ನಂಜನಗೂಡು:18 ಜನವರಿ 2022
ನಂದಿನಿ ಮೈಸೂರು
ವಯಸ್ಸಾದ ಕಾಡಾನೆಯೊಂದು
ಜಮೀನಿನಲ್ಲಿ ಅಸ್ವಸ್ಥವಾಗಿ ಬಿದ್ದಿತ್ತು.ಜನರು ಕಾಡಾನೆಗೆ ಆಹಾರ ನೀಡುತ್ತಿದ್ರೂ.ಆದ್ರೇ ಕಾಡಾನೆ ಮಾತ್ರ ನೆಲದಿಂದ ಮೇಲೆ ಹೇಳಲಾಗದೇ ನೋವನ್ನ ಅನುಭವಿ ಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ನಂಜನಗೂಡಿನ ಹೆಡಿಯಾಲ ಗ್ರಾಮದ ಕುದುರೆಗುಂಡಿ ಹಳ್ಳ ಕೆರೆ ನಾಲೆಯ ಸಮೀಪದ ಲಿಂಗರಾಜು ಎಂಬುವರ ಜಮೀನಿನಲ್ಲಿ ಆನೆ ಅಸ್ವಸ್ಥವಾಗಿ ನರಳಾಡುತ್ತಿತ್ತು.ಸ್ಥಳೀಯರು ಆಹಾರ ನೀಡುವ ಪ್ರಯತ್ನ ಮಾಡುತ್ತಿದ್ದರು.ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