ಮೈಸೂರು:22 ಆಕ್ಟೋಬರ್ 2021
ನಂದಿನಿ
ಮೈಸೂರಿನ ಹೊರವಲಯದ ಶ್ರೀನಗರದಲ್ಲಿ ಜೋಡಿ ಕೊಲೆ ನಡೆದಿದ್ದು ಮೈಸೂರಿನ ಜನರು ಬೆಚ್ಚಿಬಿದ್ದಿದ್ದಾರೆ.
ಮಗನಿಂದಲೇ ತಂದೆ ಹಾಗೂ ತಂದೆಯ ಜೊತೆಗಿದ್ದ ಮಹಿಳೆಯ ಬರ್ಬರ ಕೊಲೆಯಾಗಿದೆ.
ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು.ಕೊಲೆ ಮಾಡಿದ ಸಾಗರ್
ಕೆ.ಜಿ ಕೊಪ್ಪಲು ನಿವಾಸಿ ಶಿವಪ್ರಕಾಶ್ ಪುತ್ರನಾಗಿದ್ದಾನೆ. ಶ್ರೀನಗರದ ನಿವಾಸಿ ಲತಾ.ಶಿವಪ್ರಕಾಶ್,ಲತಾ ಇಬ್ಬರನ್ನು ಮಚ್ಚಿನಿಂದ ಕೊಂದಿದ್ದಾನೆ.
ಲತಾ ಮೇಲೆ ಹಲ್ಲೆಗೆ ಮುಂದಾದಗ ತಡೆಯಲು ಬಂದ ಲತಾ ಪುತ್ರ ನಾಗಾರ್ಜುನನಿಗೂ ಮಚ್ಚಿನಿಂದ ಹಲ್ಲೆ ಮಾಡಿರುವ ಸಾಗರ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ
ಗಾಯಗೊಂಡಿರುವ ನಾಗಾರ್ಜುನನ್ನು ಆಸ್ಪತ್ರೆ ದಾಖಲಿಸಲಾಗಿದೆ.ಈ ಸಂಬಂಧ
ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.