ಕಾಸಿದ್ದವರಿಗೆ ಬೇಗ ದರ್ಶನ ನೀಡುವ ಚಾಮುಂಡಿ ತಾಯಿ,ಕಾಸಿಲ್ಲದವರು ಗಂಟೆಗಟ್ಟಲೆ ನಿಂತು ದರ್ಶನ ಪಡೆಯುವ ಸದಾವಕಾಶ

ನಂದಿನಿ ಮನುಪ್ರಸಾದ್ ನಾಯಕ್

ಆಷಾಡ ಮಾಸ ಬಂತೆಂದರೇ ಸಾಕು ಚಾಮುಂಡಿ ತಾಯಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸುತ್ತಾರೆ.


ಹೌದು
ಚಾಮುಂಡೇಶ್ವರಿ ಅಮ್ಮ ಅಂದರೇ ಜನರಲ್ಲಿ ಅಪಾರ ನಂಬಿಕೆ.ಕೆಲವರು ನೋಡೋಕೆ ಬಂದರೇ ಮತ್ತೊಬ್ಬರು ಹರಕೆ ತೀರಿಸೋಕೆ ಆಗಮಿಸಿರುತ್ತಾರೆ ಮಗದೊಬ್ಬರು ನಿಮ್ಮಂದ ಅಭಿವೃದ್ಧಿ ಆಗಿದೆ ಇನ್ನಷ್ಟು ಅಭಿವೃದ್ಧಿ ಮಾಡು ಅಂತ ಬೇಡಿಕೆ ಇಟ್ಟು ಬರುತ್ತಾರೆ.ಇನ್ನೂ ಕೆಲವರು ಉದ್ಯೋಗಕ್ಕಾಗಿ,ವಿವಾಹಕ್ಕಾಗಿ,ಮಕ್ಕಳ ಪ್ರಾಪ್ತಿಗಾಗಿ ಬೇಡಿಕೆ ಇಟ್ಟು ಹೊರಡುತ್ತಾರೆ.ಒಬ್ಬೊಬ್ಬರು
ಮುತೈದೆ ಭಾಗ್ಯ ಕೋಡು ಅಂತಾ ಕೇಳಿ ಹೋಗ್ತಾರೆ.ಎಲ್ಲರ ಬೇಡಿಕೆಯನ್ನು ಈಡೇರಿಸುತ್ತಾ ಬರುತ್ತಿರುವ ಶ್ರೀಚಾಮುಂಡೇಶ್ವರ ತಾಯಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾಳೆ.

ಆಷಾಢ ಶುಕ್ರವಾರದ ಅಂಗವಾಗಿ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಭಕ್ತಸಾಗರವೇ ಹರಿದುಬಂದಿದೆ.
ಮುಂಜಾನೆಯಿಂದಲೇ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ವಿವಿಧ ಬಗೆಯ ಹೂಗಳಿಂದ ಗರ್ಭಗುಡಿ, ದೇವಸ್ಥಾನ ಹಾಗೂ ಗೋಪುರವನ್ನು ಆಕರ್ಷಕವಾಗಿ ಅಲಂಕರಿಸಲಾಗಿದ್ದು, ಹಸಿರು ಮತ್ತು ಕೆಂಪು ಬಣ್ಣದ ಸೀರೆಯಲ್ಲಿ ಲಕ್ಷ್ಮೀ ಅಲಂಕಾರ ಧರಿಸಿದ ಉತ್ಸವಮೂರ್ತಿ ಭಕ್ತರ ಗಮನ ಸೆಳೆಯಿತು.

ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಬಾದಾಮಿ ಹಾಲು ಹಾಗೂ ಬಿಸ್ಕೆಟ್ ವಿತರಿಸಲಾಗುತ್ತಿದೆ.

ಉಳ್ಳವರಿಗೆ ಕ್ಷಣಾರ್ಧದಲ್ಲಿ ತಾಯಿ ದರ್ಶನ ಪಡೆಯುವ ಸದಾವಕಾಶ .

ಹೌದು ಕಾಸಿದ್ದವರಿಗೆ ಬೇಗ ದರ್ಶನ ನೀಡುವ ಚಾಮುಂಡಿ ತಾಯಿ,ಕಾಸಿಲ್ಲದವರು ಗಂಟೆಗಟ್ಟಲೆ ನಿಂತು ದರ್ಶನ ಪಡೆಯುವ ಸದಾವಕಾಶ.ಮೈಸೂರು ಜಿಲ್ಲಾಡಳಿತ,ಚಾಮುಂಡಿ ದೇವಸ್ಥಾನದ ಪ್ರಾಧಿಕಾರ 2000 ಟಿಕೇಟ್ ವ್ಯವಸ್ಥೆ ಕಲ್ಪಿಸಿದ್ದಾರೆ.ಲಲಿತ ಮಹಲ್ ಗ್ರೌಂಡ್ ನಿಂದ ಚಾಮುಂಡಿ ಬೆಟ್ಟಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಮುಂಜಾನೆ 6:30 ರಿಂದ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಆರಂಭವಾಗಿದೆ.ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಚತೆಗಾಗಿ ಅಲ್ಲಲ್ಲಿ ಕಸದ ಡಬ್ಬಿ ಇರಿಸಲಾಗಿದೆ. ಪ್ರಸಾದ ವಿತರಿಸುವವರಿಗೆ ಲಲಿಲ ಮಹಲ್ ಮೈದಾನದಲ್ಲಿ ವಿತರಿಸುವ ವ್ಯವಸ್ಥೆ ಮಾಡಿಕೊಡಲಾಗಿದೆ.

ಯಾವುದೇ ನೂಕುನುಗ್ಗಲು ಉಂಟಾಗದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ಹಾಗೂ ಸಂಚಾರ ವ್ಯವಸ್ಥೆ ಕಲ್ಪಿಸಿದೆ.

Leave a Reply

Your email address will not be published. Required fields are marked *