ಮೈಸೂರು:18 ಅಕ್ಟೋಬರ್ 2021
ನ@ದಿನಿ
ದಸರಾ ಮುಗಿಸಿ ಹೊರಟ ಗಜಪಡೆಗೆ ಅರಮನೆಯಲ್ಲಿ ಗೌರವಪೂರ್ವಕ ಬೀಳ್ಕೊಡುಗೆ ನೀಡುತ್ತಿದ್ದರೇ ಇತ್ತ ಮಾವುತ ಕಾವಾಡಿ ಮಕ್ಕಳು ಮುಡಿ ತುಂಬ ಸೇವಂತಿಗೆ ಹೂ ಮುಡಿದು ಸಂಭ್ರಮಿಸುತ್ತಿರುವ ದೃಶ್ಯ ಎಲ್ಲರನ್ನ ಆಕರ್ಷಿಸಿತು.
ಪೂಜೆ ವೇಳೆ ಗಜಪಡೆಗೆ ಹಾಕಿದ್ದ ಸೇವಂತಿಗೆ ಹೂವನ್ನ ಸಂಗ್ರಹಿಸಿದ ಇಬ್ಬರು ಹೆಣ್ಣು ಮಕ್ಕಳು ಹೂ ಮುಡಿದು ಅಂಗಳದಲ್ಲಿ ಸುತ್ತಾಡಿದರು.ನಂತರ ತಮ್ಮ ಆನೆಯನ್ನ ಲಾರಿಯಲ್ಲಿ ಹತ್ತಿಸಿದ ಬಳಿಕ ಅರಮನೆಗೊಂದು ಬಾಯ್ ಬಾಯ್ ಹೇಳಿ ಮಕ್ಕಳು ಹೊರಟೆಬಿಟ್ಟರು.
ಬದುಕಿಗೆ ಬಡತನವಿರಬಹುದು ಖುಷಿಗೆ ಬಡತನ ಇರೋದಿಲ್ಲ ಎಂಬುದಲ್ಲಿ ಈ ಛಾಯಾಚಿತ್ರ ಒಂದು ಚಿಕ್ಕ ಉದಾಹರಣೆ