ನಂದಿನಿ ಮನುಪ್ರಸಾದ್ ನಾಯಕ್
ಗರಡಿ ಕೇರಿ ಲಷ್ಕರ್ ಮೊಹಲ್ಲಾದಲ್ಲಿರುವ
ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ನಲ್ಲಿ 48ನೇ ವರ್ಷದ ಕಾರ್ತಿಕ ಮಾಸದ ಶ್ರೀ ಮಲೆ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮೊದಲನೇ ಕಾರ್ತೀಕ ಸೋಮವಾರ ಪ್ರಯುಕ್ತ ಹಾಲರವಿ ಕಳಸ,ದೀಪೋತ್ಸವ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಬೆ. 6 ಗಂಟೆಗೆ ಗಂಗಾ ಪೂಜೆಯೊಂದಿದೆ ಕಳಸ ತರಲಾಯಿತು.. ನಂತರ ಸ್ವಾಮಿಯ ಕಳಸ ಸ್ಥಾಪನೆ,ಗಣಪತಿ ಪೂಜೆ,ಶನೇಶ್ವರಸ್ವಾಮಿ ಪೂಜೆ,ಮಹಾರುದ್ರಾಭಿಷೇಕ,ಗರಡಿಕೇರಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಿಂದ ಹಾಲರವಿ ಕಳಶ ತರಲಾಯಿತು.ಶ್ರೀ ಸ್ವಾಮಿಯ ಸುವರ್ಣ ಕೊಳಗಕ್ಕೆ ವಿಶೇಷ ಅಭಿಷೇಕ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಹೋಮ ಪೂರ್ಣಾಹುತಿ ನಂತರ ಗುಡ್ಡಪ್ಪ ಶಿವಣ್ಣನವರು ಮಹಾಮಂಗಳಾರತಿ ನೆರವೇರಿಸಿದರು.ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ಕೊಳಗ ಧರಿಸಿ ವಿಶೇಷ ಪುಷ್ಪಗಳಿಂದ ಅಲಂಕಾರಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ಹಾಡಿಗೆ ಧ್ವನಿಗೂಡಿಸುತ್ತಾ ದೇವರನ್ನು ಕಣ್ತುಂಬಿಕೊಂಡರು. ನೂರಾರು ಭಕ್ತಾಧಿಗಳಿಗೆ ಪ್ರಸಾದವಾಗಿ ಕಜ್ಜಾಯ,ರಸಾಯನ ವಿತರಿಸಿದರು.