ನಂದಿನಿ ಮೈಸೂರು
*ಸಿಗ್ಮಾ ಆಸ್ಪತ್ರೆಯಲ್ಲಿ ವಿಶ್ವ ತಾಯಂದಿರ ದಿನಾಚರಣೆ*
ಚಿತ್ರದಲ್ಲಿ ಸಿಗ್ಮಾ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ಶಶಿಕಲಾ ಎಂ, ಡಾ. ಮಮತ, ಡಾ. ಹರೀಶ್ ಗೌತಮ್ ಮತ್ತು ಆಸ್ಪತ್ರೆಯ ಶುಶ್ರೂಷಕಿಯರು ಸೇರಿ ಚೊಚ್ಚಲ ತಾಯಂದಿರಿಗೆ ಅಭಿನಂದನೆ ಸಲ್ಲಿಸುವುದರ ಮೂಲಕ ವಿಶ್ವ ತಾಯಂದಿರ ದಿನಾಚರಣೆಯನ್ನು ಆಚರಿಸಲಾಯಿತು.
ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವದ್ಯಂತ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ, ಇದು ತಾಯಂದಿರ ಬಗ್ಗೆ ಇರುವ ಗೌರವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವುದರ ಜೊತೆಗೆ ತಾಯಿಯ ನಿಸ್ವಾರ್ಥ ಪ್ರೀತಿ ಮತ್ತು ಅಚಲ ಬೆಂಬಲಕ್ಕಾಗಿ ಶ್ಲಾಘಿಸಲು ತಾಯಂದಿರ ದಿನವನ್ನು ಸಿಗ್ಮಾ ಆಸ್ಪತ್ರೆಯಲ್ಲಿ ಆಚರಿಸಲಾಯಿತು.