ನಂದಿನಿ ಮನುಪ್ರಸಾದ್ ನಾಯಕ್
ಶಿವರಾತ್ರಿ ಮಹೋತ್ಸವ – ಶಿವ ದೀಪೋತ್ಸವ ಕಾರ್ಯಕ್ರಮ

ಮಹಾಶಿವರಾತ್ರಿ ಹಬ್ಬದ ಪಾವನ ಪ್ರಯುಕ್ತವಾಗಿ ಮೈಸೂರಿನ ಜಯನಗರದಲ್ಲಿರುವ ಮರುಳೇಶ್ವರ ದೇವಸ್ಥಾನದ ಆವರಣದಲ್ಲಿ, ಮರುಳೇಶ್ವರ ಸೇವಾ ಟ್ರಸ್ಟ್, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಹಾಗೂ ನೇಗಿಲ ಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ವತಿಯಿಂದ ಭಕ್ತಿಭಾವಪೂರ್ಣವಾಗಿ “ಶಿವ ದೀಪೋತ್ಸವ” ಕಾರ್ಯಕ್ರಮವನ್ನು ಭವ್ಯವಾಗಿ ಹಮ್ಮಿಕೊಳ್ಳಲಾಯಿತು.
ಶಿವರಾತ್ರಿ ಅಂಗವಾಗಿ ಅಹೋರಾತ್ರಿ ಜಾಗರಣೆ ನಡೆಸಿ, ಅದರೊಂದಿಗೆ ಭರತನಾಟ್ಯ,ರಂಗಗೀತೆಗಳು, ಶಿವ ಪಂಚಾಕ್ಷರಿ ಮಂತ್ರ ಪಾರಾಯಣ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಭಕ್ತರ ಮನಸ್ಸನ್ನು ಭಕ್ತಿರಸದಲ್ಲಿ ತೇಲಿಸುವಂತೆ ಈ ಕಾರ್ಯಕ್ರಮಗಳು ನೆರವೇರಿದವು.
ಭಾನುವಾರ ಸಂಜೆ ಭಕ್ತಾದಿಗಳ ಸಹಕಾರದೊಂದಿಗೆ ಸುಮಾರು 25,000 ದೀಪಗಳನ್ನು ಬೆಳಗಿಸಿ ದೇವಸ್ಥಾನದ ಆವರಣವನ್ನು ರಂಗೋಲಿ ಮತ್ತು ದೀಪಗಳಿಂದ ಆಲಂಕೃತಗೊಳಿಸಲಾಯಿತು. ಸಾವಿರಾರು ದೀಪಗಳ ಜ್ಯೋತಿ ಶಿವನ ಮಹಿಮೆಯನ್ನು ಮತ್ತು ಭಕ್ತರ ಏಕತೆಯನ್ನು ಪ್ರತಿಬಿಂಬಿಸಿತು.
ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ ಹಾಗೂ ಭಕ್ತಿ ಗೀತೆಗಳ ಗಾಯನ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಕ್ತರ ಅಪಾರ ಉಪಸ್ಥಿತಿ ಮತ್ತು ಶಿಸ್ತಿನೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್ ಗೌಡರವರು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸರವರು, ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಕೆ. ವಿವೇಕಾನಂದರವರು ಹಾಗೂ ಡಿಐಜಿಪಿ ಡಾ. ಎ.ಎನ್. ಪ್ರಕಾಶ್ ಗೌಡರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮರುಳೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಡಾ. ಮಹದೇವಯ್ಯ ರವರು, ಪ್ರೊ. ರಂಗಪ್ಪ ರವರು, ಸೋಮಣ್ಣ ರವರು, ಬರ್ಕಿ ಮಹದೇವಪ್ಪ ರವರು, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ಡಿ. ರವಿಕುಮಾರ್ ರವರು, ಒಕ್ಕಲಿಗರ ಸಂಘದ ನಿರ್ದೇಶಕರಾದ ಎಂ.ಬಿ. ಮಂಜೇಗೌಡ ರವರು, ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಅಧ್ಯಕ್ಷರಾದ ಶ್ರೀಮತಿ ಜೆ. ಶೋಭಾ ರವರು ಹಾಗೂ ಪದಾಧಿಕಾರಿಗಳಾದ ಶ್ರೀಮತಿ ರಾಣಿ ಮಹೇಶ್, ಲಾವಣ್ಯ, ವಿಜಯ, ಶ್ರೀಮತಿ ಸುನಂದ, ಶ್ರೀಮತಿ ಯೋಗವತಿ, ಶೋಭಾ ಧನಂಜಯ್, ಡಾ. ಸುಮಿತ್ರಾ, ಡಾ. ಪ್ರತಿಮಾ, ಸೀತಮ್ಮ, ಅನಿತಾ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ನೇತೃತ್ವ ವಹಿಸಿದರು.