ನಂದಿನಿ ಮನುಪ್ರಸಾದ್ ನಾಯಕ್
*ಇಂದು ನವರಾತ್ರಿ ಮೊದಲನೇ ದಿನದ ಅಂಗವಾಗಿ. ಮೈಸೂರಿನ ತಿಲಕ್ ನಗರ ಹೈವೇ ಸರ್ಕಲ್ ಹತ್ತಿರ ಲಯನ್ಸ ಭವನದಲ್ಲಿ ಆಯೋಜಿಸಿದ,ಅಪ್ಪು ದಸರೋತ್ಸವ ಕಾರ್ಯಕ್ರಮವನ್ನು ಡಾ” ರವಿಕುಮಾರ್ ಟಿ,ತಾಲೋಕು ಆರೋಗ್ಯಾಧಿಕಾರಿಗಳು ಹಾಗೂ ಅದ್ಯಕ್ಷರು ಗಾನವೈದ್ಯಲೋಕ ಸಂಸ್ಥೆ ಮೈಸೂರು ಇವರು ವಿದ್ಯುಕ್ತವಾಗಿ ಟೇಪ್ ಕಟ್ ಮಾಡುವ ಮೂಲಕ ಚಾಲನೆ ನೀಡಿದರು. ಮೈಸೂರು ದಸರಾ ಹಬ್ಬದ ಪ್ರಯುಕ್ತ, ಶರ್ಟ್ ಬಟನ್ ಹಾಗೂ ಅಪ್ಪು ಅವರು ನಟಿಸಿರುವ ಚಿತ್ರಗಳು.ಮತ್ತು ಅವರು ಪಡೆದ ಪ್ರಶಸ್ತಿಗಳನ್ನು, ಅಪ್ಪು ಭಾವಚಿತ್ರ ರಚಿಸಲಾಗಿದ್ದು,ಇವೇಲ್ಲವನ್ನು, ಪ್ರದರ್ಶನಕ್ಕೆ ಇಡಲಾಗಿದೆ.ಇದರೊಂದಿಗೆ ದೇಶ, ವಿದೇಶಗಳ,ಅಂಚೆ ಚೀಟಿಗಳು, ಕರೆಸ್ಸಿಗಳು ಹಾಗೂ ನಾಣ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ, ದಿನಾಂಕ _11_10_2026 ರಿಂದ 19_10_2026 ವರೆಗೆ,ಬೆಳಿಗ್ಗೆ 10_ಗಂಟೆಯಿಂದ ರಾತ್ರಿ 08._ವರೆಗೂ ಈ ವಸ್ತು ತೆರೆದಿರುತ್ತದೆ,ಪ್ರವೇಶ ಶುಲ್ಕ, ದೊಡ್ಡವರಿಗೆ,50 ರೂ ಶಾಲಾ ಮಕ್ಕಳಿಗೆ 20 ರೂ,ಮೈಸೂರಿನ ಎಲ್ಲಾ ಸಾರ್ವಜನಿಕರು ಈ ವಸ್ತು ಪ್ರದರ್ಶನಕ್ಕೆ ಆಗಮಿಸಿ ಇವರ ಪ್ರಯತ್ನವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ, ಹಾಗೂ ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಕೊಳ್ಳಲು ಮನವಿ,ಈ ಕಾರ್ಯಕ್ರಮದಲ್ಲಿ ರಾಜಗೋಪಾಲ್ ರೆಡ್ಡಿ,ಲಯನ್ಸ ಸಂಸ್ಥೆ ಅದ್ಯಕ್ಷರಾದ ಸುರೇಶ್,ರಮೇಶ್, ಮಂಜುನಾಥ್, ಮೂರ್ತಿ,ಪ್ರದೀಪ್ ಮತ್ತು ಸಾರ್ವಜನಿಕರು ಹಾಜರಿದ್ದರು.
