ದಸರಾ ವಿಶೇಷ : ನಂದಿನಿ ಮನುಪ್ರಸಾದ್ ನಾಯಕ್
ಬೆಳಗ್ಗೆ 11:50 ರಿಂದ 12:13ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಬೆಳ್ಳಿ ರಥದಲ್ಲಿ ಕುಳಿತ
ಹಂಸವಾಹಿನಿ ಅಲಂಕಾರದಲ್ಲಿರುವ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮೂಲಕ ನಾಡಹಬ್ಬ ದಸರೆಗೆ ವಿಧ್ಯುಕ್ತ ಚಾಲನೆ ದೊರೆತಿದೆ.

ಇಂದು 416ನೇ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಪುಷ್ಪಾರ್ಚನೆ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಗವಿಸಿದ್ದೇಶ್ವರ ಶ್ರೀಗಳಿಗೆ ಚಾಮುಂಡೇಶ್ವರಿ ತಾಯಿಯ ವಿಗ್ರಹ ನೀಡಿ ಗೌರವಿಸಿದರು.
ನಾನು ಒಬ್ಬ ಜೋಳಿಗೆಯ ಸನ್ಯಾಸಿ, ನಾನೇನು ಕೇಳಬಲ್ಲೇ ಭಕ್ತಿಯಿಂದ ಪ್ರಾರ್ಥಿಸಬಹುದಷ್ಟೇ ಎಂದು ದಸರಾ ಉದ್ಘಾಟಿಸಿದ ಗವಿಸಿದ್ದೇಶ್ವರ ಶ್ರೀಗಳ ಆರಂಭದ ಮಾತು.ನಾನು ದಸರಾ ಉದ್ಘಾಟನೆ ಬಂದವನಲ್ಲ ಎಷ್ಟು ಜನ ಈ ಹಿಂದೆ ದಸರಾ ಉದ್ಘಾಟಿಸಿದ್ದಾರೆ.ನಾನು ಬಂದಿದ್ದು ಉದ್ಘಾಟನೆಗಲ್ಲ ಪ್ರಾರ್ಥನೆ ಸಲ್ಲಿಸೋದಕಷ್ಟೆ.ತಾಯಿ ಚಾಮುಂಡೇಶ್ವರಿ ತಾಯಿ ಟವರ್ ಆಫ್ ಪವರ್. ಭೂತ, ಭವಿಷ್ಯ, ವರ್ತಮಾನದ ತ್ರಿವೇಣಿ ಸಂಗಮ.
ದಸರಾ ಮಹೋತ್ಸವದ ಶುಭಾರಂಭದ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಗೆ ಹಂಸವಾಹಿನಿ ಅಲಂಕಾರ ಮಾಡಲಾಗಿದ್ದು, ದೇವಿಯ ಅಲಂಕಾರ ಭಕ್ತರಲ್ಲಿ ಭಕ್ತಿ ಭಾವವನ್ನು ಮೂಡಿಸಿದೆ. ನಾಡಿನ ಒಳಿತಿಗಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಿರುವ ಭಕ್ತರು ತಾಯಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ನಾಡದೇವತೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದದೊಂದಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಸಂಭ್ರಮದ ಚಾಲನೆ ದೊರೆತಿದೆ.