ಚಾಮುಂಡಿ ತಾಯಿ ದರ್ಶನ ಪಡೆದ ತಮಿಳು ನಟ ಸೂಪರ್‌ಸ್ಟಾರ್ ರಜನಿಕಾಂತ್

ಸಿನಿಮಾ ವಿಶೇಷ: ನಂದಿನಿ ಮನುಪ್ರಸಾದ್

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ.


ರಜನಿಕಾಂತ್ ಅವರು ತಮ್ಮ ಮುಂಬರುವ ‘ಧರ್ಮನ್’ (Dharman) ಚಿತ್ರದ ಶೂಟಿಂಗ್‌ಗಾಗಿ ಮೈಸೂರಿಗೆ ಆಗಮಿಸಿದ್ದಾರೆ ಮೈಸೂರಿನಲ್ಲಿದ್ದ ಸಮಯದಲ್ಲಿ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದೇವಿಯ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.ದೇವಾಲಯದ ಮುಂಭಾಗ ರಜನಿಕಾಂತ್ ಅಭಿಮಾನಿಗಳು ಅವರನ್ನ ನೋಡಲು ಮುಗಿಬಿಳುತ್ತಿದ್ದರು.ಅಭಿಮಾನಿಗಳನ್ನ ಕಂಡ ರಜನಿಕಾಂತ್ ಅವರು ಅಭಿಮಾನಿಗಳತ್ತ ಕೈ ಬೀಸಿ ನಮಸ್ಕರಿಸಿದರು.

ಸೋಮನಾಥಪುರದಲ್ಲಿ ಶೂಟಿಂಗ್: ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಐತಿಹಾಸಿಕ ಹೊಯ್ಸಳರ ಕಾಲದ ಪ್ರಸಿದ್ಧ ಸೋಮನಾಥಪುರ ಕೇಶವ ದೇವಾಲಯದ ಆವರಣದಲ್ಲಿ ‘ಧರ್ಮನ್’ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.

ಆಟೋದಲ್ಲಿ ಬಂದ ತಲೈವಾ: ಚಿತ್ರೀಕರಣದ ಸೆಟ್‌ಗೆ ರಜನಿಕಾಂತ್ ಅವರು ಅತ್ಯಂತ ಸರಳವಾಗಿ ಆಟೋ ರಿಕ್ಷಾದಲ್ಲಿ ಎಂಟ್ರಿ ಕೊಡುವ ಮೂಲಕ ಅಲ್ಲಿದ್ದ ಅಭಿಮಾನಿಗಳಿಗೆ ಮತ್ತು ಚಿತ್ರತಂಡಕ್ಕೆ ಅಚ್ಚರಿ ಮೂಡಿಸಿದರು. ನೆಚ್ಚಿನ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದರು.

ಕರ್ನಾಟಕಕ್ಕೆ ಬಂದಿದ್ದ ವೇಳೆ ರಜನಿಕಾಂತ್ ಅವರು ಬೆಂಗಳೂರಿನ ಜಯನಗರದ ಬಸ್ ಡಿಪೋಗೂ ಭೇಟಿ ನೀಡಿ ತಾವು ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ದಿನಗಳ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದರು.

Leave a Reply

Your email address will not be published. Required fields are marked *