ನಂದಿನಿ ಮನುಪ್ರಸಾದ್ ನಾಯಕ್
ಟಿ.ನರಸೀಪುರ:ಟಿ.ನರಸೀಪುರ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪೊಸ್ಟರ್ ಬಿಡುಗಡೆಗೊಳಿಸಿದ ಡಾ.ಎಂ ರೇವಣ್ಣ.
35 ವರ್ಷ ಮೇಲ್ಪಟ್ಟ ಆಟಗಾರರಿಗೆ ವಿಶೇಷವಾಗಿ ಟಿ.ನರಸೀಪುರದ ಪ್ರತಿಷ್ಠಿತ ಅಭಿ-ಆನಂದ್ ಬ್ಲಾಸ್ಟರ್ಸ್ ಮತ್ತು ಎಂ.ಸಿ.ಸಿ ತಂಡಗಳು ಆಯೋಜಿಸಿರುವ ಟಿ.ನರಸೀಪುರ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಎರಡನೇ ಆವೃತ್ತಿಯ ಪೊಸ್ಟರ್ ಬಿಡುಗಡೆಗೊಳಿಸಿದ ಖ್ಯಾತ ವೈದ್ಯರು ಹಾಗೂ ಬಿಜೆಪಿ ಮುಖಂಡರಾದ ಡಾ.ಎಂ ರೇವಣ್ಣ ಆಯೋಜಕರಿಗೆ ಶುಭ ಆರೈಸಿದರು.
ಇದೇ ವೇಳೆ ಮಾತನಾಡಿದ ಅವರು ಈ ಲೀಗ್ ಮೂಲಕ ಜವಾಬ್ದಾರಿಗಳಿಂದ ಆಟದಿಂದ ದೂರ ಉಳಿದ ಹಲವರಿಗೆ ಮತ್ತೆ ತಮ್ಮ ಯೌವ್ವನದ ಕ್ರೀಡಾ ಜೀವನವದ ನೆನಪುಗಳನ್ನು ಕಟ್ಟಿಕೊಡಲಿದ್ದು ಮೈಸೂರು ,ಮಂಡ್ಯ, ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಭಾಗದ ಆಟಗಾರರುಗಳಿಗೆ ಅವಕಾಶ ನೀಡಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ತಂಡಗಳಾಗಿ ಭಾಗವಹಿಸಿ ಮತ್ತು ಈ ಲೀಗ್ ಯಶಸ್ವಿಯಾಗಲಿ ಎಂದು ಆರೈಸಿದರು
ಈ ವೇಳೆ ಸ್ವಾಮಿ ನರ್ಸಿಂಗ್ ಹೋಂ ಮುಖ್ಯಸ್ಥರಾದ ಡಾ. ಸ್ವಾಮಿ ಹಾಗೂ ಆಯೊಜಕರುಗಳಾದ ಇಮ್ರಾನ್ , ಕ್ಲಬ್ ಮಹೇಶ್, ಚೇತನ್ ನಾಗೇಂದ್ರ, ಚಿದಂಬರ, ಅಭಿಲಾಷ್ ಚೌಡು, ಆನಂದ್ ಸೋಮನಾಥಪುರ ,ರಘು, ರೇವಣ್ಣ ಉಪಸ್ಥಿತರಿದ್ದರು.