ಮೈಸೂರು:16 ಜನವರಿ 2022
ನಂದಿನಿ
![](https://bharathnewstv.in/wp-content/uploads/2025/01/OPENING-TODAY.jpg)
ನಾಗಮ್ಮ ಅವರ ಅಂಗಾಂಗ ದಾನ ಮಾಡಿ 5 ಜನರ ಪ್ರಾಣ ಉಳಿಸಿಲಾಯಿತು.
~ 2 ಮೂತ್ರಪಿಂಡಗಳು, 1 ಯಕೃತ್ತು, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ
ಇವರ ಹೆಸರು ನಾಗಮ್ಮ ವಯಸ್ಸು 45 ವರ್ಷ.ಬ್ರೈನ್ ಟ್ಯುಮೌರ್ ನಿಂದ ಬಳಲುತ್ತಿದ್ದ ಇವರು ತನ್ನ ಪ್ರಾಣ ಉಳಿಸಿಕೊಳ್ಳದೇ ಅಂಗಾಂಗ ದಾನ ಮಾಡಿ 5 ಜನರ ಜೀವಕ್ಕೆ ಉಸಿರಾಗಿದ್ದಾರೆ.
ಹೌದು ಮೈಸೂರು ಜಿಲ್ಲೆ ಮಳವಳ್ಳಿ ಕೋರೇಗಾಲ ನಿವಾಸಿ ನಾಗಮ್ಮಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಸೂಚನೆ ಮೇರೆಗೆ ಚಿಕಿತ್ಸೆಗಗಿ ಜನವರಿ 13 ರ ಮಧ್ಯರಾತ್ರಿ 2.15 am ಕ್ಕೆ ಗಂಭೀರ ಸ್ಥಿತಿಯಲ್ಲಿ ಅಪೋಲೊ ಬಿ.ಜಿ. ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ನಾಗಮ್ಮ ‘ಬ್ರೈನ್ ಟ್ಯುಮೌರ್’ ನಿಂದ ಬಳಲುತ್ತಿದ್ದರು ಮತ್ತು ಜೀವ ಬೆಂಬಲ ಮತ್ತು ತೀವ್ರ ನಿಗಾಗಾಗಿ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು.
ನಾಗಮ್ಮ ಅವರ ಆರೋಗ್ಯವು ಬಹಳ ಗಂಭೀರ ಸ್ಥಿತಿಯಲ್ಲಿದ್ದಾಗ ಎರಡು ದಿನಗಳ ಕಾಲ ಲೈಫ್ ಸಪೋರ್ಟ್ನಲ್ಲಿ ಇರಿಸಲಾಗಿತ್ತು. ಮೂರನೇ ದಿನ ಜನವರಿ 15 ರಂದು ಬೆಳಗ್ಗೆ 11.45 ಗೆ, ಮಾನವ ಅಂಗಾಂಗ ಕಸಿ ಕಾಯಿದೆ 1994 ರ ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರ ಮೆದುಳಿನ ನಿಷ್ಕ್ರಿಯೆ “ಬ್ರೆನ್ ಡೆಡ್” ಯಂದು ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಯ ಪ್ಯಾನೆಲ್ಲಿಸ್ಟ್ ನಲ್ಲಿರುವ ವೈದ್ಯರು ಘೋಷಿಸಿದರು.
ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಯು,ಈಗ ಮಲ್ಟಿಆರ್ಗನ್ ಟ್ರಾನ್ಸ್ ಪ್ಲಾಂಟ್ ಪರವಾನಗಿ ಪಡೆದ ಕೇಂದ್ರವಾಗಿದೆ. ಈ ಘಟನೆಯ ಮೊದಲು ಶ್ರೀಮತಿ ನಾಗಮ್ಮರವರು ಆರೋಗ್ಯವಾಗಿದ್ದರು ಮತ್ತು ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತ ಪಡಿಸಲಾಯಿತು. ನಿಗದಿತ ಪ್ರೋಟೋಕಾಲ್ಗಳ ಪ್ರಕಾರ ಅಂಗಾಂಗ ದಾನಕ್ಕಾಗಿ ಅವರ ಕುಟುಂಬದವರಿಗೆ ಸಲಹೆ ನೀಡಲಾಯಿತು, ಈ ಸಂದರ್ಭದಲ್ಲಿ ನಾಗಮ್ಮರವರ ಗಂಡ ಮತ್ತು ಮಕ್ಕಳು ಅವರ ಅಂಗಾಂಗ ದಾನ ಮಾಡಲು ಮುಂದೆ ಬಂದರು.
