*ಮನೆಕುಸಿತ ಸ್ಥಳಗಳಿಗೆ ರೈತ ಮುಖಂಡರ ಭೇಟಿ*
*ತ್ವರಿತ ಪರಿಹಾರಕ್ಕೆ ಆಗ್ರಹ*
ಎಚ್.ಡಿ.ಕೋಟೆ: ತಾಲೂಕಿನಲ್ಲಿ ನಿರಂತರ ಸುರಿದ ಮಳೆಗೆ ಚಿಕ್ಕಕೆರೆಯೂರು ಗ್ರಾಪಂ ವ್ಯಾಪ್ತಿಯ ಚಾಮನಹಳ್ಳಿ ಹುಂಡಿಯಲ್ಲಿ ಕಳೆದ ರಾತ್ರಿ 4 ಮನೆಗಳು ಕುಸಿದಿರುವ ಸ್ಥಳಕ್ಕೆ ರೈತ ಮುಖಂಡ, ರೈತ ಕಲ್ಯಾಣ ರಾಜ್ಯ ಅಧ್ಯಕ್ಷ ಭೂಮಿಪುತ್ರ ಚಂದನ್ ಗೌಡ, ತಾಲೂಕು ಅಧ್ಯಕ್ಷ ಹೈರಿಗೆ ಉಮೇಶ್ ಸೇರಿದಂತೆ ರೈತ ಮುಖಂಡರು ಪರಿಶೀಲನೆ ನಡೆಸಿ ತ್ವರಿತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಚಾಮನಹಳ್ಳಿ ಹುಂಡಿಯ ಜನರು ಕಡುಬಡವರಾಗಿದ್ದು, ಮನೆ ಕುಸಿತದಿಂದ ರಾತ್ರಿ ಮಲಗಲು ಜಾಗವಿಲ್ಲದೇ ಅಂಗಳದಲ್ಲೇ ಪ್ಲಾಸ್ಟಿಕ್ ಕವರ್ ಹಾಸಿ ಮಲಗಿದ್ದಾರೆ. ಇನ್ನಷ್ಟು ಮಳೆಯಾದರೆ ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ಆಡಳಿತ ವರ್ಗ ಹಾಗೂ ಜನಪ್ರತಿನಿಧಿಗಳು ಆದಷ್ಟು ಬೇಗ ಇವರಿಗೆ ವಸತಿ ನಿರ್ಮಾಣ ಮಾಡಿಕೊಡಬೇಕೆಂದು ರಾಜ್ಯಾಧ್ಯಕ್ಷ ಭೂಮಿಪುತ್ರ ಚಂದನ್ ಗೌಡ ಮನವಿ ಮಾಡಿದ್ದಾರೆ.