ಕುರಿಮಂಡಿಯಲ್ಲಿ ಜನರ ಅನುಕೂಲಕ್ಕಾಗಿ ಜನಸ್ಪಂದನ ಕಚೇರಿ ತೆರೆದ ಯುವ ಕಾಂಗ್ರೇಸ್ ಮುಖಂಡ ವಿನೋದ್ ಕುಮಾರ್

ನಂದಿನಿ ಮೈಸೂರು

ಜನರಿಗೆ ಅನುಕೂಲವಾಗಬೇಕು.ಸರ್ಕಾರದಿಂದ ಸಿಗುವ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ
ಕುರಿಮಂಡಿಯಲ್ಲಿ ಯುವ ಕಾಂಗ್ರೆಸ್ ಮುಖಂಡ ವಿನೋದ್ ಕುಮಾರ್ ರವರು ಜನಸ್ಪಂದನ ಕಚೇರಿ ಆರಂಭಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ತನ್ವೀರ್ ಸೇಠ್ ರವರು ಜನಸ್ಪಂದನ ಕಚೇರಿಗೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಬಡಾವಣೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಉಚಿತ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರಲ್ಲದೇ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದರು.

ಯುವ ಕಾಂಗ್ರೆಸ್ ಮುಖಂಡ ವಿನೋದ್ ಕುಮಾರ್ ಅವರು
ಕುರಿಮಂಡಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಜನಸ್ಪಂದನ ಕಚೇರಿ ಪ್ರಾರಂಭಿಸಿರುವುದು ಉತ್ತಮವಾದ ಕೆಲಸ. ಇಂತಹ ಕ್ರಿಯಾಶೀಲ ಯುವಕ, ಯುವತಿಯರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಟಿಕೆಟ್, ಸ್ಥಾನಮಾನ ಕೊಡುವುದು ಪಕ್ಷದ ತೀರ್ಮಾನ. ನಾವು ಎಷ್ಟೆಲ್ಲಾ ಸಾಧ್ಯವೋ ಅಷ್ಟು ಪ್ರೋತ್ಸಾಹ ನೀಡುತ್ತೇವೆ. ಮಹಿಳಾ ಮೀಸಲಾತಿ, ಹಿರಿಯರಿಗೆ ಸ್ಥಾನಮಾನ, ಯುವಕರಿಗೆ ಆದ್ಯತೆ ಎಲ್ಲವನ್ನೂ ಪಕ್ಷ ಪರಿಗಣಿಸುತ್ತದೆ ಎಂದರು.
ಶಿಕ್ಷಣ ಯಾರ ಸ್ವತ್ತಲ್ಲ ಎಂಬುದನ್ನ ಮಕ್ಕಳು ತೋರಿಸಿಕೊಟ್ಟಿದ್ದಾರೆ.ಮಕ್ಕ ಳಿಗೆ ಪ್ರೋತ್ಸಾಹ ಮಾಡುವ ದೃಷ್ಟಿಯಿಂದ ವಿನೋದ್ ಕುಮಾರ್ ಅವರು ಕಳೆದ 6 ವರ್ಷಗಳಿಂದ ನೋಟ್ ಬುಕ್ ಮತ್ತು ಬ್ಯಾಗ್ ವಿತರಣೆ ಮಾಡುತ್ತಾ ಬಂದಿದ್ದಾರೆ.
ಇಂದಿನ ಮಕ್ಕಳು ಸಮಾಜಕ್ಕೆ ಆಸ್ತಿ ಆಗಲಿದ್ದಾರೆ.ವಿನೋದ್ ಕುಮಾರ್ ಅವರ ಸೇವೆ ಶ್ಲಾಘನೀಯ.ಎಲ್ಲಾ
ಕೆಲಸ ನೆಪ ಆಗಬಾರದು .ವಿಧವೆ ಪಿಂಚಣಿ,ಅಂಗವೀಕಲರ ವೇತನ ಸರಿಯಾಗಿ ಸಿಕ್ಕುತ್ತಿಲ್ಲ.ಅದನ್ನ ಸರ್ಕಾರ ಮುಂದಿನ ದಿನಗಳಲ್ಲಿ ನೀಡಲಿದೆ.ಜನರಿಗೆ ಅನುಕೂಲವಾಗಲೆಂದು ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ಈಗ ಎಲ್ಲಾ ಯೋಜನೆ ನಿಲ್ಲಿಸುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದೆ.
ಚುನಾವಣೆಗೆ ಮಾತ್ರ ತಂದ ಯೋಜನೆ ಅಲ್ಲ.
ಕೊಡುತ್ತೇವೆ ಅಂದ್ರೇ ಆಸೆ ನಿಲ್ಲಿಸುತ್ತೇವೆ ಅಂದ್ರೇ ಭಯ .ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ಮುಂದುವರೆಯಲಿದೆ.ಚುನಾವಣಾ ನೀತಿ ಸಂಹಿತೆ ಜಾರಿ ಇದ್ದರಿಂದ ಗೃಹಲಕ್ಷ್ಮೀ ಹಣ ಮಹಿಳೆಯರಿಗೆ ತಲುಪಿಲ್ಲ.ಈಗ ನೀತಿ ಸಂಹಿತೆ ತೆರವಾಗಿದ್ದು ಸರ್ಕಾರದಿಂದ 2 ಸಾವಿರ ನಿಮ್ಮ ಖಾತೆಗೆ ಹಣ ಬರಲಿದೆ.
ಸಹಾಯ ಮಾಡಿದವರಿಗೆ ಆರೈಸಿದರೇ ಸಾಕು.ನಮ್ಮ ಸಂಬಂಧ ಒಳ್ಳೇಯ ರೀತಿ ಇರಬೇಕು. ಕುರಿಮಂಡಿಯಲ್ಲಿ ರಸ್ತೆಗಳು ಸರಿ ಇರಲಿಲ್ಲ. ಈ ವಾರ್ಡಿಗೆ 4 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಲಾಗಿದೆ.ಕಾಲ ಕಾಲಕ್ಕೆ ಬರುವ ಯೋಜನೆಯನ್ನ ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ.ನನಗೆ ಜನರ ಸೇವೆ ಕೆಲಸ ಬಿಟ್ಟು ಮತ್ಯಾವ ಕೆಲಸಗಳು ಮಾಡುವುದಕ್ಕೆ ಬರಲ್ಲ ಎಂದು ವಿಧ್ಯಾರ್ಥಿಗಳಿಗೆ ನಿಮ್ಮ ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.

