ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೈಸೂರಿನ ರಾಜಮಾತೆ ಕೆಂಪನಂಜಮಣ್ಣಿ ರವರ ಸ್ಮರಣೆ

ನಂದಿನಿ ಮನುಪ್ರಸಾದ್ ನಾಯಕ್

ಮಹಿಳಾ ದಿನಚರಣೆ ಅಂಗವಾಗಿ ರಾಜಮಾತೆ ಕೆಂಪನಂಜಮಣಿ ಸ್ಮರಿಸಿದ ವೀರ ಸಾವರ್ಕರ್ ಯುವ ಬಳಗ.


ಮೈಸೂರು: ವೀರ ಸಾವರ್ಕರ್ ಯುವ ಬಳಗದ ವತಿಯಿಂದ ನಗರದ ದಿವಾನ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೈಸೂರಿನ ರಾಜಮಾತೆ ಕೆಂಪನಂಜಮಣ್ಣಿ
ರವರನ್ನು ಸ್ಮರಿಸಿದರು.

ಭಾರತ್ ಮಾತೆ ಹಾಗೂ
ಕೆಂಪನಂಜಮಣ್ಣಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಬಿಜೆಪಿ ಸಹ ಪ್ರಭಾರಿಗಳಾದ ಡಾ.ಈ.ಸಿ.ನಿಂಗರಾಜ್ ಗೌಡ ರವರು ಮೈಸೂರು ನಗರಕ್ಕೆ ರಾಜಮಾತೆ ಕೊಡುಗೆ ಅಪಾರ ,ಕೆ.ಆರ್‌.ಎಸ್‌. ಅಣೆಕಟ್ಟು ಕಟ್ಟುವಾಗ ಹಣಕಾಸಿನ ಕೊರತೆಯಾದಾಗ ತಮ್ಮ ಮೈ ಮೇಲಿದ್ದ ಒಡವೆ ಮಾರಿ ಅಣೆಕಟ್ಟು ಪೂರ್ಣಗೊಳ್ಳಲು ಸಹಾಯ ಮಾಡಿದ ನಮ್ಮ ಹೆಮ್ಮೆಯ ಮಹಾರಾಣಿ ಕೆಂಪ ನಂಜಮ್ಮಣ್ಣಿ ಯವರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಮೈಸೂರು ನಗರದ ವಿಸ್ತರಣೆ ಹಾಗೂ ಪೈಪ್ ಗಳಮೂಲಕ ನೀರು ಸರಬರಾಜು ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಂಕುಸ್ಥಾಪನೆ, ಭಾರತದಲ್ಲಿಯೇ ಮೊದಲ ಬಾರಿಗೆ ಶಿವನ ಸಮುದ್ರ ವಿದ್ಯುತ್ ಉತ್ಪಾದನೆ, ರೈತರ ಅನೂಕೂಲಕ್ಕಾಗಿ ಚೆತ್ರದುರ್ಗದಲ್ಲಿ ಮಾರಿ ಕಣಿವೆ ಅಣೆಕಟ್ಟು, ಮಹಿಳೆಯರ ವಿದ್ಯಭ್ಯಾಸಕ್ಕೆ ಅನುಕೂಲಕ್ಕಾಗಿ ಮಹಾರಾಣಿ ಕಾಲೇಜು ಸ್ಧಾಪನೆ, ಬೆಂಗಳೂರಿನಲ್ಲಿ ಇಂಡಿಯನ್ ಇನ್ಸೂಟ್ಯೂಟ್ ಆಫ್ ಸೈನ್ಸ್ ಪ್ರಾಂರಂಭಸಿರುವುದು ಇವರ ಕಾರ್ಯಕ್ಕೆ ಉತ್ತಮ ಸಾಕ್ಷಿಯಾಗಿದೆ.
ಅವರು ಕಟ್ಟಾ ಹಿಂದೂ ಧರ್ಮದ ಅನುಯಾಯಿ ಯಾಗಿದ್ದರು, ಇಂತಹ ಮಹಾನ್ ಸಾಧಕೀಯರು ಇಂದಿನ ಮಹಿಳೆಯರಿಗೆ ಸ್ಪೂರ್ತಿದಾಯಕರು ಎಂದು ಡಾ.ಈ.ಸಿ.ನಿಂಗರಾಜ್ ಗೌಡರವರು ಹೇಳಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪರಮೇಶ್ ಗೌಡ, ಮುಖಂಡರಾದ ಬಾಲಣ್ಣ,
ಸಂದೇಶ್, ಉಮೇಶ್, ಪ್ರಮೋದ್ ಗೌಡ, ಭೈರಪ್ಪ, ಗಂಗಣ್ಣ, ಗೋಪಾಲ್, ಅಶ್ವಥ್, ಜಯಪ್ಪ, ಕೆ.ಎನ್. ಸಂತೋಷ್,
ಮಂಜುನಾಥ್ ಎಸ್.
ಗೌಡ, ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ
ವಸಂತ ಮನೀಶ್, ಚಂದ್ರಕಲಾ, ರಶ್ಮಿ, ಮಧು, ಗೀತಾ, ಒಕ್ಕಲಿಗರ ಸಂಘದ ನಿರ್ದೇಶಕರಾದ
ಚೇತನ್ ಗೌಡ , ಪ್ರವೀಣ್, ರಾಜಣ್ಣ, ವಿಜಯ್, ಅಭಿ, ವಿನೋದ,
ವಿ ಎಸ್ ಕಿರಣ್, ಬ್ರಹ್ಮಚಾರ್, ಯೋಗೇಶ್, ನಾಗೇಶ್, ಅನೋಜ್, ರಾಜೇಶ್, ಮೋಹಿತ್ ಗೌಡ, ಚೇತನ್ ಗೌಡ ಟಿಎಸ್ ಅರುಣ್, ವಿನೋದ್ ಅರಸ್, ಮಂಜುನಾಥ್,
ಮೋಹನ್,
ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *