ಎಚ್.ಡಿ.ಕೋಟೆ:24 ಡಿಸೆಂಬರ್ 2021
ನಂದಿನಿ
ರಸ್ತೆ ಮಧ್ಯೆದಲ್ಲಿ ಒಕ್ಕಣೆಗೆ ಹಾಕಿದ್ದ ರಾಗಿ,ಹುಳ್ಳಿ ಹುಲ್ಲನ್ನು 112 ಸಿಬ್ಬಂದಿಗಳು ತೆರೆವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಎಚ್.ಟಿ. ಕೋಟೆ ತಾಲೂಕಿನ ಗದ್ದಿಗೆ ಮೈಸೂರು ರಸ್ತೆಯಲ್ಲಿ ಉದ್ದಕ್ಕೂ ರೈತರು ಹುಳ್ಳಿ ಮತ್ತು ರಾಗಿ ಹಾಕಿ ಒಕ್ಕಣೆಗೆ ಮುಂದಾಗಿದ್ರು.ಇದರಿಂದ ಕಾರು ಮತ್ತು ಬೈಕ್ ಸವಾರರು ಬಿದ್ದು ಗಾಯ ಗೊಂಡಿದ್ದರು. ಇದರಿಂದ ಕೋಪಗೊಂಡ ವಾಹನ ಸವಾರರು 112 ಗೆ ಕರೆ ಮಾಡಿ ದೂರು ನೀಡಿದ್ದಾರೆ.ತಕ್ಷಣವೇ ಸ್ಪಂದಿಸಿದ ಎಚ್.ಡಿ ಕೋಟೆ 112ಸಿಬ್ಬಂದಿಗಳಾದ ಗೋವಿಂದರಾಜು ಮತ್ತು ಸಿದ್ದರಾಜು ರವರು ರೈತರ ಜೊತೆ ಮನವಿ ಮಾಡಿ ಹುಲ್ಲನ್ನು ತೆರವುಗೊಳಿಸಿದ್ದಾರೆ.ನಂತರ ರೈತರಿಗೆ ಹೀಗೆ ರಸ್ತೆಯಲ್ಲಿ ಹುಲ್ಲು ಹಾಕಿದರೇ ವಾಹನ ಸವಾರಿಗೆ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ.ಆದ್ದರಿಂದ ರಸ್ತೆ ಮಧ್ಯೆ ಈ ರೀತಿ ಒಕ್ಕಣೆ ಮಾಡಬೇಡಿ ಎಂದು ಸಲಹೆ ಸೂಚನೆ ನೀಡಿದ್ದಾರೆ.