ನಂದಿನಿ ಮನುಪ್ರಸಾದ್ ನಾಯಕ್
ಜೂ.27ರ ಕೆಂಪೇಗೌಡ ಜಯಂತಿಗೆ ಬನ್ನಿ
ಪ್ರಚಾರ ರಥಕ್ಕೆ ಚಾಲನೆ ನೀಡಿ ಸೋಮೇಶ್ವರನಾಥ ಸ್ವಾಮೀಜಿ ಕರೆ

ಮೈಸೂರು: ಇದೇ ತಿಂಗಳ ಜೂ.27ರಂದು ನಡೆಯಲಿರುವ ಕೆಂಪೇಗೌಡ 512ನೇ ಜಯಂತಿ ಮಹೋತ್ಸವಕ್ಕೆ ಜಾತ್ಯಾತೀತ, ಪಕ್ಷಾತೀತವಾಗಿ ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಕರೆ ನೀಡಿದರು.
ಕೆಂಪೇಗೌಡ ಜಯಂತೋತ್ಸವ ಸಮಿತಿ, ರಾಜ್ಯ ಒಕ್ಕಲಿಗರ ಸಂಘ ಹಾಗೂ ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಕೆಜಿ ಕೊಪ್ಪಲಿನ ಶ್ರೀ ಬಂದತಮ್ಮ ದೇವಾಲಯ ಎದುರು 512 ನೇ ಶ್ರೀ ಕೆಂಪೇಗೌಡರ ಜಯಂತಿ ಮಹೋತ್ಸವದ ಪ್ರಚಾರ ರಥಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ನೇರವೇರಿಸಿ ಮಾತನಾಡಿದರು. ಕೆಂಪೇಗೌಡರು ಒಂದು ಸೀಮಿತರಾಗಿ ನಾಡು ಕಟ್ಟಿಲ್ಲ. ಎಲ್ಲಾ ಸಮುದಾಯಕ್ಕೂ ಅನುಗುಣವಾಗಿ ಪೇಟೆಗಳನ್ನು ನಿರ್ಮಿಸಿ ಮಾದರಿಯಾಗಿದ್ದಾರೆ. ಅವರ ಕೊಡುಗೆಗಳನ್ನು ಸ್ಮರಿಸುವ ದಿಸೆಯಲ್ಲಿ ನಡೆಯುವ ಜಯಂತಿ ಕಾರ್ಯಕ್ರಮದ ಪ್ರಚಾರ ರಥಕ್ಕೆ ಚಾಲನೆ ನೀಡಲಾಗಿದೆ. ಇಂದಿನಿಂದ ಜಿಲ್ಲೆ, ತಾಲ್ಲೂಕು ಹಾಗೂ ನಗರ ಭಾಗದಲ್ಲಿ ಕೆಂಪೇಗೌಡರ ರಥಯಾತ್ರೆ ಸಂಚರಿಸಲಿದೆ. ಜೂ.27ರ ಜಯಂತಿಯಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮದ ಸಂದೇಶ ಮುಂದಿನ ಪಿಳೀಗೆಗೆ ತಲುಪಿಸುವ ಪ್ರಯತ್ನ ಕ್ಕೆ ಎಲ್ಲರ ಸಹಕಾರ ಇರಲಿದೆ ಎಂದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ ಕೆಂಪೇಗೌಡ ಜಯಂತಿ ವಿಚಾರದಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಅದನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸುವ ಕೆಲಸ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರಚಾರ ರಥಕ್ಕೆ ಸಾಮೂಹಿಕವಾಗಿ ಸ್ವಾಮೀಜಿಯವರ ಸಾನಿದ್ಯದೊಂದಿಗೆ ಚಾಲನೆ ನೀಡಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿ ಎಂದು ಹೇಳಿದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಈಗಾಗಲೇ ಕೆಂಪೇಗೌಡ ಜಯಂತಿಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದ್ದೇನೆ. ಬಹುತೇಕ ಜಯಂತಿಗಳಿಗೆ ನನ್ನ ಅಧ್ಯಕ್ಷತೆಯೇ ಇರುತ್ತದೆ. ಅದರಂತೆ ಕೆಂಪೇಗೌಡ ಜಯಂತಿಯನ್ನು ಸಮುದಾಯದ ಎಲ್ಲರೂ ಪಕ್ಷಾತೀತವಾಗಿ ವಿಜೃಂಭಣೆಯಿಂದ ಈ ಸಾಲಿನಲ್ಲಿ ಆಚರಿಸುತ್ತಿರುವುದು ಸಂತಸದ ಸಂಗತಿ. ಕೆಂಪೇಗೌಡರು ಎಲ್ಲಾ ಸಮಾಜಕ್ಕೂ ನೀಡಿರುವ ಕೊಡುಗೆ ಹಾಗೂ ಅವರ ಆದರ್ಶ ವ್ಯಕ್ತಿತ್ವವನ್ನು ಸಾರುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಯಂತಿಯಲ್ಲಿ ಭಾಗವಹಿಸಬೇಕಿದೆ. ಈ ನಿಟ್ಟಿನಲ್ಲಿ ಜಯಂತೋತ್ಸವ ಸಮಿತಿ ಶ್ರಮಿಸುತ್ತಿದ್ದು ಎಲ್ಲರೂ ಸಹಕರಿಸಿ ಎಂದು ಹೇಳಿದರು.
ಜಯತೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಗೌಡ ಮಾತನಾಡಿ, ಪ್ರತಿ ವರ್ಷಕ್ಕೂ ಕೆಂಪೇಗೌಡರ ಜಯಂತಿ ಆಚರಣೆಯ ಸಂಭ್ರಮವನ್ನು ಹೆಚ್ಚಿಸುತ್ತಾ ಬರಲಾಗುತ್ತಿದೆ. ಈ ಸಾಲಿನಲ್ಲಿ ಚಾಮರಾಜನಗರ ಜಿಲ್ಲೆಯ ತಾಲ್ಲೂಕುಗಳಿಗೂ ಸಮಿತಿ ಹೋಗಿ ಆಹ್ವಾನಿಸುವ ಕೆಲಸವನ್ನು ತಂಡ ಮಾಡುತ್ತಿದ್ದೇವೆ. ಜತೆಗೆ ಇಂದು ಪ್ರಚಾರ ರಥಕ್ಕೆ ಚಾಲನೆ ನೀಡಿದ್ದು, ಹಿನಕಲ್, ಹೂಟಗಳ್ಳಿ, ಬೆಳವಾಡಿ, ಕೂರ್ಗಳ್ಳಿ, ಮೈದಾನಹಳ್ಳಿ, ಆನಂದೂರು, ಹೊಸಕೋಟೆ, ಗುಂಗ್ರಾಲ್ ಛತ್ರ, ಯಲಚನಹಳ್ಳಿ, ಇಲವಾಲ ಗ್ರಾಮಗಳಲ್ಲಿ ಪ್ರಚಾರ ಸಂಚರಿಸಲಿದೆ. ಜೂ.27ರಂದು ಎರಡು ಜಿಲ್ಲೆಯಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಯಂತಿಯನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ಕೇಳಿಕೊಳ್ಳುವುದಾಗಿ ಹೇಳಿದರು.
