ನಂದಿನಿ ಮೈಸೂರು
ಮೈಸೂರು ನಗರ ಪಾಲಿಕೆಯ ವಾರ್ಡ್ ನಂ. 14 ರ ವ್ಯಾಪ್ತಿಯ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು.
ಮೈಸೂರಿನ ಉದಯಗಿರಿ ಮುನೇಶ್ವರ ನಗರದಲ್ಲಿ ರಸ್ತೆ ಕಾಮಗಾರಿಗೆ ಎನಗ.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಮುನೇಶ್ವರ ನಗರ ಹಾಗೂ ಮದೀನ ಮಸೀದಿ ಹಿಂಬದಿಯಲ್ಲಿ ಮಳೆ ಬಂದಾಗ ಆದ ಸಮಸ್ಯೆ, ಒಳಚರಂಡಿ ಸಮಸ್ಯೆ ಬಗೆಹರಿಸುವುದಕ್ಕೆ ನಗರ ಪಾಲಿಕೆಯಿಂದ ಸುಮಾರು 58 ಲಕ್ಷದ ಕಾಮಗಾರಿಗೆ ಚಾಲನೆ ನೀಡಿದ್ದೇವು.ಇಂದು ಕರ್ನಾಟಕ ಸರ್ಕಾರ ಅಲ್ಪ ಸಂಖ್ಯಾತ ಇಲಾಖೆಯ ಅನುದಾನದ ಅಡಿಯಲ್ಲಿ 75 ಲಕ್ಷದ ಅಂದಾಜಿನಲ್ಲಿ ರಸ್ತೆ ಕಾಮಗಾರಿ ಮಾಡುತ್ತಿದ್ದೇವೆ.ಮೇಲ್ಭಾಗದಲ್ಲಿ 50 ಲಕ್ಷದ ಕಾಮಗಾರಿ ಒಟ್ಟು 1.25 ಕೋಟಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ.ಈ ಭಾಗದಲ್ಲಿ ಅತೀ ಅಗತ್ಯವಾಗಿದ್ದು ಮೂಲ ಭೂತ ಸೌಕರ್ಯ ನಮ್ಮ ಜವಾಬ್ದಾರಿಯಾಗಿತ್ತು.ಜನರ ಬೇಡಿಕೆಗಳಿಗೆ ಸ್ಪಂದಿಸುವಂತಹ ಕೆಲಸ ಮಾಡಿದ್ದೇವೆ ಎಂದರು.ಯಾವ ಸಂಪುಟ ಪುನರ್ ರಚನೆ ಇಲ್ಲ.ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಸಂಪುಟ ರಚನೆ ಪ್ರಸ್ತಾವನೆಯೇ ಇಲ್ಲ ಅಂತ ಪದೇ ಪದೇ ನಾವು ಅದರ ಬಗ್ಗೆ ಮಾತಾಡಬಾರದು.ಸದನ ಇರುವುದು ಚರ್ಚೆ ಮಾಡುವುದಕ್ಕೆ ಚರ್ಚೆ ಬಂದಾಗ ಚರ್ಚೆ ಮಾಡುತ್ತೇವೆ ಇಲ್ಲ ಅಂದಾಗ ಸರ್ಕಾರದ ಕೆಲಸ ಮಾಡ್ತೀವಿ.ಸಿದ್ದರಾಮಯ್ಯ ಸ್ವಾಭಿಮಾನಿ
ಸಮಾವೇಶ ಯಶಸ್ವಿಯಾಗಿದೆ.ಕಾಂಗ್ರೆಸ್ ಜೊತೆಗೆ ಪ್ರಗತಿಪರರೂ ಕೈ ಜೊತೆಗೂಡಿ ಈ ಸಮಾವೇಶದಲ್ಲಿ ಭಾಗಿಯಾಗಿದ್ದು ಸಂತೋಷ.
ಅನೇಕರಿಗೆ ವೇದಿಕೆ ತಲುಪುವುದಕ್ಕೂ ಆಗಲಿಲ್ಲ ಅದರಲ್ಲಿ ನಾನು ಒಬ್ಬ.
ಸರ್ಕಾರ ಪಂಚ ಗ್ಯಾರಂಟಿ ಯೋಜನೆ,ಹಾಗೂ 3 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರುವುದರಿಂದ ಜನರಿಗೆ ಧನ್ಯವಾದ ಹೇಳುವ ಕಾರ್ಯಕ್ರಮ ಅದಾಗಿತ್ತು ಎಂದರು.
ನಂತರ ಅಜಿತ್ ಸೇಠ್ ಬ್ಲಾಕ್ ಯುವ ಮುಖಂಡ
ಸೈನ್ ಶಾ ಅಹಮದ್ ಮಾತನಾಡಿ ಮುನೇಶ್ವರ ನಗರದಲ್ಲಿ ಕೆಲವು ಕಾಮಗಾರಿಗಳು ನಡೆದಿರಲಿಲ್ಲ.ನಾನು 14ನೇ ವಾರ್ಡ್ ಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಅವರ ಮನವಿ ಪತ್ರ ಸ್ವೀಕರಿಸಿ ಶಾಸಕರಾದ ತನ್ವೀರ್ ಸೇಠ್ ರವರಿಗೆ ನೀಡಿದೆ ಶಾಸಕರ ಅನುದಾನದಡಿ 72 ಲಕ್ಷದ ಕಾಮಗಾರಿ ಆರಂಭವಾಗಿದೆ.ವಾರ್ಡ್ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.ಕೆಲಸ ಮಾಡುವ ಮನಸ್ಸಿರಬೇಕು ಅಧಿಕಾರ ಮುಖ್ಯ ಇಲ್ಲ.ತನ್ವೀರ್ ಸೇಠ್ ಅವರ ಸೂಚನೆಯಂತೆ ನಾವು ಕೆಲಸ ಮಾಡುತ್ತಿದ್ದೇವೆ.ವಾರ್ಡ್ ನಂ.14 ಕ್ಕೆ ಒಟ್ಟು 1.25 ಕೋಟಿ ಅನುದಾನ ನೀಡಿದ್ದಾರೆ.ಒಳಚರಂಡಿ ಸಮಸ್ಯೆ ಇದೆ ಮುಂದಿನ ದಿನಗಳಲ್ಲಿ ಅದು ಕೂಡ ಸಮಸ್ಯೆ ಬಗೆಹರಿಯಲಿದೆ.ಜನರ ಆಶಿರ್ವಾದಿಂದ ಮುಂಬರುವ ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮ ಸೈಯದ್ ಇಕ್ಬಾಲ್,
ಸೈನ್ ಶಾ ಅಹಮದ್,ಶೌಕತ್ ಹಾಲಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ವಾರ್ಡ್ ಜನರು ಭಾಗಿಯಾಗಿದ್ದರು.