ಅಂಗ ದಾನ ಪ್ರೋಟೋಕಾಲ್ಗಳ ಪ್ರಕಾರ, ಮೊದಲು ZCCK ಎಂದು ಕರೆಯಲ್ಪಡುತ್ತಿದ್ದ ಜೀವ ಸಾರ್ಥಕಥೆಯ ಅಧಿಕಾರಿಗಳು ಅಂಗ ಸ್ವೀಕರಿಸುವವರ ಕಾಯುವ ಪಟ್ಟಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.
ನಿನ್ನೆ, ಜನವರಿ 15 ರಂದು ಸಂಜೆ 4.30 ಕ್ಕೆ ನಾಗಮ್ಮ ರವರ ಅಂಗಾಗಗಳನ್ನು (2 ಮೂತ್ರಪಿಂಡಗಳು, 1 ಯಕೃತ್ತು, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು) ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಿಂದ ಕೆಳಗಿನ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ.
ಕ್ರಮ ಸಂಖ್ಯೆ ದಾನ ಮಾಡಿದ ಅಂಗ
ಅಂಗ ದಾನ ಪಡೆದ ಆಸ್ಪತ್ರೆ
1. 2 ಮೂತ್ರಪಿಂಡಗಳು ಅಪೋಲೊ ಬಿಜ಼ಿಎಸ್ ಆಸ್ಪತ್ರೆ, ಮೈಸೂರು
2. 1 ಯಕೃತ್ತು ಲಿವರ್ ಅನ್ನು ಮಣಿಪಾಲ್ ಆಸ್ಪತ್ರೆ, ಹೆಚ್ ಎ ಎಲ್, ಬೆಂಗಳೂರಿಗೆ ಕಳುಹಿಸಲಾಯಿತು. ಇದನ್ನು ಲಿವರ್ ವೈಫಲ್ಯ ಪ್ರಕರಣದ ‘ಸುಪ್ರ ಅರ್ಜೆಂಟ್ ವರ್ಗ’ ದಲ್ಲಿ ಜೀವ ಉಳಿಸುವ ಶಸ್ತ್ರಚಿಕಿತ್ಸೆಗೆ ಬಳಸಿಕೊಳ್ಳಲಾಯಿತು
3. ಹೃದಯ ಕವಾಟಗಳು ಮಣಿಪಾಲ್ ಆಸ್ಪತ್ರೆ, ಎಚ್ಎಎಲ್ ಬೆಂಗಳೂರು
4. ಕಾರ್ನಿಯಾ ಮೈಸೂರು ಐ ಬ್ಯಾಂಕ್
ಅಪೋಲೋ ಬಿಜಿಎಸ್ ಆಸ್ಪತ್ರೆ, ಮೈಸೂರು ಈಗ ಬಹು ಅಂಗಾಂಗ ಕಸಿಗಳಿಗೆ ಪರವಾನಗಿ ಪಡೆದ ಕೇಂದ್ರವಾಗಿದೆ. ಅಂಗಾಂಗ ದಾನವನ್ನು ಉತ್ತೇಜಿಸುವಲ್ಲಿ ಮತ್ತು ಈ ಉದಾತ್ತ ಉದ್ದೇಶಕ್ಕಾಗಿ ಮುಂದೆ ಬಂದ ಮೃತ ಕುಟುಂಬಕ್ಕೆ ಅಪೋಲೋ ಬಿಜಿಎಸ್ ಆಸ್ಪತ್ರೆಯು ಧನ್ಯವಾದಗಳನ್ನು ಅರ್ಪಿಸುತ್ತದೆ ಹಾಗು, ಮೈಸೂರು ನಗರ ಮತ್ತು ಸಂಚಾರ ಪೊಲೀಸ್ ವಿಭಾಗಕ್ಕೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ಯಿಂದ ಮಣಿಪಾಲ್ ಆಸ್ಪತ್ರೆಯವರೆಗೆ ತುರ್ತು ಅಂಗ ವರ್ಗಾವಣೆಗಾಗಿ ‘ಗ್ರೀನ್ ಕಾರಿಡಾರ್’ ನ್ನು ರಚಿಸಲು ತಮ್ಮ ಬೆಂಬಲವನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಆಡಳಿತ ವಿಭಾಗ
ಮತ್ತು ವಿಭಾಗದ ಮುಖ್ಯಸ್ಥ್ಥರಾದ ಎನ್. ಜಿ. ಭರತೀಶ ರೆಡ್ಡಿ ತಿಳಿಸಿದ್ದಾರೆ.