 

ಯುವ ಕಾಂಗ್ರೆಸ್ ಮುಖಂಡ ವಿನೋದ್ ಕುಮಾರ್ ಮಾತನಾಡಿ ಕುರಿಮಂಡಿಯಲ್ಲಿ ಕಳೆದ 5 ವರ್ಷಗಳಿಂದ ಜನಸೇವೆ ಮಾಡುತ್ತಿದ್ದೇನೆ. ಕೋವಿಡ್ ಸಂದರ್ಭದಲ್ಲಿಯೂ ನನ್ನ ಬಡಾವಣೆಯಲ್ಲಿ ಜನಸೇವೆ ಮಾಡಿದ್ದೇನೆ. ಪ್ರಸ್ತುತ ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಸೇವೆ, ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಕಚೇರಿ ಕೆಲಸ ಮಾಡಲಿದೆ. ಅಲ್ಲದೇ ಪ್ರತಿವರ್ಷ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ ಮಾಡುತ್ತಿದ್ದೇನೆ. ಇದರಿಂದ ಮಕ್ಕಳಿಗೆ ಪ್ರೋತ್ಸಾಹ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಮೈಸೂರು ಮಹಾನಗರಪಾಲಿಕೆಗೆ ಸ್ಪರ್ಧಿಸುವ ಆಸಕ್ತಿ ಹೊಂದಿದ್ದೇನೆ ಎಂದರು.

ಇದೇ ವೇಳೆ ವಿನೋದ್ ಕುಮಾರ್ ಅವರಿಗೆ ಮುಖಂಡರುಗಳಾದ ಅಪ್ಸರ್ ಪಾಷಾ, ಅಜ್ಗರ್, ನಾಗರಾಜ್, ಚಂದ್ರು, ಶಿವಕುಮಾರ್, ಅಯ್ಯಪ್ಪ, ಕಾರ್ಯಕ್ರಮದ ಯಶಸ್ವಿಗೆ ಜೊತೆಯಾಗಿ ನಿಂತಿದ್ದಾರೆ.

ಇನ್ನು
ಕಾಂಗ್ರೆಸ್ ಮುಖಂಡ ಗಫೂರ್ ಆಜಾದ್ ಮಾತನಾಡಿ, ವಿನೋದ್ ಕುಮಾರ್ ಜಾತ್ಯತೀತ ವ್ಯಕ್ತಿತ್ವವುಳ್ಳ ಉತ್ಸಾಹಿ ಯುವಕರಾಗಿದ್ದು, ಐದಾರು ವರ್ಷಗಳಿಂದ ಈ ಭಾಗದಲ್ಲಿ ಜನಸೇವೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಡಾವಣೆಯ ಜನರು ಅವರ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಶಾಹಿದ್, ಸೈಯದ್ ಇಕ್ಬಾಲ್, ದಕ್ಷಿಣಮೂರ್ತಿ, ಓಬಿಸಿ ಉಪಾಧ್ಯಕ್ಷ ಮಹದೇವು, ಸಿದ್ದರಾಜು, ಚಂದ್ರು, ಚಿನ್ನತಾಯಮ್ಮ, ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಂಖಂಡರು ಕುರಿಮಂಡಿಯ ನೂರಾರು ಜನರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *