ನೂ ಮತ್ತಷ್ಟು ನಾಡು ನುಡಿ ಭಾಷೆ ಗಾಗಿ ನಾನು ಪ್ರಾಮಾಣಿಕವಾಗಿ ಶ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸತೀಶ್ ಆರಾಧ್ಯ ,ಮಂಜು ಕೋಟೆ , ದೊಡ್ಡ ಸಿದ್ದು ,ಎಡತೊರೆ ಮಹೇಶ್ ,ಜಯಶೀಲಾ ಕೋಟೆ ,ನಿಂಗಣ್ಣ ,ರವಿ ಕುಮಾರ್ ಆರಾಧ್ಯ ,ಪುರುಷೋತ್ತಮ್ ,ರವಿಕುಮಾರ್ ,ಇತರರು ಹಾಜರಿದ್ದರು.
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು