ನಂದಿನಿ ಮೈಸೂರು
9 ವರ್ಷಗಳ ಯಶಸ್ವಿ ಆಡಳಿತವನ್ನು ಪೂರೈಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದು ಜಿಲ್ಲಾ ಸಹ ವಕ್ತಾರರಾದ ಡಾ.ಕೆ ವಸಂತ ಕುಮಾರ್ ತಿಳಿಸಿದರು.
ಕಳೆದ 9 ವರ್ಷಗಳ ಆಡಳಿತ ಅವಧಿಯಲ್ಲಿ ಇಡೀ ದೇಶ ಹಾಗೂ ವಿಶ್ವವೇ ಮೆಚ್ಚುವಂತಹ ಕಾರ್ಯವನ್ನು ನಿರ್ವಹಿಸುತ್ತಿರುವ ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ದೇಶ ಸ್ವಾತಂತ್ರ್ಯದ ನಂತರ ಸರ್ಕಾರಗಳು ರಚನೆಯಾಗಿ ಹಲವು ಪ್ರಧಾನ ಮಂತ್ರಿಗಳು ಈ ದೇಶದ ಆಡಳಿತ ದ ಚುಕ್ಕಾಣಿಯನ್ನು ಹಿಡಿದು ನಡೆಸಿದ್ದಾರೆ ಅದರಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಆಡಳಿತವನ್ನು ನಡೆಸುತ್ತಿರುವ ಸನ್ಮಾನ್ಯ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಮತ್ತು ಆಡಳಿತ ಇಂದು ವಿಶ್ವವೇ ಮೆಚ್ಚುವಂತಿದೆ ಮೂರು ಅವಧಿಯಲ್ಲಿ ಮುಖ್ಯಮಂತ್ರಿ ಆಗಿ ಆಡಳಿತವನ್ನು ನಡೆಸಿದಂತಹ ನರೇಂದ್ರ ಮೋದಿಯವರು ಎರಡನೇ ಅವಧಿಯಲ್ಲಿ ಪ್ರಧಾನಮಂತ್ರಿಯಾಗಿ ಆಡಳಿತವನ್ನು ನಡೆಸುವ ಸಂದರ್ಭದಲ್ಲಿ ಈ ದೇಶದ ಸೇವಕರಾಗಿ ಕಾರ್ಯವನ್ನ ನಿರ್ವಹಿಸುತ್ತಿರುವಂಥದ್ದು ಸರ್ವರಿಗೂ ಆದರ್ಶನೀಯ ದಿನದ 24 ಗಂಟೆಯಲ್ಲಿ 18 ಗಂಟೆಗಳ ಕಾಲ ಈ ದೇಶಕ್ಕೋಸ್ಕರ ದುಡಿಯುತ್ತಿರುವ ಅಹರ್ನಿಶಿ ವ್ಯಕ್ತಿತ್ವ , ತನ್ನ ಅವಧಿಯಲ್ಲಿ ಯಾವುದೇ ದಿನವು ನನಗೆ ರಜೆ ಬೇಕು ಎಂದು ತೆಗೆದುಕೊಂಡ ಉದಾಹರಣೆ ಇಲ್ಲ ನಾನು ಯಾವುದಾದರೂ ರೆಸಾರ್ಟಿಗೆ ಅಥವಾ ಪ್ರದೇಶಕ್ಕೆ ವಿಶ್ರಾಂತಿಗಾಗಿ ತೆರಳುತ್ತೇನೆ ಎಂದು ಹೇಳಿದ ಉದಾಹರಣೆಗಳಿಲ್ಲ ದೇಶ ಹಲವು ಸಮಸ್ಯೆಗಳನ್ನು ಜ್ವಲಂತವನ್ನು ವಾಗಿಟ್ಟುಕೊಂಡು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ಆ ಸಮಸ್ಯೆಗಳನ್ನು ತನ್ನ ಮನೋಧೈರ್ಯದ ಪರಿಹಾರವನ್ನು ಒದಗಿಸಿ ಕೊಟ್ಟಿದ್ದಾರೆ, ಆಡಳಿತಕ್ಕೆ ಹೊಸ ರೂಪನ್ನು ತರುವ ಮುಖಾಂತರವಾಗಿ ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿರುವುದು ಶ್ಲಾಘನೀಯ. ಅತ್ಯಂತ ಜ್ವಲಂತ ಸಮಸ್ಯೆಗಳಾದ ಜಮ್ಮು ಕಾಶ್ಮೀರದ ಸಮಸ್ಯೆ, ಅಯೋಧ್ಯ ಶ್ರೀ ರಾಮನ ಮಂದಿರದ ಪುನರ್ ನಿರ್ಮಾಣದ ಸಮಸ್ಯೆಯನ್ನು ಬಗೆಹರಿಸಿದ್ದು, ಆರ್ಟಿಕಲ್ 370 ರದ್ದತಿ ,ತ್ರಿಬಲ್ ತಲಾಕ್ ರದ್ದುಪಡಿಸುವ ಮುಖಾಂತರ ಜಗತ್ತಿಗೆ ಮುಸಲ್ಮಾನ ಹೆಣ್ಣು ಮಕ್ಕಳಿಗೂ ಸ್ವಾತಂತ್ರ್ಯವಿದೆ ಎಂಬುದನ್ನು ತೋರಿಸಿಕೊಟ್ಟಂತಹ ಧೈರ್ಯವಂತ ಇದರ ಜೊತೆಗೆ ಇಡೀ ಪ್ರಪಂಚವೇ ಕರೋನದ ಮಹಾಮಾರಿಯಲ್ಲಿ ಸಂತ್ರಸ್ತವಾದಂತ ಸಂದರ್ಭದಲ್ಲಿ ಭಾರತದ _140 ಕೋಟಿ ಜನರ ಪ್ರಾಣದ ರಕ್ಷಣೆಯ ಹೊಣೆ ಹೊತ್ತ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವವೇ ಬೆರಗಾಗುವಂತೆ ಅಲ್ಪ ಸಮಯದಲ್ಲಿಯೇ ಕರೋನದ ವಿರುದ್ಧ ಹೋರಾಡಲು ಬೇಕಾಗಿರುವ ವೈದ್ಯಕೀಯ ಉಪಕರಣಗಳ ತಯಾರಿಕೆ, ಆಕ್ಸಿಜನ್ ಘಟಕಗಳು ,ವೈದ್ಯರಿಗೆ ಉತ್ತಮ ಉಪಕರಣಗಳು ಹಾಗೂ ಲಸಿಕೆಯನ್ನು ಸ್ವದೇಶಿತವಾಗಿ ತಯಾರು ಮಾಡುವ ಮುಖಾಂತರ ಒಂದಲ್ಲ ಮೂರು ರಸಿಕೆಗಳು ಜನರಿಗೆ ಉಚಿತವಾಗಿ ಸಿಗುವಂತೆ ಮಾಡುವ ಮುಖಾಂತರ ಕೋಟಿ ಕೋಟಿ ಜನರ ಪ್ರಾಣವನ್ನು ರಕ್ಷಣೆ ಮಾಡುವಂತಹ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸುವುದರ ಜೊತೆ ಜೊತೆಗೆ ವಿಶ್ವದ ಅನೇಕ ರಾಷ್ಟ್ರಗಳಿಗೆ ಭಾರತದಿಂದ ಉಚಿತವಾಗಿ ಲಸಿಕೆ ಸಿಗುವಂತೆ ಮಾಡಿದ ಹೆಮ್ಮೆಯ ಪ್ರಧಾನಿ ಎಂದರೆ ತಪ್ಪಾಗಲಾರದು ಬಹುಶಃ ಇತ್ತೀಚಿನ ದಿನಮಾನಗಳಲ್ಲಿ ವಿಶ್ವದ ಯಾವುದೇ ದೇಶಕ್ಕೆ ಹೋದರು ಕೂಡ ಭಾರತ ಎಂದರೆ ಮೊದಲು ಮೂಗು ಮುರಿಯುತ್ತಿದ್ದ ಜನ ಇಂದು ಭಾರತದ ಹೆಸರು ಕೇಳಿದರೆ ದುಪ್ಪಟ್ಟು ಗೌರವನ್ನು ಕೊಡುವ ಮಟ್ಟಿಗೆ ಭಾರತದ ಕೀರ್ತಿ ಪತಾಕೆ ಮತ್ತು ಗೌರವ ಅಭಿಮಾನವನ್ನು