ದಸರಾ ವಿಶೇಷ:ನಂದಿನಿ ಮನುಪ್ರಸಾದ್ ನಾಯಕ್
ಮೈಸೂರು:ಮಕ್ಕಳ ನಿಯಮಿತ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಪ್ರತಿ ವರ್ಷ ಗಜಪಡೆ ಅರಮನೆಗೆ ಬಂದ ತಕ್ಷಣವೇ ಶಿಕ್ಷಣ ಇಲಾಖೆಯು ಅರಮನೆ ಆವರಣದಲ್ಲಿ ವಿಶೇಷವಾಗಿ ಶಾಲೆಯನ್ನು ತೆರೆಯುತ್ತದೆ.


ದಸರಾ ಆನೆಗಳ ಜೊತೆ ಕಾಡಿನಿಂದ ಬರುವ ಮಾವುತರ ಮಕ್ಕಳು ಸುಮಾರು ಎರಡು ತಿಂಗಳ ಕಾಲ ಮೈಸೂರಿನಲ್ಲೇ ಉಳಿಯಬೇಕಾಗುತ್ತದೆ. ಈ ಅವಧಿಯಲ್ಲಿ ಅವರ ಓದು ನಿಲ್ಲಬಾರದು ಎಂಬ ಕಾರಣಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ವಿಶೇಷ ಕ್ರಮ ಕೈಗೊಳ್ಳುತ್ತದೆ.
ಇಂದು ಅರಮನೆ ಆವರಣದಲ್ಲಿ 2026 ದಸರ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗೆ ಕಲಿಕೆಯ ಅಂತರವನ್ನು ನಿವಾರಿಸಲು ಮತ್ತು ಕುಟುಂಬದೊಂದಿಗೆ ಬಂದ ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಅರಮನೆ ಆವರಣದಲ್ಲಿ ತಾತ್ಕಾಲಿಕ ಶಾಲೆ ಆರಂಭವಾಗಿದೆ.
ಸಾಮಾನ್ಯವಾಗಿ ಅರಮನೆಯ ಜಯಮಾರ್ತಾಂಡ ಗೇಟ್ ಬಳಿ ಇರುವ ಕೊಠಡಿಗಳಲ್ಲಿ ಅಥವಾ ತಾತ್ಕಾಲಿಕ ಶೆಡ್ಗಳಲ್ಲಿ ಈ ಶಾಲೆಯನ್ನು ವ್ಯವಸ್ಥೆ ಮಾಡಲಾಗುತ್ತದೆ.
ತಾತ್ಕಾಲಿಕ ಶಾಲೆಗೆ ಅಧಿಕೃತವಾಗಿ ಜಿಲ್ಲಾ ಉಪನಿರ್ದೇಶಕರಾದ ಡಿ.ಉದಯ ಕುಮಾರ್ ರವರು ಚಾಲನೆ ನೀಡಿದರು.
ತರಗತಿಗಳು ಮತ್ತು ಶಿಕ್ಷಕರು: 1 ರಿಂದ 10 ನೇ ತರಗತಿಯವರೆಗಿನ ಮಕ್ಕಳಿಗೆ ಪಾಠ ಮಾಡಲು ವಿಶೇಷ ಶಿಕ್ಷಕರನ್ನು ಮತ್ತು ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ.
ಪೋಷಕರಿಗೆ ಮತ್ತು ಮಕ್ಕಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ಮಕ್ಕಳಿಗೆ ಬರೆಯಲು ಪುಸ್ತಕಗಳು, ಲೇಖನ ಸಾಮಗ್ರಿಗಳು, ಮಧ್ಯಾಹ್ನದ ಬಿಸಿಯೂಟ ಮತ್ತು ಪೌಷ್ಟಿಕ ಆಹಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಜೊತೆಗೆ ಕ್ರೀಡೆ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಗುತ್ತದೆ.
ಸಿಹಿ ಹಂಚಿ ಶಾಲೆಗೆ ನಿರಂತರವಾಗಿ ಬರುವಂತೆ ಕರೆ ನೀಡಲಾಯಿತು.

ದಸರ ಮುಗಿಸಿ ಗಜಪಯಣ ಹಿಂತಿರುಗುವರೆಗೂ ಪ್ರತಿ ನಿತ್ಯ ಶಾಲೆ ಇರುತ್ತದೆ ಮತ್ತು ಅಕ್ಷಯ ಪಾತ್ರೆ ಫೌಂಡೇಷನ್ ವತಿಯಿಂದ ಮಧ್ಯಾಹ್ನ ದ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ DYPC ಶೋಭ , BEO ಕೃಷ್ಣ, BRC ಎಂ ಬಿ ಶ್ರೀಕಂಠಸ್ವಾಮಿ , ACF ಪ್ರಭುಗೌಡ ,RF ರೇಷ್ಮ ಮತ್ತು ವಲಯದ ಅನುಪಾಲನಾಧಿಕಾರಿಗಳು ಹಾಜರಿದ್ದರು.