ಶಾಸಕ ಶ್ರೀವತ್ಸ, ಮಾಜಿ ಸಂಸದ ಪ್ರತಾಪಸಿಂಹ, ಮಾಜಿ ಶಾಸಕ ಎಲ್.ನಾಗೇಂದ್ರ, ಕೆಂಪೇಗೌಡ ಜಯಂತೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಜಿ.ಗಂಗಾಧರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೆ.ವಿ.ಶ್ರೀಧರ್, ಡಾ.ಎಂ.ಬಿ.ಮಂಜೇಗೌಡ, ನಗರಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾಶಂಕರೇಗೌಡ, ಎಸ್.ಬಿ.ಎಂ.ಮಂಜು, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಮರಿಸ್ವಾಮಿ,ಗೌರವಾಧ್ಯಕ್ಷ ಆಲತೂರು ಜಯರಾಮ್ ಉಪಾಧ್ಯಕ್ಷ ರವಿಕುಮಾರ್ ರಾಜಕೀಯ, ಬನ್ನೂರು ಮಹೇಶ್, ಪ್ರಧಾನ ಕಾರ್ಯದರ್ಶಿ ಎಂ.ಈ.ಚೇತನ್, ನಿರ್ದೇಶಕರಾದ ಒಂಟಿಕೊಪ್ಪಲು ಗುರುರಾಜ್, ರವಿ, ಬಿ.ಪಿ.ಬೋರೇಗೌಡ, ಗಿರೀಶ್ ಗೌಡ, ಜಿ.ಕುಮಾರ್ ಗೌಡ, ಎಂ.ಸುಶೀಲ ನಂಜಪ್ಪ, ಉಮೇಶ್, ಸಮುದಾಯದ ಮುಖಂಡರಾದ ಬೀಡನಹಳ್ಳಿ ಸತೀಶ್ ಗೌಡ, ಕರ್ನಾಟಕ ಕಾವಲುಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯೆ ಲಕ್ಷ್ಮಿದೇವಿ, ಮೈಮುಲ್ ನಿರ್ದೇಶಕ ಊಮಾಶಂಕರ್, ರಾಕೇಶ್ ಗೌಡ, ತಾಲ್ಲೂಕು ಒಕ್ಕಲಿಗರ ಸಂಘದ ಕೃಷ್ಣೇಗೌಡ, ಕೆ.ಜಿ.ಕೊಪ್ಪಲು ರಾಜಣ್ಣ, ಜೆ.ಪಿ.ನಗರ ಕೃಷ್ಣ, ನಿವೃತ್ತ ಪೊಲೀಸ್ ಅಧಿಕಾರಿ ಮರಿಗೌಡ, ಮಾಜಿ ಮೇಯರ್ ಆರ್.ಲಿಂಗಪ್ಪ, ಕಾವಲುಪಡೆ ರಾಜ್ಯಧ್ಯಕ್ಷ ಮೋಹನ್ ಕುಮಾರ್ ಗೌಡ, ಮಂಚೇಗೌಡನ ಕೊಪ್ಪಲು ರವಿ, ಸುಮಿತ್ರಾ ರಮೇಶ್, ಹೇಮಾ ನಂದೀಶ್, ತೇಜೇಸ್ ಲೋಕೇಶ್ ಗೌಡ, ಬಿಜೆಪಿ ಮುಖಂಡ ದಿನೇಶಗೌಡ, ಶಿವಶಂಕರ್ ಇನ್ನಿತರರು ಉಪಸ್ಥಿತರಿದ್ದರು.
ಇಂದು ರಥದ ಪ್ರಚಾರ ಮಾರ್ಗ
ಬುಧವಾರ ಗದ್ದಿಗೆ, ಕರಿಮುದ್ದನಹಳ್ಳಿ, ಅಸ್ವಾಳ್, ಸೋನಹಳ್ಳಿ, ಸಿಂಗ ಮಾರನಹಳ್ಳಿ, ಗಂಗರ ಹೊಸಹಳ್ಳಿ, ಕೊತ್ತೇಗಾಲ, ಗೊಲ್ಲನಬೀಡು, ಹಳದಮನುಗನಹಳ್ಳಿ, ಜಿ.ಬಿ.ಸರಗೂರು, ಕಣಿಯನಹುಂಡಿ, ಬೆಟ್ಟದ ಬೀಡು, ಮಾವಿನಹಳ್ಳಿ, ಗೋಪಾಲಪುರ, ಬಲಹಳ್ಳಿ, ಮರಿಟಿಕ್ಯಾತನಹಳ್ಳಿ, ಗಣಗರಹುಂಡಿ, ಸಾಹುಕಾರಹುಂಡಿ, ದಾಸನಕೊಪ್ಪಲು ಹಾಗೂ ಬೋಗಾದಿಯಲ್ಲಿ ಸಂಚರಿಸಲಿದೆ