ವಿಷಕಂಠ ಮೂರ್ತಿ ಇವರಿಗೆ ಡಾಕ್ಟರೇಟ್ ಪದವಿ ಪಡೆದ ಹಿನ್ನೆಲೆ ಬಡವರ ಬಂಧು ಅಭಿಮಾನಿಗಳ ಸಂಘದಿಂದ ಅಭಿನಂದನೆ

ನಂದಿನಿ ಮನುಪ್ರಸಾದ್ ನಾಯಕ್

ಜಯಲಕ್ಷಿಪುರಂ ಮೈಸೂರು ಮಹಾಜನ ಪದವಿಪೂರ್ವ
ಕಾಲೇಜು, ಇಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ
ಜಯಂತಿಯನ್ನು ಆಚರಿಸಲಾಯಿತು.


ಇದೇ ಸಂದರ್ಭದಲ್ಲಿ ಅಲ್ಲಿನ
ಪ್ರಾಂಶುಪಾಲರಾದ ವಿಷಕಂಠ ಮೂರ್ತಿ ಇವರಿಗೆ ಡಾಕ್ಟರೇಟ್ ಪದವಿ ಪಡೆದ ಹಿನ್ನೆಲೆ ಬಡವರ ಬಂಧು ಅಭಿಮಾನಿಗಳ ಸಂಘದಿಂದ ಶ್ರೀ ಮಹರ್ಷಿ
ವಾಲ್ಮೀಕಿ ಅವರಿಗೆ ಪುಷ್ಪಾರ್ಚನೆ ಸಲ್ಲಿಸಿ ಡಾಕ್ಟರೇಟ್ ಪಡೆದ ಪ್ರಾಂಶುಪಾಲರಿಗೆ
ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಯಲಕ್ಷಿö್ಮಪುರಂ ನಗರಪಾಲಿಕೆ
ಸದಸ್ಯರಾದ ಭಾಗ್ಯ ಮಾದೇಶ್ ಅವರು ಮಾತನಾಡಿ ಈ ದಿನ ಶ್ರೀ ಮಹರ್ಷಿ
ವಾಲ್ಮೀಕಿ ಜಯಂತಿ ಪ್ರಯುಕ್ತ ಅವರಿಗೆ ಪುಷ್ಪಾರ್ಚನೆ ಸಲ್ಲಿಸಿ ಡಾಕ್ಟರೇಟ್ ಪದವಿ
ಪಡೆದ ಪ್ರಾಂಶುಪಾಲರ ಬಗ್ಗೆ ಮಾತನಾಡಿ ಪ್ರಾಂಶುಪಾಲರು ಮಹಾಜನ
ಪದವಿಪೂರ್ವ ಕಾಲೇಜಿನಲ್ಲಿ ಒಳ್ಳೊಳ್ಳೆ ಕೆಲಸಗಳನ್ನು ಮಾಡುತ್ತಿದ್ದು ಮಕ್ಕಳಿಗೆ
ಒಳ್ಳೆಯ ವಿದ್ಯಾಭ್ಯಾಸದ ಮಾಡಿಸುವುದಲ್ಲದೆ, ದೈಹಿಕ ಶಿಕ್ಷಣಕ್ಕೂ ಹೆಚು ್ಚ ಒತ್ತು
ನೀಡುತ್ತಿದ್ದು ಮಕ್ಕಳಿಗೆ ಸಾಕಷ್ಟು ಅವಕಾಶಗಳನ್ನು ಮಾಡಿಕೊಡುತಿ ್ತದ್ದಾರೆ. ಇಂತಹವರಿಗೆ
ಡಾಕ್ಟರೇಟ್ ಸಿಕ್ಕಿರುವುದು ನನಗೆ ತುಂಬಾ ಸಂತೋಷವಾಗಿದೆ ಹಾಗೂ ಇವರೇ ನನ್ನ
ಮಗನಿಗೂ ಪಾಠ ಮಾಡಿರುವುದು ತಿಳಿದು ತುಂಬಾ ಸಂತೋಷವಾಯಿತು ಎಂದು
ತಿಳಿಸಿದರು .

ನಂತರ ಚೇತನ್ ವಿಷಕಂಠ ಅವರು ಮಾತನಾಡಿ ಇಂದು ಶ್ರೀ ಮಹರ್ಷಿ ವಾಲ್ಮೀಕಿ ಅವರ
ಜಯಂತಿಯ ಸಂದರ್ಭದಲ್ಲಿ ಅವರಿಗೆ ಪುಷ್ಪಾರ್ಚನೆ ಸಲ್ಲಿಸಲು ಅವಕಾಶ
ಮಾಡಿಕೊಟ್ಟ ರಮೇಶ್ ಮತ್ತು ಪಡುವಾರಳ್ಳಿ ಪಾಪಣ್ಣ, ಕೃಷ್ಣ ಅವರಿಗೆ ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುತ್ತೇನೆ.ಮುಂಬರುವ ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ
ಚುನಾವಣೆಯಲ್ಲಿ ಸ್ಪರ್ಥಿಸುತ್ತಿದ್ದೇನೆ ಎಂದು ತಿಳಿಸಿದರು.

ತದ ನಂತರ ಕಾಲೇಜಿನ ಪ್ರಾಂಶುಪಾಲರು ಮಾತನಾಡಿ
ಇವತ್ತು ಶ್ರೀ ಮಹರ್ಷಿ ವಾಲ್ಮಿಕಿ ಜಯಂತಿ ಆಚರಣೆ ಇದ್ದು ಈ ಸಂದರ್ಭದಲ್ಲಿ ನನಗೆ
ಸಿಕ್ಕ ಡಾಕ್ಟರೇಟ್‌ಅನ್ನು ಗೌರವಿಸಲು ನಗರಪಾಲಿಕೆ ಸದಸ್ಯರಾದ ಭಾಗ್ಯ
ಮಾದೇಶ್ , ಚೇತನ್ ಹಾಗೂ ನನ್ನ ಆತ್ಮೀಯ ಸ್ನೇಹಿತರಾದ ರಮೇಶ್
ಪಾಪಣ್ಣ, ಇವರಿಗೂ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ ಎಂದು
ತಿಳಿಸಿದರು.

ಈ ಸಂದರ್ಭದಲ್ಲಿ ಮಹಾಜನ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ಬಡವರ ಬಂಧು ಸಂಘದ ಅಧ್ಯಕ್ಷರಾದ ಪಡುವಾರ ಹಳ್ಳಿ
ಪಾಪಣ್ಣ ಸುಣ್ಣದಕೇರಿ ರಮೇಶ್ ಪಡುವಾರಹಳ್ಳಿ ಕೃಷ್ಣ ಕೋ ಆಪರೇಟಿವ್ ಸೊಸೈಟಿ
ಉಪಾಧ್ಯಕ್ಷರಾದ ಟೆಂಟ್ ರವಿ ಗೋವಿಂದರಾಜು ರಜತ್ ಹಾಗೂ ಸ್ನೇಹಿತರುಗಳು
ಹಾಜರಿದ್ದರು.

Leave a Reply

Your email address will not be published. Required fields are marked *