ಬೃಹತ್ ಸ್ಯಾಂಡಲ್ ವುಡ್ ಸ್ಮಗ್ಲಿಂಗ್ ಜಾಲ ಬೇಧಿಸುವಲ್ಲಿ ಸಿ.ಸಿ.ಬಿ. ಪೊಲೀಸರು ಯಶಸ್ವಿ

ಮೈಸೂರು:15 ಡಿಸೆಂಬರ್ 2021

ನಂದಿನಿ 

ಬೃಹತ್ ಸ್ಯಾಂಡಲ್ ವುಡ್ ಸ್ಮಗ್ಲಿಂಗ್ ಜಾಲ ಬೇಧಿಸುವಲ್ಲಿ ಸಿ.ಸಿ.ಬಿ. ಪೊಲೀಸರು ಯಶಸ್ವಿ

೧ ಕೋಟಿ ಮೌಲ್ಯದ ೭೦೦ ಕೆ.ಜಿ. ಶ್ರೀಗಂಧ, ೧೫ ಸಾವಿರ ಹಣ, ೧ ಗೂಡ್ಸ್ ಕ್ಯಾರಿಯರ್ ವಾಹನ, ೨ ಮೊಬೈಲ್
ಫೋನ್‌ಗಳ ವಶ ಹಾಗೂ ಇಬ್ಬರ ಬಂಧನ

ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದು ಮಂಡಿ
ಮೊಹಲ್ಲಾದ ಪುಲಕೇಶಿ ರಸ್ತೆ ಮತ್ತು ಎಂ.ಕೆ.ಡಿ.ಕೆ. ರಸ್ತೆಯ ೨ನೇ ಕ್ರಾಸ್ ಕೂಡುವ ಸ್ಥಳದಲ್ಲಿ ಟಾಟಾ ಗೂಡ್ಸ್
ಕ್ಯಾರಿಯರ್ ವಾಹನದಲ್ಲಿ ಅಕ್ರಮವಾಗಿ ಸ್ಮಗ್ಲಿಂಗ್ ಮಾಡಿದ ಶ್ರೀಗಂಧದ ಮರದ ತುಂಡುಗಳನ್ನು ಮೈಸೂರಿನ ಸ್ಮಗ್ಲರ್ ಒಬ್ಬರಿಂದ ಖರೀದಿಸಿಕೊಂಡು ಬೆಂಗಳೂರಿನ ಕಡೆಗೆ ಸಾಗಾಣಿಕೆ ಮಾಡಲು ತಯಾರಿ ಮಾಡಿಕೊಳ್ಳುತ್ತಿರುವ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿದ ಸಿ.ಸಿ.ಬಿ. ಪೊಲೀಸರು, ಸದರಿ ವಾಹನದ ಮೇಲೆ ದಾಳಿ ಮಾಡಿ, ಈ ಸ್ಮಗ್ಲಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

೩೮೫೦ ರಲ್ಲಿ ಚಾಲಕರ ಸೀಟಿನ ಹಿಂಭಾಗ ಗೌಪ್ಯವಾಗಿ ನಿರ್ಮಿಸಿದ್ದ ಕ್ಯಾಬಿನ್ ಒಂದರಲ್ಲಿ ಅಡಗಿಸಿಟ್ಟಿದ್ದ ಒಂದು ಕೋಟಿ
ಮೌಲ್ಯದ ಒಟ್ಟು ೭೦೦ ಕೆ.ಜಿ. ತೂಕದ ಶ್ರೀಗಂಧದ ಮರದ ತುಂಡುಗಳು, ೨ ಮೊಬೈಲ್ ಫೋನ್‌ಗಳು, ೧೫,೦೦೦/-
ರೂ ನಗದು ಹಣ ಹಾಗೂ ಟಾಟಾ ಕಂಪೆನಿಯ ಗೂಡ್ಸ್ ಕ್ಯಾರಿಯರ್ ವಾಹನವನ್ನು ವಶಕ್ಕೆ
ಪಡಿಸಿಕೊಂಡು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿ.ಸಿ.ಬಿ.ಯಲ್ಲಿ ತನಿಖೆ ಮುಂದುವರೆದಿದೆ.
ಈ ಸ್ಮಗ್ಲಿಂಗ್ ದಂಧೆಯಲ್ಲಿ ಭಾಗಿಯಾಗಿ ಇಷ್ಟು ಬೃಹತ್ ತೂಕದ ಶ್ರೀಗಂಧವನ್ನು ಅಕ್ರಮವಾಗಿ ಸಂಗ್ರಹಿಸಿಕೊಟ್ಟಂತಹ
ಮತ್ತು ಇದನ್ನು ಖರೀದಿ ಮಾಡಿಕೊಳ್ಳುತ್ತಿದ್ದ ಇತರೇ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿರುತ್ತದೆ.

ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ.ರವರಾದ ಗೀತಪ್ರಸನ್ನರವರ
ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ.ರವರಾದ ಸಿ.ಕೆ.ಅಶ್ವಥನಾರಾಯಣರವರ ನೇತೃತ್ವದಲ್ಲಿ ಸಿ.ಸಿ.ಬಿ.ಯ
ಇನ್ಸ್ಪೆಕ್ಟರ್ ಎ.ಮಲ್ಲೇಶ್, ಎ.ಎಸ್.ಐ. ಆರ್.ರಾಜು, ಸಿಬ್ಬಂದಿಗಳಾದ ಜೋಸೆಫ್ ನೊರೋನ್ಹ, ರಾಧೇಶ್,
ಉಮಾಮಹೇಶ್, ಪುರುಷೋತ್ತಮ, ಅನಿಲ್, ರಘು, ಸುನಿಲ್, ಅರುಣ್‌ಕುಮಾರ್, ಶ್ರೀನಿವಾಸ, ಮಮತರವರು ನಡೆಸಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ,
ಐ.ಪಿ.ಎಸ್.ರವರು ಪ್ರಸಂಶಿಸಿರುತ್ತಾರೆ.

Leave a Reply

Your email address will not be published. Required fields are marked *