ಹಾಡು ನಿಲ್ಲಿಸಿ ಇಹಲೋಕಕ್ಕೆ ಪಯಣ ಬೆಳೆಸಿದ ಗಾನಕೋಗಿಲೆ ಎಸ್.ಜಾನಕಿ

ವಿಶೇಷ ವರದಿ:ನಂದಿನಿ ಮನುಪ್ರಸಾದ್ ನಾಯಕ್

ಆಂಧ್ರಪ್ರದೇಶದಲ್ಲಿ ಜನಿಸಿದ್ದರೂ ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು.
ʼಭಾರತದ ನೈಟಿಂಗೇಲ್‌ʼ ಅಂತಲೇ ಹೆಸರುವಾಸಿಯಾಗಿದ್ರು
80ರ ದಶಕದಲ್ಲಿ ಜನಪ್ರಿಯತೆ ಗಳಿಸಿದ್ದರು. ಸುಮಾರು 48 ಸಾವಿರ ಗೀತೆಗಳನ್ನು ಹಾಡಿದ್ದರು ಎಸ್.ಜಾನಕಿರವರು ಕನ್ನಡದಲ್ಲೇ ಹೆಚ್ಚು ಹಾಡುಗಳನ್ನು ಹಾಡಿದ್ದರು ಎನ್ನುವುದೇ ಹೆಮ್ಮೆಯ ವಿಷಯ.


ಇಳಿ‌ಸಂಜೆಯಲ್ಲಿ
ಖ್ಯಾತ ಗಾಯಕಿ, ಗಾನಕೋಗಿಲೆ ಎಸ್‌.ಜಾನಕಿ ಇನ್ನಿಲ್ಲವಾಗಿದ್ದಾರೆ.
ಖ್ಯಾತ ಗಾಯಕಿ ಎಸ್‌.ಜಾನಕಿ ರವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೈಸೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಮಗ ಮೃತಪಟ್ಟ ಬಳಿಕ ಮೈಸೂರಿನ ಬೋಗಾದಿಯ ಆಪ್ತರ ಮನೆಯಲ್ಲಿ ಎಸ್‌.ಜಾನಕಿ ಅವರು ವಾಸವಾಗಿದ್ದರು

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಿಸಿದ ಎಸ್.ಜಾನಕಿ ಅವರಿಗೆ ಬಾಲ್ಯದಿಂದಲೇ ಸಂಗೀತದ ಮೇಲೆ ವಿಶೇಷ ಆಸಕ್ತಿ ಇತ್ತು. ಯಾವುದೇ ಔಪಚಾರಿಕ ಸಂಗೀತ ಶಿಕ್ಷಣವಿಲ್ಲದಿದ್ದರೂ, ತಮ್ಮ ಸಹಜ ಪ್ರತಿಭೆ ಮತ್ತು ನಿರಂತರ ಅಭ್ಯಾಸದಿಂದ ಅವರು ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಹಿನ್ನೆಲೆ ಗಾಯಕಿಯಾಗಿ ಹೊರಹೊಮ್ಮಿದರು.

ಸಂಗೀತದ ಮೇಲಿನ ಆಸಕ್ತಿಯಿಂದ ಚೆನ್ನೈಗೆ ತೆರಳಿ ಅಲ್ಲಿ ಎವಿಎಂ ಸ್ಟುಡಿಯೋದಲ್ಲಿ ಗಾಯಕಿಯಾಗಿ ಅವಕಾಶ ಪಡೆದರು. 1950ರ ದಶಕದ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ವಿಭಿನ್ನ ಶೈಲಿಯ ಹಾಡುಗಳು, ಶಾಸ್ತ್ರೀಯ ಸಂಗೀತ, ಜಾನಪದ, ಭಕ್ತಿಗೀತೆ, ಪ್ರೇಮಗೀತೆ ಮಕ್ಕಳ ಧ್ವನಿ ಸೇರಿದಂತೆ ಯಾವುದೇ ರೀತಿಯ ಹಾಡಿಗೆ ತಮ್ಮ ಧ್ವನಿಯನ್ನು ಹೊಂದಿಸಿಕೊಳ್ಳುವ ಅಪರೂಪದ ಸಾಮರ್ಥ್ಯ ಹೊಂದಿದ್ದರು. ಕನ್ನಡ ಚಿತ್ರರಂಗದಲ್ಲಿ ಎಸ್. ಜಾನಕಿ ಅವರ ಕೊಡುಗೆ ಅತ್ಯಂತ ವಿಶಿಷ್ಟವಾಗಿದೆ. ಜಿ.ಕೆ. ವೆಂಕಟೇಶ್, ಇಳಯರಾಜ, ವಿಜಯಭಾಸ್ಕರ್, ರಾಜನ್-ನಾಗೇಂದ್ರ, ಉಪೇಂದ್ರಕುಮಾರ್, ಹಂಸಲೇಖ ಸೇರಿದಂತೆ ಅನೇಕ ಸಂಗೀತ ನಿರ್ದೇಶಕರ ಸಂಗೀತದಲ್ಲಿ ಅವರು ಅಮರಗೀತೆಗಳನ್ನು ನೀಡಿದ್ದಾರೆ. ಡಾ. ರಾಜ್‌ಕುಮಾರ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಪಿ.ಬಿ. ಶ್ರೀನಿವಾಸ್ ಸೇರಿದಂತೆ ಹಲವು ದಿಗ್ಗಜ ಗಾಯಕರೊಂದಿಗೆ ಅವರು ಹಾಡಿದ ಹಾಡುಗಳು ಸಂಗೀತಾಸಕ್ತರ ಮೆಚ್ಚುಗೆ ಗಳಿಸಿವೆ.

ಕನ್ನಡದಲ್ಲೇ ಹೆಚ್ಚು ಹಾಡುಗಳನ್ನು ಹಾಡಿದ್ದರು. 4 ರಾಷ್ಟ್ರೀಯ ಪ್ರಶಸ್ತಿ, 33 ವಿವಿಧ ರಾಜ್ಯ ಪ್ರಶಸ್ತಿ, ಮೈಸೂರು ವಿವಿ ಗೌರವ ಡಾಕ್ಟರೇಟ್‌, ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

ಖ್ಯಾತ ಗಾಯಕಿ ಎಸ್. ಜಾನಕಿ ಅವರ ಅಂತಿಮ ದರ್ಶನಕ್ಕೆ ನಾಳೆ ಬೆಳಿಗ್ಗೆ 7.30 ರಿಂದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ.

ನಾಳೆ ಸಂಜೆ ಕನಿಯನಹುಂಡಿಯ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಗಾಯಕಿ ಎಸ್.ಜಾನಕಿರವರ ನಿಧನಕ್ಕೆ ಸಿಎಂ ಡಿಕೆ ಶಿವಕುಮಾರ್,ಮಾಜಿ ಸಿಎಂ ಸಿದ್ದರಾಮಯ್ಯ,ಸಂಸದ ಯಾದುವೀರ್ ಒಡೆಯರ್,ಪ್ರತಾಪ್ ಸಿಂಹ,ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ,ಶಾಸಕರಾದ ಜಿ.ಟಿ.ದೇವೇಗೌಡ ಸೇರಿದಂತೆ ಗಣ್ಯತಿ ಗಣ್ಯರು,ಅಪಾರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಮೇರು ಗಾಯಕಿ ಎಸ್.ಜಾನಕಿರವರನ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೇರವೇರಿಸಲು ಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *