ಸಾಲಿಗ್ರಾಮ:15 ಡಿಸೆಂಬರ್ 2021
ಜನಪ್ರತಿನಿಧಿಗಳು, ಅಧಿಕಾರಿಗಳು, ಉದ್ಯಮಿಗಳು ಕುಡಿಯುವ ಶುದ್ಧ ಕುಡಿಯುವ ನೀರನ್ನು ಗ್ರಾಮೀಣ ಭಾಗದಲ್ಲಿ ಕೊಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೇಲೂರು ಗ್ರಾಂಪಂ ಪಿಡಿಒ ಚಂದ್ರಶೇಖರ್ ತಿಳಿಸಿದರು.
ಅವರು ತಾಲೂಕಿನ ಮೇಲೂರು ಗ್ರಾಂಪಂ ಅಲ್ಲಿ ಜಲ ಜೀವನ್ ಮಿಷನ್ ಯೋಜನೆ ಬಗ್ಗೆ ಗ್ರಾಂಪಂ ಆವರಣದಲ್ಲಿ ಕಿರು ಚಿತ್ರ ಆಯೋಜಿಸಿ ಮಾತನಾಡಿದರು. ಪ್ರತಿ ಮನೆಗೆ ಶುದ್ಧ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಮತ್ತು ಮೀಟರ್ ಅಳವಡಿಸಿ ಒಬ್ಬ ಮನುಷ್ಯನಿಗೆ ಪ್ರತಿ ದಿನ 55 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯೇ ಜಲ ಜೀವನ ಮಿಷನ್ ಯೋಜನೆ ಆಗಿದ್ದು 2023 ರ ಒಳಗೆ ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದ ಅವರು ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಆಸ್ಪದವನ್ನು ನೀಡದೆ ಸಹಕರಿಸಬೇಕೆಂದು ಮನವಿ ಮಾಡಿದರೂ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಶೇಕಡಾ 75 ಅನುದಾನ ರಾಜ್ಯ ಸರ್ಕಾರ ಶೇಕಡಾ15 ಮತ್ತು ಸಮುದಾಯ ವಂತಿಕೆ ಶೇಕಡಾ 10 ರ ಅನುದಾನ ಸೇರಿದೆ ಎಂದರು.
ಗ್ರಾಂಪಂ ಅಧ್ಯಕ್ಷ ನರೇಂದ್ರ ಕುಮಾರ್ ಸದಸ್ಯರುಗಳು ಜಿಪಂ ಜಿಜೆಎಂ ಅಧಿಕಾರಿಗಳಾದ ಮಹೇಶ್ ನಾಗೇಶ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗ್ರಾಂಪಂ ಸಿಬ್ಬಂದಿಗಳು ಸಾರ್ವಜನಿಕರು ಇದ್ದರು.