ಮೈಸೂರು:27 ನವೆಂಬರ್ 2021
ನಂದಿನಿ
ಚಿತ್ರ ಪ್ರೇಮಿಗಳಿಗೆ ನಿಸಿ ರಸದೌತಣ ನೀಡಲು ಸಾನ್ವೀ ಮೂವೀಸ್ ಅಂಡ್ ಅನಿಮೇಷನ್
ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ಚಿತ್ರ ತಂಡ ಇಂದು ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಿದೆ.
ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಮೈಸೂರಿನ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.
ರಂಗಿತರಂಗ ಖ್ಯಾತಿಯ ನಿರೂಪ್ ಬಂಡಾರಿ ಚಿತ್ರದ ಹಾಡು ಬಿಡುಗಡೆಗೊಳಿಸಿದರು.ರಾಘವ್ ನಾಯಕನಾಗಿ ಸಂಜನಾ ಬುರ್ಲಿ ನಾಯಕಿಯಾಗಿ ನಟಿಸಿದ್ದಾರೆ.ಚಿತ್ರದ ನಾಲ್ಕು ಹಾಡುಗಳು ಬಿಡುಗಡೆಗೊಂಡವು.ಚಿತ್ರದ ಹಾಡು ಅದ್ಬುತವಾಗಿ ಮೂಡಿಬಂದಿದೆ.ಇನ್ನೂ ಮೈಸೂರು ಮೂಲದವರಾದ ಅಮೆರಿಕನ್ ಪ್ರಜೆ ಯಶಸ್ವಿ ಶಂಕರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಕುಟುಂಬದ ಜೊತೆ ನೋಡಬಹುದಾದ ಚಿತ್ರ ಇದಾಗಿದೆ.ಮೈಸೂರಿನ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.ಚಿತ್ರ ಅಧ್ಬುತವಾಗಿ ಮೂಡಿಬಂದಿದೆ.ಮೈಸೂರು, ಮಂಡ್ಯ ಸೇರಿದಂತೆ ಸುತ್ತಾ ಮುತ್ತಾ ಚಿತ್ರೀಕರಣ ಮಾಡಲಾಗಿದೆ.ಇಂದು ಚಿತ್ರದ 4 ಗೀತೆಗಳು ಬಿಡುಗಡೆಯಾಗಿದೆ.ಚಿತ್ರದಲ್ಲಿ ನಾನು ಕೂಡ ಒಂದು ಪಾತ್ರ ಮಾಡಿದ್ದೇನೆ.ಚಿತ್ರದ ಬಿಡುಗಡೆಯ ದಿನಾಂಕವನ್ನು ಆದಷ್ಟು ಬೇಗ ತಿಳಿಸುತ್ತೇವೆ ನಿರ್ಮಾಪಕರು ತಿಳಿಸಿದರು.
ಈ ಸಿನಿಮಾ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರವಾಗಿದೆ ಎಂದು ನಿರ್ದೇಶಕ , ಎಂ.ಎನ್.ಶ್ರೀಕಾಂತ್ ತಮ್ಮ ಸಿನಿಮಾದ ಬಗ್ಗೆ ತಿಳಿಸಿದರು.
ತೆಲುಗಿನ ಗೋಪಿನಾಥ್ ಭಟ್, ನವನೀತ್ಚರಿ ಸಂಗೀತ ಸಂಯೋಜಿಸಿದ್ದು, ಸಂಕಲನ ವಿಜೇತ್ಚಂದ್ರ, ನೃತ್ಯ ಕಲೈ-ಹರಿಕೃಷ್ಣ ನಿರ್ವಹಿಸಿದ್ದಾರೆ.