ದುಪ್ಪಟ್ಟುಗೊಳಿಸಿದ ಕೀರ್ತಿ ಮಾನ್ಯ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ದೇಶದ ಉದ್ದಗಲಕ್ಕೂ ವಿಶಾಲವಾದ ರಸ್ತೆಗಳ ನಿರ್ಮಾಣ ,ನೀರಾವರಿ ಯೋಜನೆಗಳ ಅನುಷ್ಠಾನ ,ಶಸ್ತ್ರ ಸಜ್ಜಿತ ಸೈನ್ಯ ಹಾಗೂ ಏಟಿಗೆ ಎದುರೇಟು ಕೊಡುವ ತಾಕತ್ತನ್ನು ಸೇನೆಗೆ ತುಂಬವ ಮುಖಾಂತರ ವಿಶ್ವಕ್ಕೆ ಭಾರತ ಬಲಿಷ್ಠ ಸೇನೆಯನ್ನು ಹೊಂದಿದೆ ಎನ್ನುವಂತಹ ಸಂದೇಶವನ್ನು ಸಾರುವ ಕಾರ್ಯವನ್ನು ನಿರ್ವಹಿಸಿದ್ದಾರೆ, ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದಂತಹ ಹೊಸ ಶಿಕ್ಷಣ ನೀತಿಯನ್ನ ಜಾರಿಗೆ ತರುವ ಮುಖಾಂತರವಾಗಿ ದೇಶದ ಯುವಜನತೆ ಈ ಶಿಕ್ಷಣ ನೀತಿಯಿಂದಾಗಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರದೊಳಗೆ ಕೊಂಡೊಯ್ಯುವ ಕನಸು ನನಸು ಮಾಡುವ ನಿಟ್ಟಿನಲ್ಲಿ ಈ ಶಿಕ್ಷಣ ನೀತಿ ಮಹತ್ವದ ಆಗಿದೆ ಪ್ರಸ್ತುತ ದೇಶದ ಸುತ್ತಲಿರುವ ಅನೇಕ ರಾಷ್ಟ್ರಗಳು ಆಡಳಿತ ಹಾಗೂ ಆರ್ಥಿಕತೆಯ ವೈಫಲ್ಯದಿಂದಾಗಿ ದಿವಾಳಿ ಅಂಚಿನಲ್ಲಿ ಬಂದು ತಲುಪಿವೆ ಆಹಾರಕ್ಕೆ ಕಿತ್ತಾಟ ದಂಗೆಗಳು ಗಲಭೆಗಳು ನಡೆಯುತ್ತಿವೆ ಆದರೆ ಮೋದಿಯವರ ದೃಢ ನಿಲುವು ದಕ್ಷ ಆಡಳಿತ ಇಂದು ದೇಶದ ಪ್ರತಿಯೊಬ್ಬನಿಗೂ ಕೂಡ ಆಹಾರ ತಲುಪುವ ನಿಟ್ಟಿನಲ್ಲಿ ಭಾರತ ಸನ್ನದ್ಧವಾಗಿದ್ದು ಯಾವುದೇ ಪರಿಸ್ಥಿತಿ ಬಂದರೂ ನಿಭಾಯಿಸುವ ಶಕ್ತಿ ವೃದ್ಧಿಸಿಕೊಂಡಿಕೊಂಡು ಸಶಕ್ತವಾಗಿದೆ ಈ ನಿಟ್ಟಿನಲ್ಲಿ ಕಳೆದ ಒಂಬತ್ತು ವರ್ಷಗಳು ಈ ದೇಶಕ್ಕೆ ಸುಭದ್ರ ಆಡಳಿತವನ್ನು ನೀಡಿದ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಾ ಮುಂದಿನ ದಿನಮಾನಗಳಲ್ಲಿ ದೇಶಕ್ಕೆ ಹೆಚ್ಚಿನ ಕಾರ್ಯವನ್ನು ನಿರ್ವಹಿಸಲು ತಾಯಿ ಭಾರತಾಂಬೆ ಇನ್ನೂ ಹೆಚ್ಚಿನ ಶಕ್ತಿಯನ್ನು ನರೇಂದ್ರ ಮೋದಿಯವರಿಗೆ ನೀಡಲಿ ಎಂದು ಪ್ರಾರ್ಥಿಸೋಣಾ ಎಂದರು.