ಮೈಸೂರು:19 ನವೆಂಬರ್ 2021
ನಂದಿನಿ ಮೈಸೂರು
ದೇಶದಲ್ಲಿ ಜಾತಿ ನಿರ್ಮಾಲನೆ ಮಾಡಬೇಕು ಎಂಬ ಹಿಂಗಿತ ಇತ್ತು ಅಂದ್ರೇ ದಲಿತರು ಹಾಗೂ ಬ್ರಾಹ್ಮಣರ ನಡುವೆ ಸಾಮೂಹಿಕ ವಿವಾಹವನ್ನ ಉಡುಪಿ ಶ್ರೀಗಳು ಮಾಡಲಿ ಎಂದು ಸಂಶೋಧಕರ ಸಂಘದ ಅಧ್ಯಕ್ಷ ಮಹೇಶ್ ಸೋಸಲೆ ಶ್ರೀಗಳಿಗೆ ಸವಾಲು ಹಾಕಿದ್ದಾರೆ.
ಆಹಾರ ನಮ್ಮ ಹಕ್ಕು ನಮ್ಮ ಸ್ವಾತಂತ್ರ್ಯ. ಸಸ್ಯಗಳಿಗೂ ಜೀವ ಇದೆ.ಯಾಕೆ ಅದನ್ನ ತಿನ್ನುತ್ತೀರಾ.ಆಹಾರ ಒಂದು ಧರ್ಮಕ್ಕೆ, ಜಾತಿಗೆ ಸಂಬಂಧಿಸಿದ್ದಲ್ಲ.ಹಂಸಲೇಖರವರು ಕ್ಷಮೆಯಾಚಿಸಬೇಕು ಎನ್ನುವವರು .ದನದ ಮಾಂಸ ತಿನ್ನದೇ ಇವರು ಬ್ರಾಹ್ಮಣರು ಒಬ್ಬ ಒಳ್ಳೇಯ ಬ್ರಾಹ್ಮಣರೇ ಅಲ್ಲ ಎಂದು
ವಿವೇಕಾನಂದರು ಹೇಳಿದ್ದಾರೆ.ಅವರ ವಿರುದ್ದ ಮರಣೋತ್ತರ ದೂರು ದಾಖಲಿಸಿ ಎಂದರು.
ಇನ್ನೂ ಮಹೇಶ್ ಸೋಸಲೆರವರ ದಲಿತ ಬ್ರಾಹ್ಮಣರಿಗೆ ವಿವಾಹ ಕಾರ್ಯಕ್ರಮ ನೇರ ಸವಾಲಿಗೆ ಶ್ರೀಗಳು ಅಸ್ತು ಎನ್ನುತ್ತಾರಾ ಅಥವಾ ಕೈ ಬಿಡ್ತಾರಾ ಕಾದಷ್ಟೇ ನೋಡಬೇಕಿದೆ.