ನಂದಿನಿ ಮೈಸೂರು
ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನೂ ಒಳಗೊಂಡ ವಿದ್ಯಾರ್ಥಿ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ 76ನೇ ಸಂಸ್ಥಾಪನಾ ದಿನವಾದ ಜುಲೈ 9 ನ್ನೂ ಭಾರತದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತೀದೆ.
ಜುಲೈ 9, 1949ರಲ್ಲಿ ಸ್ಥಾಪನೆಯಾದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತನ್ನ 76 ವರ್ಷದ ಸುದೀರ್ಘ ದಾರಿಯಲ್ಲಿ “ವಿದ್ಯಾರ್ಥಿ ಶಕ್ತಿ – ರಾಷ್ಟ್ರ ಶಕ್ತಿ” ಎಂಬ ಸಂದೇಶದೊಂದಿಗೆ ಕಾಲೇಜಿನ ಕ್ಯಾಂಪಸ್ ನಲ್ಲಿರುವ ಸಾಮಾನ್ಯ ವಿದ್ಯಾರ್ಥಿಯನ್ನೂ ಈ ದೇಶದ ಶಕ್ತಿಯನ್ನಾಗಿ ಬದಲಾವಣೆ ಮಾಡುವ ಕಾರ್ಯವನ್ನು ತನ್ನ ಕಾರ್ಯಕರ್ತರ ಮೂಲಕ ಮಾಡುತ್ತೀದೆ. ಯಾವ ಸಂಘಟನೆಗಳು ಆ ದೇಶದ ಮಣ್ಣಿಗೆ ಪೂರಕವಾಗಿ ಕೆಲಸ ಮಾಡುತ್ತವೆಯೋ ಆ ಸಂಘಟನೆಗಳು ಬಾನೆತ್ತರಕ್ಕೆ ಬೆಳೆಯುತ್ತವೆ ಎಂಬ ಮಾತನ್ನೂ ಸ್ವಾಮಿ ವಿವೇಕಾನಂದರು ಹೇಳಿದಂತೆ ಭಾರತ ದೇಶದ ಮಣ್ಣಿಗೆ ಪೂರಕವಾಗಿ ಎಬಿವಿಪಿ ಕೆಲಸ ಮಾಡುತ್ತೀರುವ ಹಿನ್ನಲೆಯಲ್ಲಿ ಇಂದು ವಿಶ್ವದಲ್ಲೇ ಅತೀ ಹೆಚ್ಚು ಸದಸ್ಯರನ್ನೂ ಒಳಗೊಂಡ ಸಂಘಟನೆ ಎಬಿವಿಪಿ ಆಗಿದೆ.
ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ ಎಂಬ ಘೋಷ ವಾಕ್ಯವನ್ನು ಮೊಳಗಿಸುತ್ತ, ಎಬಿವಿಪಿ ಸಂಘಟನೆ ಮೂಲಕ ಉತ್ತಮ ನಾಯಕತ್ವದ ಗುಣ ಬೆಳೆಸಿಕೊಂಡು ಶ್ರೇಣಿಕೃತ ನಾಯಕತ್ವಕ್ಕೆ ಆದ್ಯತೆ ನೀಡುತ್ತ ಯುವ ಮುಂದಾಳಾಗಿರುವ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರು ಹಾಗೂ ಬಿಜೆಪಿ ಮುಖಂಡರಾದ ಡಾ.ಈ.ಸಿ. ನಿಂಗರಾಜಗೌಡರವರು ಎಬಿವಿಪಿ ಯ ಸಂಸ್ಥಾಪನಾ ದಿನದ ಅಂಗವಾಗಿ ಈ ದಿನದ ಮಮತೆಯ ಮಡಿಲಿನಲ್ಲಿ ಅನ್ನದಾಸೋಹವನ್ನು ಹಮ್ಮಿಕೊಳ್ಳಲಾಗಿತ್ತು.
ಮಮತೆಯ ಮಡಿಲು :
ದಿನಾಂಕ : 09.07.2024 ರಂದು ಮಮತೆಯ ಮಡಿಲು ವತಿಯಿಂದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ, ಸ್ತ್ರೀರೋಗ-ಪ್ರಸೂತಿ ವಿಭಾಗದ ರೋಗಿಗಳಿಗೆ, ಅವರ ಸಂಬಂಧಿಕರುಗಳಿಗೆ ಪ್ರತಿದಿನ ಜರುಗುವ ಅನ್ನದಾಸೋಹದಲ್ಲಿ , ಈ ದಿನದ ಬೆಳಗಿನ ಉಪಹಾರ-ಗಂಜಿ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನೂ ಡಾ.ಈ.ಸಿ.ನಿಂಗರಾಜ್ ಗೌಡರವರು ವ್ಯವಸ್ಥೆ ಮಾಡಿದ್ದರು.
ವಿದ್ಯಾರ್ಥಿ ಶಕ್ತಿ -ರಾಷ್ಟ್ರ ಶಕ್ತಿ ಎಂಬ ಘೋಷಣೆಯ ಮೂಲಕ ಎಬಿವಿಪಿ ಸಂಘಟನೆಯ ಉದ್ದೇಶವನ್ನು ಅರ್ಥ್ಯೆಸಿಕೊಂಡು ಸಮುದಾಯದ ಮುಖ್ಯವಾಹಿನಿಗೆ ಬಂದು ಉತ್ತಮ ನಾಯಕತ್ವದ ಗುಣ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರು, ಬಿಜೆಪಿ ಮುಖಂಡರಾದ ಡಾ.ಈ.ಸಿ.ನಿಂಗರಾಜ್ ಗೌಡರವರು ಪ್ರತಿ ತಿಂಗಳು ಒಂದು ದಿನದ ಅನ್ನದಾಸೋಹವನ್ನೂ ನೆರವೇರಿಸುತ್ತಾ ಅಗತ್ಯ ಬೆಂಬಲ ನೀಡುತ್ತೀದ್ದಾರೆ.