ಉತ್ತಮ ಶಿಕ್ಷಣ ಮತ್ತು ಆರೋಗ್ಯ ದೇಶದ ಪ್ರಗತಿಯ ಸಂಕೇತ – ಮುಖ್ಯ ಶಿಕ್ಷಕ ಬಸವರಾಜು.

ನಂದಿನಿ ಮನುಪ್ರಸಾದ್ ನಾಯಕ್

 

ಉತ್ತಮ ಶಿಕ್ಷಣ ಮತ್ತು ಆರೋಗ್ಯ ದೇಶದ ಪ್ರಗತಿಯ ಸಂಕೇತ – ಮುಖ್ಯ ಶಿಕ್ಷಕ ಬಸವರಾಜು.


ಚಂದಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ
ಮುಖ್ಯ ಶಿಕ್ಷಕ ಬಸವರಾಜು ಅಭಿಮತ.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೋಕಿನ ಸಿಬಿಹುಂಡಿ ಕ್ಲಸ್ಟರ್ ವ್ಯಾಪ್ತಿಯ ಚಂದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೈಸೂರಿನ ಕುವೆಂಪುನಗರದ (ಅಮೇರಿಕಾ ನಿವಾಸಿ) ಅಮೋಘ್ ಅರಸ್ ರವರು ಮಕ್ಕಳಿಗೆ ಸಮವಸ್ತ್ರವನ್ನು ಮತ್ತು ಅಗ್ರಹಾರದ ಸಮಾಜ ಸೇವಕರು ಆಶ್ರಯ ಸಮಿತಿ ಸದಸ್ಯರಾದ ಮಹಮ್ಮದ್ ಫಾರೂಖ್ ರವರು ತಮ್ಮ ಹುಟ್ಟು ಹಬ್ಬದ ನಿಮಿತ್ತ ಯಾವ ಆಡಂಬರವಿಲ್ಲದೆ ಅದರ ಬದಲಾಗಿ 47 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಗಳನ್ನು ವಿತರಿಸಿ ಸಾರ್ಥಕತೆ ಮೆರೆದರು.ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಾದಲಾಂಬಿಕೆ,ಮುಖ್ಯೋಪಾಧ್ಯಾಯರಾದ ಶ್ರೀ ಬಸವರಾಜು,ಸಹ ಶಿಕ್ಷಕರಾದ ಶ್ರೀ ಜಯರಾಮ್,ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ.ಎಸ್, ಶ್ರೀಮತಿ ಶಾಂಭವಿ,ಸಮಾಜ ಸೇವಕರಾದ ರೂಪೇಶ್, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮೈಸೂರು ನಗರ ಪೊಲೀಸ್ ಘಟಕದ ಶ್ರೀ ಮಹೇಶ್ ಕುಮಾರ್.ಬಿ ರವರುಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ನೋಟ್ ಪುಸ್ತಕಗಳನ್ನು ವಿತರಿಸಿದ ನಂತರ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಬಸವರಾಜುರವರು ಸರ್ಕಾರಿ ಶಾಲೆಗಳು ಇಂದು ಉತ್ತಮ ಸೌಲಭ್ಯಗಳನ್ನು ಹೊಂದಿದ್ದು,ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ.ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ.ಆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಬೇಕಿರುವುದು ಶಿಕ್ಷಕರ,ಪೋಷಕರ ಮತ್ತು ಸಮಾಜದ ಜವಾಬ್ದಾರಿಯೂ ಆಗಿದೆ.ಆ ದಿಸೆಯಲ್ಲಿ ಸರ್ಕಾರ ಮತ್ತು ಇಲಾಖೆಯಿಂದಷ್ಟೇ ಸಂಪೂರ್ಣವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ.ಅದರ ಜೊತೆಗೆ ಪೋಷಕರು,ದಾನಿಗಳ ಸಹಕಾರವೂ ಅತ್ಯಗತ್ಯ.ಯಾವ ದೇಶದಲ್ಲಿ ಉತ್ತಮವಾದ ಶಿಕ್ಷಣ ಮತ್ತು ಆರೋಗ್ಯವನ್ನು ಕೊಡುತ್ತಾರೋ ಆ ದೇಶ ಖಂಡಿತವಾಗಿಯೂ ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ.ಮಕ್ಕಳಿಗೆ ಇಂದು ಗುಣಮಟ್ಟದ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರವನ್ನು ಸಹ ನೀಡುತ್ತಿದ್ದು ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡ ಮಕ್ಕಳು ಸಾಧನೆಯ ಗುರಿ ಮುಟ್ಟಬೇಕು.ಸಮಾಜದಲ್ಲಿ ಹಣವಂತರು,ಗುಣವಂತರು ಬಹಳಷ್ಟಿದ್ದಾರೆ ಆದರೆ ಸಹಾಯ ಮಾಡುವ ಮನಸ್ಸು ಎಲ್ಲರಿಗೂ ಬರುವುದಿಲ್ಲ.ಆದರೆ ಸಹಾಯ ಮಾಡಬೇಕೆಂಬ ಹೃದಯ ವೈಶಾಲ್ಯತೆ ಬೆಳೆಸಿಕೊಂಡು ಸಮಾಜದ ಋಣ ತೀರಿಸುವ ಕೆಲಸ ಮಾಡುವವರನ್ನು ಎಲ್ಲರೂ ಗೌರವಿಸಬೇಕು.ಆ ಮೂಲಕ ಮತ್ತಷ್ಟು ಸೇವೆ ಮಾಡಲು ಅವರಿಗೆ ಉತ್ಸಾಹ ಮೂಡುತ್ತದೆ ಎಂದು ದಾನಿಗಳನ್ನು ಪ್ರಶಂಸಿಸಿದರು.

47 ವಿದ್ಯಾರ್ಥಿಗಳಿಗೆ 20000ರೂ ಮೌಲ್ಯದ ಸಮವಸ್ತ್ರ ಮತ್ತು 10000ಮೌಲ್ಯದ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *