ವಿಶೇಷ ಆಹಾರದ ಉಂಡೆ ಕೊಟ್ಟು ದಸರಾ ಆನೆಗಳ ತೂಕ ಹೆಚ್ಚಿಸಲು ಕಸರಸ್ತು ಗಂಡಾನೆಗೆಷ್ಟು? ಹೆಣ್ಣಾನೆಗೆಷ್ಟು?

ದಸರಾ ವಿಶೇಷ: ನಂದಿನಿ ಮನುಪ್ರಸಾದ್ ನಾಯಕ್

“*ದಸರಾ ಆನೆಗಳ ಭುಜಬಲ ಹೆಚ್ಚಿಸಲು ದೊಡ್ಡ ದೊಡ್ಡ ಆಹಾರದ ಉಂಡೆ*”


ಮೈಸೂರು:ಕೋಟ್ಯಾಂತರ ಜನರನ್ನ ತಮ್ಮ ನಡಿಗೆಯ ಮೂಲಕ 750 ಕೆಜಿ ತೂಕದ ಅಂಬಾರಿ ಹೊತ್ತು ಸಾಗುವ ದಸರಾ ಆನೆಗಳಿಗೆ ತೂಕ ಹೆಚ್ಚಿಸಲು ದಸರಾಗೆ ಮುನ್ನ ಅಂದರೇ ಸುಮಾರು 2 ತಿಂಗಳ ಮೊದಲೆ ಅರಮನೆಗೆ ಕರೆತಂದು ಅರಣ್ಯ ಇಲಾಖೆ ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಲು ಆರಂಭಿಸಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗಾಗಿ ಸಜ್ಜಾಗುವ ಗಜಪಡೆಗೆ ದೈಹಿಕ ಶಕ್ತಿ, ತೂಕ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನಕ್ಕೆ ಎರಡು ಬಾರಿ (ಬೆಳಗ್ಗೆ ಮತ್ತು ಸಂಜೆ) ವಿಶೇಷ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಈ ವಿಶೇಷ ಮೆನುವಿನಲ್ಲಿ ಧಾನ್ಯಗಳು, ಕಾಳುಗಳು ಮತ್ತು ತರಕಾರಿಗಳ ಮಿಶ್ರಣವಿರುತ್ತದೆ.

ದಸರಾ ಆನೆಗಳಿಗೆ ನೀಡುವ ಪೌಷ್ಟಿಕ ಆಹಾರವನ್ನು ದೊಡ್ಡ ಉಂಡೆಗಳನ್ನಾಗಿ (ಲಡ್ಡು) ಮಾಡಿ ನೀಡಲಾಗುತ್ತದೆ.

“ಧಾನ್ಯ , ಕಾಳುಗಳು,ತರಕಾರಿಗಳು “

ಬೇಯಿಸಿದ ಉದ್ದಿನ ಕಾಳು, ಹೆಸರು ಕಾಳು, ಗೋಧಿ ಮತ್ತು ಕುಸುಬಲು ಅಕ್ಕಿ ,
ಕ್ಯಾರೆಟ್, ಬೀಟ್‌ರೂಟ್, ಮೂಲಂಗಿ, ಸೌತೆಕಾಯಿ, ಹೂಕೋಸು, ಎಲೆಕೋಸು ಮತ್ತು ಈರುಳ್ಳಿ ಮಿಶ್ರಣ ಮಾಡಲಾಗುತ್ತದೆ.

ಕುಸರೆ (Kusure): ಒಣ ಹುಲ್ಲು, ಭತ್ತ, ಬೆಲ್ಲ ಮತ್ತು ಕಾಯಿತುರಿಯನ್ನು ಒಳಗೊಂಡ ವಿಶೇಷ ಮಿಶ್ರಣ ಗಜಪಡೆಗೆ ನೀಡಲಾಗುತ್ತದೆ.

ಆಹಾರದ ಪ್ರಮಾಣ ಮತ್ತು ದೈನಂದಿನ ಪದ್ಧತಿ

ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪಶುವೈದ್ಯರ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಆನೆಗಳ ಲಿಂಗ ಮತ್ತು ತೂಕಕ್ಕೆ ಅನುಗುಣವಾಗಿ ಆಹಾರವನ್ನು ಹಂಚಲಾಗುತ್ತದೆ:

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಗಂಡು ಆನೆಗಳಿಗೆ13 ರಿಂದ 14 ಕೆ.ಜಿ.600 ರಿಂದ 700 ಕೆ.ಜಿ.

ಹೆಣ್ಣು ಆನೆಗಳು11 ರಿಂದ 12 ಕೆ.ಜಿ.500 ರಿಂದ 600 ಕೆ.ಜಿ. ನೀಡಲಾಗುತ್ತದೆ.

ಇದಲ್ಲದೆ ಪ್ರತಿನಿತ್ಯ ಆನೆಗಳಿಗೆ ನೂರಾರು ಕೆಜಿಯಷ್ಟು ಆಲದ ಮರದ ಸೊಪ್ಪು, ಹಸಿ ಹುಲ್ಲು ಮತ್ತು ಭತ್ತದ ಒಣ ಹುಲ್ಲನ್ನು ಮುಖ್ಯ ಆಹಾರವಾಗಿ ನೀಡಲಾಗುತ್ತದೆ.

ಪ್ರತಿದಿನ ಆನೆಗಳು ತಾಲೀಮು ಮುಗಿಸಿ ಬಂದ ತಕ್ಷಣವೇ ಅನೆಯ ಮಾವುತರು,ಕಾವಾಡಿಗಳು ದೊಡ್ಡ ತಟ್ಟೆಯಲ್ಲಿ ಪೌಷ್ಟಿಕಾಂಶ ಆಹಾರವನ್ನು ಕೈಯಲ್ಲಿ ದಪ್ಪ ದಪ್ಪ ಉಂಡೆಗಳನ್ನ ಕಟ್ಟಿ ಆನೆಗಳಿಗೆ ತಿನ್ನಿಸುತ್ತಾರೆ.ಆನೆಗಳು ಕೂಡ ಖುಷಿಯಿಂದಲೇ ಆಹಾರ ಸೇವಿಸುತ್ತವೆ.

ವಿಶೇಷ ಸೂಚನೆ: ದಸರಾ ಗಜಪಡೆಗಳು ಪ್ರತಿದಿನ ಎರಡು ಬಾರಿ ತಾಲೀಮು ನಡೆಸುತ್ತವೆ ಈ ವೇಳೆ ನೋಡಲು ಬರುವ ಸಾರ್ವಜನಿಕರು ಆನೆಗಳಿಗೆ ಯಾವುದೇ ಆಹಾರ ನೀಡುವಂತಿಲ್ಲ ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.

Leave a Reply

Your email address will not be published. Required fields are marked *