ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣ (51 ವರ್ಷ)ಇನ್ನಿಲ್ಲ!

ನಂದಿನಿ ಮೈಸೂರು

ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣ (51 ವರ್ಷ)ಇನ್ನಿಲ್ಲ!

ಕನ್ನಡಿಗರ ಮನೆ ಮಾತಾಗಿದ್ದ ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣ ನಿಧನರಾಗಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣ ಇಂದು ಬೆಂಗಳೂರಿನ ಬನಶಂಕರಿ ಸೆಕೆಂಡ್ ಸ್ಟೇಜ್‌ನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳಿದ್ದಾರೆ.

ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನೆಗದ್ದ ಖ್ಯಾತ ನಿರೂಪಕಿ ಅಪರ್ಣ.1984 ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.ಮಸಣದ ಹೂವು ,ಇನ್ಸ್ಪೆಕ್ಟರ್ ವಿಕ್ರಮ್ ಚಿತ್ರದಲ್ಲಿ ನಟಿಸಿದ್ರು.

ಚಂದನ ವಾಹಿನಿಯಲ್ಲಿ ಹಲವಾರು ನಿರೂಪಣೆ ಮಾಡಿದ್ದರು.
2013 ರಲ್ಲಿ ಆರಂಭವಾಗಿದ್ದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.ತದನಂತರ ಮಜಾ ಟಾಕೀಸ್ ಹಾಸ್ಯ ಕಲಾವಿದರಾಗಿ ನಟಿಸುತ್ತಿದ್ದರು.

ದೀಪಾವಳಿ ಕಾರ್ಯಕ್ರಮ
ಸತತ 8 ಗಂಟೆಗಳ ಕಾಲ ನಿರೂಪಣೆ ಮಾಡಿ ದಾಖಲೆ ಮಾಡಿದ್ದರು.
ನಮ್ಮ ಮೆಟ್ರೋ ಗೂ ಅಪರ್ಣಾ ಅವರು ಧ್ವನಿ ದಾನ ಮಾಡಿದ್ರೂ.ಖಾಸಗೀ ವಾಹಿನಿ ಅಲ್ಲದೇ
ಭಾರತ ಸರ್ಕಾರದ ಹಲವಾರು ವೇದಿಕೆ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಿದ್ದರು.

Leave a Reply

Your email address will not be published. Required fields are marked *