ನಂದಿನಿ ಮನುಪ್ರಸಾದ್ ನಾಯಕ್
ಹಿಂದೂಗಳ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಉಳಿದುಕೊಳ್ಳ ಕೊಠಡಿ ವ್ಯವಸ್ಥೆ ಬೇಕೇ ಇದೀಗಾ ಕ್ಷಣಾರ್ಥದಲ್ಲೇ ಮೊಬೈಲ್ನಲ್ಲೇ ಬುಕ್ ಮಾಡಬಹುದಾಗಿದೆ ಎಂದು ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆ
ಹನೂರು ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ವಾಸ್ತವ್ಯಕ್ಕಾಗಿ ಶೇ.70ರಷ್ಟು ಮುಂಗಡ ಬುಕ್ಕಿಂಗ್ (ಆನ್ ಲೈನ್) ಮಾಡಲು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಕ್ರಮ ಕೈಗೊಂಡಿದೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಮಾಡಲಾಗಿದೆ. ಈ ಹಿಂದೆಯೂ ಮಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ತಾಂತ್ರಿಕ ದೋಷದಿಂದ ಕೆಲವು ತಿಂಗಳ ಕಾಲ ಸ್ಥಗಿತವಾಗಿತ್ತು. ಇದೀಗ ಶೇ.70ರಷ್ಟು ಮುಂಗಡ ಮಾಡಲು ಅವಕಾಶ ನೀಡಲಾಗಿದ್ದು, ಭಕ್ತಾದಿಗಳು ತಮ್ಮ ಮೊಬೈಲ್ನಲ್ಲಿಯೇ ವಸತಿ ಗೃಹಗಳನ್ನು ಮುಂಗಡ ವಾಗಿಯೇ ಬುಕ್ ಮಾಡಿ ಕೊಳ್ಳಬಹುದು ಇದರಿಂದ ಸಮಯ ಉಳಿತಾಯ ವಾಗಲಿದೆ, ಉಳಿದಂತೆ ಶೇ. 30ರಷ್ಟು ಮಾಹಿತಿ ಕೇಂದ್ರಕ್ಕೆ ತೆರಳಿ ಪಡೆದುಕೊಳ್ಳಬಹುದು ತಿಳಿಸಿದ್ದಾರೆ. ವಸತಿಗೃಹಗಳನ್ನು ಎಂದು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಜೇನುಮಲೆ, ಶಿವ ದರ್ಶಿನಿ, ಸೂರ್ಯ ದರ್ಶಿನಿ, ಶೈಲ ಭವನ, ಗುರುದರ್ಶಿನಿ, ಮಹದೇಶ್ವರ ಭವನ, ಯಾತ್ರಿ ನಿವಾಸ, ಡಾರ್ಮೆಟರಿ, ನಾಗಮಲೆ ಭವನಗಳಲ್ಲಿ https//mm hills reservation.com/ ವೆಬ್ ಸೆಟ್ ಮುಖಾಂತರ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳ ಬಹುದು ಎಂದು ತಿಳಿಸಿದ್ದಾರೆ.