ನಂದಿನಿ ಮನುಪ್ರಸಾದ್ ನಾಯಕ್
ನಾಲ್ವಡಿ ಕೃಷ್ಣರಾಜರ ಕಾರ್ಯ ಅಜರಾಮರ ಟಿ ಎಸ್ ಶ್ರೀವತ್ಸ

ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ ಶಾಶ್ವತ ಕೆಲಸಗಳಿಂದ ಕನ್ನಡ ನಾಡಿನ ಅಭಿವೃದ್ಧಿ ನೂರ್ಮಡಿಯಾಗಿದೆ ಎಂದು ಶಾಸಕ ಟಿ ಎಸ್ ಶ್ರೀವತ್ಸ
ನಗರದ ಜೆಎಲ್ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಭಾಂಗಣದಲ್ಲಿ ಸೋಮವಾರ ಪಾತಿ ಫೌಂಡೇಶನ್ 126ನೇ ಕಾರ್ಯಕ್ರಮದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 142ನೇ ಜಯಂತೋತ್ಸವ ಪ್ರಯುಕ್ತ ಆಯೋಜಿಸಿದ ರಸಮಂಜರಿ ಕಾರ್ಯಕ್ರಮ ಹಾಗೂ
ವಿವಿಧ ಕ್ಷೇತ್ರದ ಸಾಧಕರಾದ
ಡಾ, ಚಂದ್ರಶೇಖರ್ ( ಯೋಗ ಹಾಗೂ ವೈದ್ಯಕೀಯ ಕ್ಷೇತ್ರ),
ಯೋಗ ಪ್ರಕಾಶ್ ( ಯೋಗ ಕ್ಷೇತ್ರ), ಸೀಮಾ( ಯೋಗ ಕ್ಷೇತ್ರ), ಡಾ ಪಿ ಎಂ ಗಣೇಶ್ ಕುಮಾರ್ ( ಕ್ರೀಡಾ ಕ್ಷೇತ್ರ),
ಎಸ್ ವಿ ವೆಂಕಟೇಶಯ್ಯ( ಯೋಗ ಕ್ಷೇತ್ರ), ಡಾಕ್ಟರ್ ಕಾವ್ಯ ಎಸ್( ವೈದ್ಯಕೀಯ ಕ್ಷೇತ್ರ), ಲಯನ್ ಕೆ ಎನ್ ಸುರೇಶ್ ( ಧಾರ್ಮಿಕ ಕ್ಷೇತ್ರ), ಸುಮ ರಾಜ್ ಕುಮಾರ್ ( ನಿರೂಪಣೆ ಕ್ಷೇತ್ರ) ರವರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು ಕೃಷ್ಣರಾಜ ಒಡೆಯರ್ ಅವರು ಮಹಾರಾಜರಾಗಿದ್ದರೂ ಸಹ ಅಧಿಕಾರದ ವ್ಯಾಪ್ತಿಯನ್ನು ವಿಕೇಂದ್ರೀಕರಿಸಿ ಪ್ರಜೆಗಳು ಸಹ ಅಧಿಕಾರದಲ್ಲಿ ಒಳಗೊಳ್ಳುವಂತೆ ಮಾಡಿದರು. ನಾಡಿಗೆ ಸಾಹಿತ್ಯ ಪರಿಷತ್ತಿನ ಕೊಡುಗೆ ನೀಡಿದರು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜಪ್ರಭುತ್ವದ ಪ್ರತಿನಿಧಿಯಾಗಿದ್ದರೂ ಪ್ರಜಾಪ್ರಭುತ್ವದ ಹಿತಾಸಕ್ತಿಗೆ ಮಿಗಿಲಾಗಿ ರಾಜ್ಯಭಾರ ಮಾಡಿದ ಮಹಾನ್ ವ್ಯಕ್ತಿ. ಅವರು ನಿರ್ಮಿಸಿದ ಶಾಲೆ, ಕಾಲೇಜು, ಆಸ್ಪತ್ರೆ, ಅಣೆಕಟ್ಟು,
ಹಾಗೂ ನಾಲ್ವಡಿ ಕೊಡುಗೆಗಳನ್ನು ಅವರು ಸ್ಮರಿಸಿದರು
ನಂತರ ಮಾತನಾಡಿದ ಆರ್ ಎಸ್ ಎಸ್ ಮಾ ವೆಂಕಟರಮ ಜಿ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಗಳನ್ನು ಸ್ಮರಿಸಿದರು
ಈ ಸಂದರ್ಭದಲ್ಲಿ ವಿಷ್ಣು ಗ್ರೂಪ್ಸ್ ಚಂದನ ಶ್ರೀನಿವಾಸರವದಿಂದ ರಸಮಂಜರಿ ಕಾರ್ಯಕ್ರಮ ನೆರವೇರಿತು
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಆರ್ ಎಸ್ ಎಸ್ ನ ಮಾ ವೆಂಕಟರಾಮ್ ಜಿ, ಪಾತಿ ಫೌಂಡೇಶನ್ ಅಧ್ಯಕ್ಷರಾದ ಎಂಡಿ ಪಾರ್ಥಸಾರಥಿ, ಉದ್ಯಮಿ ಕುಮಾರ್ ಆರಾಧ್ಯ, ಸಹಕಾರಿ ರತ್ನ ಸಿ ವಿ ಪಾರ್ಥಸಾರಥಿ, ಸುರೇಶ್ ಗೋಲ್ಡ್, ಟಿಎಸ್ ಅರುಣ್, ಗಾಯಕ ಕೃಷ್ಣಮೂರ್ತಿ, ಚಂದನ ಶ್ರೀನಿವಾಸ್, ಬಸವರಾಜ್, ಮಹದೇವ ಹಾಗೂ ಇನ್ನಿತರರು ಹಾಜರಿದ್ದರು